ಹೊನ್ನಾವರ : ತಾಲೂಕಿನ ಹೊಸಾಡ ಗ್ರಾಮದಲ್ಲಿ ಮತ್ತೊಂದು ಸ್ಫೋಟಕ ಸಾಮಗ್ರಿ ಪತ್ತೆಯಾಗಿರುವುದು ಸುತ್ತಮುತ್ತಲಲ್ಲಿ ತಲ್ಲಣ ಮೂಡಿಸಿದೆ. ವಾಲಿಬಾಲ್ ಪಂದ್ಯಾವಳಿ ನಡೆದಿದ್ದ ಸ್ಥಳದ ಸಮೀಪಲ್ಲೇ ಬೈಕಗಳನ್ನು ನಿಲ್ಲಿಸಿದ ಜಾಗದಲ್ಲಿ ಸ್ಫೋಟಕ ಪತ್ತೆಯಾಗಿದೆ, ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸರು ಮತ್ತೋರ್ವನನ್ನು ವಶಕ್ಕೆ ಪಡೆದಿದ್ದು, ಆತನನ್ನು ಪಿಟರ್ ಎಂದು ಗುರುತಿಸಲಾಗಿದೆ.

RELATED ARTICLES  ಸೂರಜ್ ನಾಯ್ಕ ಸೋನಿಗಾಗಿ ಕಾದು ಕುಳಿತ ಅಭಿಮಾನಿಗಳು: ಕಾನೂನು ಹೋರಾಟಕ್ಕೆ ಕೊನೆ ಎಂದು?

ಒಂದೆಡೆ ರೇಮಂಡ್ ನ ಬೈಕ್ ನಿಲ್ಲಿಸಿಟ್ಟ ಬಳಿ ಗರ್ನಾಲ್ ಪತ್ತೆಯಾಗಿದ್ದು ಊಹಾಪೂಹಗಳಿಗೆ ಸ್ವಲ್ಪ‌ಮಟ್ಟಿಗೆ ಬ್ರೇಕ್ ಬಿದ್ದಿತ್ತು.

ಪೆ.25 ರಂದು ರಾತ್ರಿ ವಾಲಿಬಾಲ್ ಪಂದ್ಯಾವಳಿ ಸಮಾರಂಭದ ವೇಳೆಗೆ ಸಿಡಿಮದ್ದೊಂದು ಸ್ಪೋಟಗೊಂಡಿತ್ತು. ಆ ಕಾರ್ಯಕ್ರಮದಲ್ಲಿ ಶಾಸಕ ಮಂಕಾಳು ಪಾಲ್ಗೊಂಡ ಸಂದರ್ಭದಲ್ಲೇ ಸ್ಫೋಟ ಸಂಭವಿಸಿದ್ದು, ಮೊದಲು ಪಟಾಕಿಯ ಸದ್ದು ಎಂದುಕೊಂಡಿದ್ದರು. ಆದರೆ ಅನಂತರ ಸ್ಪೋಟ ಹಿಡಿದುಕೊಂಡಿದ್ದ ರೇಮಂಡ್ ಎಂಬಾತನ ಸ್ಥಿತಿ ನೋಡಿ ಇದರ ಗಂಭಿರ್ಯತೆಯ ಅರಿವಾಗಿದೆ. ಈ ಸ್ಪೋಟವು ರಾಜಕೀಯ ದ್ವೇಷದಿಂದ ನಡೆದಿದೆ ಎಂದು ಶಾಸಕರು ಆರೋಪಿಸಿದ್ದರು. ಇದರ ಬೆನ್ನಲ್ಲೇ ಇನ್ನೊಂದು ಸ್ಪೋಟಕ ಪತ್ತೆಯಾಗಿದ್ದು, ತಾಲೂಕಿನ ಹೊಸಾಡ ಗ್ರಾಮದ ಕಡೆಗೆ ಪೊಲೀಸರು ಮತ್ತೆ ದೌಡಾಯಿಸಿದ್ದಾರೆ.

RELATED ARTICLES  ಟಿ.ಎಸ್.ಎಸ್. ಮಿನಿ ಸುಪರ್ ಮಾರ್ಕೆಟ್‍ನ ಘಟಕ ಉದ್ಘಾಟನೆ