ಚೆನ್ನೈ, ಫೆಬ್ರವರಿ28 : ಕಂಚಿ ಕಾಮಕೋಟಿ ಪೀಠದ ಹಿರಿಯ ಯತಿಗಳಾದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಅವರು ಬುಧವಾರ ಬೆಳಗ್ಗೆ ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಅವರು ಪಾರ್ಶ್ವವಾಯುಗೆ ತುತ್ತಾಗಿದ್ದರು. ಇದಕ್ಕಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ನೀಡುತ್ತಿದ್ದ ವೇಳೆ ಹೃದಯಾಘಾತವಾಗಿತ್ತು. ಈ ಎರಡು ಖಾಯಿಲೆಗೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ

ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ವಿಧಿವಶರಾಗಿದ್ದಾರೆ.

RELATED ARTICLES  ಮೀನುಗಾಗರೇ ಹುಷಾರ್!! ಇನ್ನು ನೈಟ್ ಫಿಶಿಂಗ್ ಮಾಡಲೇ ಬಾರದು.!!

ಶ್ರೀ ರಾಮಚಂದ್ರ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ತೀವ್ರ ನಿಶ್ಶಕ್ತಿ ಹಿನ್ನೆಲೆಯಲ್ಲಿ 82 ವರ್ಷ ವಯಸ್ಸಿನ ಜಯೇಂದ್ರ ಸರಸ್ವತಿ ಶ್ರೀಗಳನ್ನು ಭಾನುವಾರ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು.

ನೆಲ್ಲೂರು ನಗರದ ದೇವಸ್ಥಾನವೊಂದಕ್ಕೆ ತೆರಳುತ್ತಿದ್ದ ಶ್ರೀಗಳು ವಾಹನ ಏರುವಾಗ ಪ್ರಜ್ಞೆತಪ್ಪಿ ಬಿದ್ದಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ಅವರ ರಕ್ತದಲ್ಲಿ ಸಕ್ಕರೆಯ ಮಟ್ಟ ಕುಸಿದಿತ್ತು. ಆದ ಕಾರಣ ಶ್ರೀಗಳನ್ನು ಚೆನ್ನೈ ಅಥವಾ ಬೇರೆಡೆಯ ಆಸ್ಪತ್ರೆಗೆ ವರ್ಗಾಯಿಸಬೇಕೆ ಎಂಬುದರ ಕುರಿತು ಆಲೋಚನೆ ನಡೆದಿತ್ತು ಎಂದು ನೆಲ್ಲೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ವಿ.ಎಸ್‌. ರಾಮಕೃಷ್ಣ ತಿಳಿಸಿದರು.

RELATED ARTICLES  ಶ್ರೀ ರಾಮಚಂದ್ರ ಪುರಮಠದಲ್ಲಿ ನೆಡೆಯಿತು - 'ವೃಕ್ಷ-ಜನನಿ' ಕಾರ್ಯಕ್ರಮ

ಮೂರು ದಿನಗಳ ಹಿಂದೆ ನೆಲ್ಲೂರ್ ಗೆ ಆಗಮಿಸಿದ್ದ ಶ್ರೀಗಳು, ಚಂದ್ರಮೌಳೀಶ್ವರ ಸ್ವಾಮಿ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಿತ್ತು ಯಾವುದಕ್ಕೂ ಆಗಮಿಸಲು ಅವರಿಗೆ ಸಾಧ್ಯವಾಗಲಿಲ್ಲ. ತೀರಾ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದ ಕಾರಣ ನಿಧನ ಹೊಂದಿದ್ದಾರೆ.