ತೂಕ ಇಳಿಕೆ ಎಂಬುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಸವಾಲಿನ ವಿಷಯವಾಗಿ ಪರಿಣಮಿಸಿ. ಬಾಯಿ ರುಚಿಯನ್ನು ಇಷ್ಟಪಡುವ ಜನರು, ಹೆಚ್ಚು ತಿಂದರೂ ತೂಕ ಮಾತ್ರ ಕಡಿಮೆ ಇರಬೇಕೆಂದು ಇಚ್ಛಿಸುತ್ತಾರೆ.
ಯಾವುದೇ ತೂಕ ಕಡಿಮೆ ಮಾಡಿಕೊಳ್ಳುವ ಯೋಜನೆಯಲ್ಲೂ ಆರೋಗ್ಯಕರವಾದ ಡಯಟ್ ಅತೀ ಮುಖ್ಯವಾಗಿರುತ್ತದೆ. ನೀವು ಯಾವ ರೀತಿಯ ಆಹಾರವನ್ನು ಸೇವಿಸುತ್ತೀರಾ ಎಂಬುದರ ಆಧಾರದ ಮೇಲೆ ತೂಕ ಏರಿಕೆ ಹಾಗೂ ಇಳಿಕೆ ನಿರ್ಧರಿತವಾಗಿರುತ್ತದೆ.
ಹೆಚ್ಚು ಡಯಟ್ ಮಾಡಿದಾಕ್ಷಣ ತೂಕ ಕಡಿಮೆಯಾಗುತ್ತದೆ ಎಂಬುದು ತಪ್ಪು ಕಲ್ಪನೆಯಾಗುತ್ತದೆ. ಡಯಟ್ ನ್ನು ಪೂರ್ತಿಯಾಗಿ ಸರಿಯಾದ ವಿಧಾನ ಹಾಗೂ ಆರೋಗ್ಯಕರವಾಗಿ ಮಾಡಿದರೆ ಮಾತ್ರ ತೂಕ ಇಳಿಕೆಯಾಗಲು ಸಾಧ್ಯವಾಗುತ್ತದೆ.
ದಿನದಲ್ಲಿ ಸಣ್ಣ ಪ್ರಮಾಣದ ಆರೋಗ್ಯಕವಾದ ಊಟವನ್ನು 6 ಬಾರಿ ಮಾಡಿದರೆ ದೇಹದಲ್ಲಿರುವ ಕೊಬ್ಬು ಕರಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಟೆರ್ರಿಆನ್123 ಡೈಯಟ್ ಪ್ಲಾನ್ ಸಂಸ್ಥಾಪಕಿ ಟೆರ್ರಿ-ಅನ್ ನುನ್ಸ್ ಅವರು ಆಧ್ಯಯನ ಕುರಿತಂತೆ ಮಾಹಿತಿ ನೀಡಿದ್ದು, ಪ್ರತಿ ದಿನ 6 ಬಾರಿ ಆಹಾರವನ್ನು ಸೇವನೆ ಮಾಡುವುದರಿಂದ ಆರೋಗ್ಯಕರವಾಗಿ ತೂಕವನ್ನು ಇಳಿಕೆ ಮಾಡಬಹುದು ಎಂದು ಹೇಳಿದ್ದಾರೆ.
ಹೆಚ್ಚು ತಿಂದರೂ ತೂಕ ಮಾತ್ರ ಕಡಿಮೆಯಾಗಬೇಕು ಎಂದು ಆಲೋಚಿಸುವ ಜನರಿಗೆ ಆಹಾರ ತಜ್ಞೆ ಟೆರ್ರಿ-ಅನ್ ಅವರು 7 ದಿನಗಳ ಆಹಾರ ಪಟ್ಟಿಯನ್ನು ತಿಳಿಸಿದ್ದಾರೆ.
ಪ್ರತಿ ನಿತ್ಯ ಸಣ್ಣ ಪ್ರಮಾಣದ ಆಹಾರವನ್ನು ಸೇವನೆ ಮಾಡುವುದರಿಂದ ಇದು ಜೀರ್ಣಿಸಿಕೊಳ್ಳಲು ಜೀರ್ಣಾಂಗ ವ್ಯವಸ್ಥೆಗೆ ಸುಲಭವಾಗಿರುತ್ತದೆ. ಒಮ್ಮೆಲೆ ಅತೀ ಹೆಚ್ಚು ಆಹಾರವನ್ನು ಸೇವನೆ ಮಾಡಿದರೆ, ಇದು ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆಯನ್ನೊಡ್ಡುತ್ತದೆ. ಪ್ರಮುಖವಾಗಿ ಬೊಜ್ಜು ಹೆಚ್ಚಿರುವ ಜನರು ಒಮ್ಮೆಲೆ ಹೆಚ್ಚೆಚ್ಚು ಆಹಾರ ಸೇನೆ ಮಾಡುವುದು ಜೀರ್ಣಾಂಗ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ.
ಒಮ್ಮೆಲೆ ಹೆಚ್ಚೆಚ್ಚು ಆಹಾರವನ್ನು ಸೇವಿಸುವ ಜನರಿಗೆ ತಮ್ಮ ದೇಹದಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಕ್ಯಾಲೋರಿ ಎಷ್ಟು ಸೇರುತ್ತದೆ ಎಂಬುದು ತಿಳಿಯುವುದಿಲ್ಲ. ದಿನಕ್ಕೆ ಆರು ಬಾರಿ ಸಣ್ಣ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವುದರಿಂದ ಅತಿಯಾಗಿ ತಿನ್ನುವ ಅಭ್ಯಾಸ ತಪ್ಪಿಸಲು ಸಹಾಯಕವಾಗಿರುತ್ತದೆ.
ಸಣ್ಣ ಪ್ರಮಾಣದ ಆಹಾರವನ್ನು ಆಗಾಗ ಸೇವಿಸುವುದರಿಂದ ಹಸಿವು ಕೂಡ ಕಾಣಿಸಿಕೊಳ್ಳುವುದಿಲ್ಲ.
ಸಣ್ಣ ಪ್ರಮಾಣದ ಆಹಾರವನ್ನು ಆಗಾಗಲೇ ಸೇವಿಸಿರುವುದರಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಕೂಡ ಸ್ಥಿರವಾಗಿರುತ್ತದೆ. ಅಲ್ಲದೆ, ದೇಹ ದುರ್ಬಲಗೊಳ್ಳುವುದಿಲ್ಲ.
ಆಹಾರವನ್ನು ತಿನ್ನದೇ ಇರುವುದು, ಸಮಯವಲ್ಲದ ಸಮಯಕ್ಕೆ ತಿನ್ನುವುದು ಕೂಡ ದೇಹದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ.
ದಿನದಲ್ಲಿ ಆರು ಬಾರಿ ಆಹಾರವನ್ನು ನಿಯಂತ್ರಣದಲ್ಲಿ ಸೇವಿಸುತ್ತಿರುವುದರಿಂದ ನಿಮ್ಮ ದೇಹಕ್ಕೆ ಎಷ್ಟು ಆಹಾರದ ಅಗತ್ಯವಿದೆ ಎಂಬುದು ತಿಳಿಯುತ್ತದೆ ಹಾಗೂ ಇದು ದೇಹದ ತೂಕವನ್ನು ನಿಯಂತ್ರಣದಲ್ಲಿರಿಸುತ್ತದೆ.
ಸಮಯಕ್ಕೆ ಸರಿಯಾಗಿ ಹಾಗೂ ನಿಯಂತ್ರಣದಲ್ಲಿ ಆಹಾರ ಸೇವನೆ ಮಾಡುವುದರಿಂದ ದೇಹಕ್ಕೆ ಅಗತ್ಯವಿಲ್ಲದ ಕೊಬ್ಬು ಕೂಡ ನೈಸರ್ಗಿಕವಾಗಿ ಕರಗುತ್ತದೆ.
ಮೇಲಿನ ಈ ಎಲ್ಲಾ ಅಂಶಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡುವುದರಿಂದ 7 ದಿನಗಳಲ್ಲಿ 3 ಕೆಜಿಯಷ್ಟು ತೂಕವನ್ನು ಇಳಿಕೆ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ.