ನವದೆಹಲಿ: ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಅವರು, ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಶುಭಾಶಯಗಳು. ಎಲ್ಲಾ ವಿಜ್ಞಾನ ಪ್ರಿಯರಿಗೆ ನಾನು ಶುಭಕೋರುತ್ತೇನೆ. ಅವರ ವೈಜ್ಞಾನಿಕ ಕೆಲಸಗಳನ್ನು ವಿಸ್ತರಿಸಲು ಅವರಿಗೆ ಶುಭಕೋರುತ್ತೇನೆ. ವಿಜ್ಞಾನಿಗಳ ಬಗ್ಗೆ ಭಾರತಕ್ಕೆ ಅಪಾರವಾದ ಹೆಮ್ಮೆಯಿದೆ. ಕಳೆದ ಮನ್ ಕಿ ಬಾತ್ ನಲ್ಲಿ ವಿಜ್ಞಾನ ಬಗ್ಗೆ ಮಾತನಾಡಿದ್ದೇನೆ ಎಂದರು.
ತಮ್ಮ ಮನ್ ಕಿ ಬಾತ್ ನ 41ನೇ ಆವೃತ್ತಿಯಲ್ಲಿ ಕಳೆದ 25ರಂದು ಮಾತನಾಡಿದ ಪ್ರಧಾನಿ ಮೋದಿ, ಭೌತವಿಜ್ಞಾನಿ ಸಿ.ವಿ.ರಾಮನ್ ಸೇರಿದಂತೆ ವಿಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆದಾರರಿಗೆ ನಮನಗಳು. ಇವರ ಗೌರವಾರ್ಥ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. ಇಡೀ ವಿಜ್ಞಾನ ಸಮುದಾಯಕ್ಕೆ ಅಭಿನಂದನೆಗಳು ಎಂದಿದ್ದರು.
ವೈದ್ಯಕೀಯ, ಔಷಧಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದವರನ್ನು ನೆನಪಿಸಿಕೊಂಡರು. ಸರ್. ಸಿ.ವಿ.ರಾಮನ್ ಅವರು ಇದೇ ದಿನ ಬೆಳಕಿನ ಹರಡುವಿಕೆಯ ರಾಮನ್ ಎಫೆಕ್ಟ್ ನ್ನು ಕಂಡುಹಿಡಿದಿದ್ದರು. ಇದರ ಅಂಗವಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ.
ಸರ್ ಸಿ.ವಿ.ರಾಮನ್ ಅವರಿಗೆ 1930ರಲ್ಲಿ ಭೌತಶಾಸ್ತ್ರದಲ್ಲಿ ರಾಮನ್ ಎಫೆಕ್ಟ್ ಅಧ್ಯಯನಕ್ಕಾಗಿ ನೊಬೆಲ್ ಪಾರಿತೋಷಕ ಲಭಿಸಿತ್ತು.

RELATED ARTICLES  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1ರ ಫಲಿತಾಂಶ ಘೋಷಣೆ.