ಅಶೋಕೆಯಲ್ಲಿ ಅಷ್ಟಬಂಧ ಕಾರ್ಯಕ್ರಮ.
ಇದೆ ಬರುವ ಜೂನ್ 19.06.2017 ರಿಂದ 29.06.2017 ರವರೆಗೆ ಶ್ರೀ ರಾಮಚಂದ್ರಾಪುರ ಮಠದ ಮೂಲಮಠ ಗೋಕರ್ಣದ ಅಶೋಕೆಯಲ್ಲಿ ನಡೆಯಲಿರುವ ಶ್ರೀ ಮಲ್ಲಿಕಾರ್ಜುನ ದೇವರ ಅಷ್ಟಬಂಧ ಪುನಃ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದ ಕುರಿತಾಗಿ ಆಮಂತ್ರಣ ಮತ್ತು ಕಾರ್ಯಕ್ರಮದ ವಿವರ ನೀಡಲು . ಕುಮಟಾದ ನಾದಶ್ರೀ ಕಲಾ ಕೇಂದ್ರದಲ್ಲಿ ಸುದ್ದಿಗೋಷ್ಟಿ ನಡೆಯಿತು.
ಜೂನ್ 19 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ದಿವ್ಯ ಸಾನಿಧ್ಯ ವಹಿಸುವರು.
19.06.2017 ಸೋಮವಾರ ಬೆಳಿಗ್ಗೆ 7ರಿಂದ ಗುರುವಂದನೆ, ಸಾಮೂಹಿಕ ಪ್ರಾರ್ಥನೆ, ಆಲಯ ಪರಿಗ್ರಹ,ಮಹಾ ಸಂಕಲ್ಪ, ಗಣಪತಿಪೂಜೆ,ನಾಂದಿ ಕಾರ್ಯಗಳು ನಡೆಯಲಿವೆ.
ಸಾಯಂಕಾಲ 6 ರಿಂದ ಮಂಟಪ ಸಂಸ್ಕಾರ, ವಾಸ್ತುಹವನ,ಧಾನ್ಯಾಧಿವಾಸ,ವಾಸ್ತುಬಲಿ ನಡೆಯಲಿವೆ.
20.06.2017 ಮಂಗಳವಾರ ಗಣಪತಿ ಹವನ,ಶಾಂತಿಪಾಠ,ಪುಷ್ಪಾಧಿವಾಸ ಇತ್ಯಾದಿಗಳು
21.06.2017 ಬುಧವಾರ ಪುರುಷಸೂಕ್ತ ಹವನ ಶಾಂತಿ ಪಾಠ ನಡೆಯಲಿದೆ.
22.06.2017 ಶ್ರೀದೇವರಿಗೆ ಫಲಾದಿವಾಸ, ಸೌರ ಹವನ
23.06.2017 ಶ್ರೀ ಸೂಕ್ತ ಹವನ, ದುರ್ಗಾ ಹವನ, ದೇವರಿಗೆ ವಸ್ತ್ರಾಧಿವಾಸ
24.06.2017 ಶನಿವಾರ ಅಘೋರಾಸ್ತ್ರ ಹವನ ಶಾಂತಿಪಾಠ,ದೇವರಿಗೆ ಶಯ್ಯಾಧಿವಾಸ ಕಾರ್ಯಕ್ರಮ ನಡೆಯಲಿದೆ.
ಇದೇ ದಿನ ಮಧ್ಯಾಹ್ನ 4:00 ಗಂಟೆಗೆ ಶ್ರೀ ಸಂಸ್ಥಾನದ ಪುರಪ್ರವೇಶ ನಡೆಯಲಿದೆ.
25.06.2017 ಭಾನುವಾರ ಮತ್ತು 26.06.2017 ಸೋಮವಾರ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಶ್ರೀಗಳ ಉಪಸ್ಥಿತಿಯಲ್ಲಿ ಧರ್ಮಸಭೆ.ವೇದೋಜ್ಜೀವನಮ್ ಮತ್ತು ಸಂಧ್ಯಾ ಮಂಗಲ ಕಾರ್ಯಕ್ರಮ ನಡೆಯಲಿದೆ.
27.06.2017 ರಿಂದ 29.06.2017ರ ವರೆಗೆ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ ರಾಮಕಥಾ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ವೈದಿಕ ವರ್ಗದವರು ಹಾಗೂ ನಾಡಿನ ಯತಿವರೇಣ್ಯರು ದಿವ್ಯ ಸಾನಿಧ್ಯ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಶ್ರೀ ಸಂಕಲ್ಪಿತ ೧ ಕೋಟಿ ಶಿವ ಪಂಚಾಕ್ಷರೀ ಜಪಾನುಷ್ಟಾನದ ಸಮರ್ಪಣೆ ನಡೆಯಲಿದೆ.
ಪತ್ರಿಕಾಗೋಷ್ಟಿಯಲ್ಲಿ ಲೋಕಾರ್ಪಣ ಸಮೀತಿಯ ಅಧ್ಯಕ್ಷರಾದ ಆರ್.ಎಸ್ ಹೆಗಡೆ ಹರಗಿ. ಕಾರ್ಯದರ್ಶಿ ಗಣೇಶ ಭಟ್ಟ.ಸಮೀತಿಯ ಗೌರವಾಧ್ಯಕ್ಷ ಡಿ.ಡಿ ಶರ್ಮ, ಗಣಪತಿ ಹೆಗಡೆ ಮೋಗಿಮನೆ, ಶ್ರೀಕಾಂತ ಪಂಡಿತ, ಸುಬ್ರಾಯ ಭಟ್ಟ,ಜಿ ಎಸ್ ಹೆಗಡೆ, ಕಿಶನ್ ವಾಳ್ಕೆ, ಸಂಧ್ಯಾ ಭಟ್ಟ, ಲಲಿತಾ ಭಟ್ಟ , ಅರುಣ ಹೆಗಡೆ ಕುಮಟಾ ಹಾಗೂ ದೇವಾಲಯದ ಪುನಃ ನಿರ್ಮಾಣ ಸಮೀತಿಯ ಸದಸ್ಯರು ಹಾಜರಿದ್ದರು.