ಕುಂದಾಪುರ: ಕಾಲೇಜು ಮುಗಿಸಿ ವಾಪಾಸ್ಸಾಗುತ್ತಿದ್ದ ಯುವತಿಯೋರ್ವಳೊಂದಿಗೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ ಅನ್ಯಕೋಮಿನ ಅಪ್ರಾಪ್ತ ಯುವಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಬಸ್ಸು ನಿಲ್ದಾಣದಲ್ಲಿ ಬುಧವಾರದಂದು ಸಂಜೆ ನಡೆದಿದೆ.

ಸಿದ್ದಾಪುರ ಮೂಲದ 17 ವರ್ಷ ಪ್ರಾಯದ ಯುವಕ ಸದ್ಯ ಪೊಲೀಸರ ವಶದಲ್ಲಿದ್ದಾನೆ.

RELATED ARTICLES  ಉತ್ತರ ಪ್ರದೇಶದ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಗೋಹತ್ಯೆ ನಿಷೇಧ ಜಾರಿಗೊಳಿಸಲಾಗುವುದು : ಅನಂತಕುಮಾರ್‌

ಘಟನೆ ಏನು?: ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಕಾಲೇಜಿನಿಂದ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಬಸ್ಸು ನಿಲ್ದಾಣದಲ್ಲಿ ಈ ಅಪ್ರಾಪ್ತ ಯುವಕ ಆಕೆಯನ್ನು ಅಡ್ದಗಟ್ಟಿ ಅಸಭ್ಯವಾಗಿ ವರ್ತಿಸಿದ್ದು ಆಕೆ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಕಿರುಚಿದ್ದಾಳೆ. ಕೂಡಲೇ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಜಮಾಯಿಸಿ ಆರೋಪಿಯನ್ನು ಹಿಡಿದು ಶಂಕರನಾರಾಯಣ ಪೊಲೀಸರ ವಶಕ್ಕೆ ನೀಡಿದ್ದಾರೆ. ಆಕೆಯ ಬಳಿ ಅಶ್ಲೀಲವಾಗಿ ಮಾತನಾಅಡಿದ್ದಲ್ಲದೇ ಫೋಟೋವನ್ನು ತೆಗೆದ ಬಗ್ಗೆ ಆಕೆ ದೂರಿದ್ದಾಳೆ.

RELATED ARTICLES  ದಿನಾಂಕ 03/06/2019ರ ದಿನ ಭವಿಷ್ಯ ಇಲ್ಲಿದೆ.

ಸದ್ಯ ಶಂಕರನಾರಾಯಣ ಪೊಲೀಸರು ನೊಂದ ಯುವತಿಯ ಹೇಳಿಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.