ಕುಮಟಾ: ತಾಲೂಕಿನ ಹಂದಿಗೋಣದ ಹಿಂದೂ ಗ್ರಾಮ ಒಕ್ಕಲಿಗ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ರಸಮಂಜರಿ ಕಾರ್ಯಕ್ರಮವನ್ನು ಹಂದಿಗೋಣದ ಶಾಲೆಯ ಹತ್ತರ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಶ್ರೀಕುಮಾರ ಸಮೂಹ ಸಂಸ್ಥೆಯ ಮಾಲೀಕರಾದ ಶ್ರೀ ವೆಂಕಟರಮಣ ಹೆಗಡೆ ಅವರು ಉದ್ಘಾಟಿಸಿದರು ನಂತರ ಮಾತನಾಡಿದ ಅವರು ಹಿಂದೂ ಗ್ರಾಮ ಒಕ್ಕಲಿಗ ಸಂಘದವರು ಸಾಧನೆಯ ಹಾದಿಯಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರೊಂದಿಗೆ ಮನರಂಜನಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿದೆ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರಿತಿಯ ಪ್ರತಿಭೆ ಅಂತಃರ್ರಗತವಾಗಿರುತ್ತದೆ. ಆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿದಾಗ ಮಾತ್ರ ಅದು ಸಮಾಜದ ಮುಂದೆ ಅನಾವರಣಗೊಳ್ಳಲು ಸಾಧ್ಯ. ಸಾಧಕರನ್ನು ಸನ್ಮಾನಿಸಿ ಗೌರವಿಸುವುದು ಸುಶಿಕ್ಷಿತ ಸಮಾಜದ ಕರ್ತವ್ಯವಾಗಿದೆ. ಇಂತಹ ಪುರಸ್ಕಾರಗಳು ಸಾಧನೆಗೈದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದರೆ ಇತರೇ ಮಕ್ಕಳಿಗೆ ಸಾಧನೆಗೈಯುವಂತೆ ಹುರಿದುಂಬಿಸುತ್ತವೆ. ವಿದ್ಯಾರ್ಥಿಗಳು ಸುಸಂಸ್ಕ್ರತರು, ಆರೋಗ್ಯವಂತರು ಆಗಿರಬೇಕು ಎಲ್ಲದಕ್ಕಿಂತ ಹೆಚ್ಚಾಗಿ ದೇಶ ಭಕ್ತರಾಗಿರಬೇಕು, ನಮ್ಮ ಧರ್ಮ ಹಾಗೂ ಸಂಸ್ಕ್ರತಿಯ ಬಗ್ಗೆ ಅಭಿಮಾನ ಬೇಳೆಸಿಕೊಳ್ಳಬೇಕು. ಸತತ ಅಭ್ಯಾಸ ಹಾಗೂ ಕಠಿಣ ಪರಿಶ್ರಮದೊಂದಿಗೆ ಮುಂದುವರೆದರೆ ಯಶಸ್ಸು ಸಾಧ್ಯ ಎಂದು ಇಂತಹ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಘಟನೆಯ ಕಾರ್ಯವನ್ನು ಶ್ಲಾಘನಿಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಮಾಜಿ ಜಿ.ಪಂ. ಸದಸ್ಯರಾಗಿರುವ ಕೃಷ್ಣ ಜೆ. ಗೌಡ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.
ಇದೇ ವೇದಿಕೆಯಯಲ್ಲಿ ಹಲವು ಪ್ರತಿಭೆಗಳಿಗೆ ಪುರಸ್ಕಾರ ಮಾಡಲಾಯಿತು.
ಈ ಸಂಧರ್ಬದಲ್ಲಿ ಕಲಬಾಗ ಗ್ರಾ.ಪಂ. ಅಧ್ಯಕ್ಷರಾದ ವಿರೂಪಾಕ್ಷ ನಾಯ್ಕ, ಮುಖ್ಯಾಧ್ಯಾಪಕರಾದ ಎಮ್.ಟಿ.ಗೌಡ, ಡಿ.ಕೆ.ಶೇಟ್ಟಿ, ವನಿತಾ ಪಟಗಾರ, ನಾಗರಾಜ ಭಟ್ಟ, ವಿನಾಯಕ ಪಟಗಾರ, ಎಮ್.ಜೆ.ಮುಕ್ರಿ, ಮಾದೇವಿ ಪಟಗಾರ, ಪಾರ್ವತಿ ಪಟಗಾರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.