ಹೊನ್ನವರ: ತಾಲೂಕಿನ ರಾಘವೇಂದ್ರ ಕೆ.ಪಿ. ಚಾರೋಡಿ ಮೇಸ್ತ ಸಮಾಜದ ಆಶ್ರಯದಲ್ಲಿ ತಾಲೂಕಿನ ಸಂತ ಅಂತೋನಿ ಪ್ರೌಢ ಶಾಲೆಯ ಮೈದಾನದಲ್ಲಿ 2 ದಿನಗಳ ಕಾಲ ಚಾರೋಡಿ /ಮೇಸ್ತ ಸಮಾಜ ಬಾಂಧವರಿಗಾಗಿ ರಾಜ್ಯ ಮಟ್ಟದ ಕ್ರಿಕೇಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಈ ಸಮಾಜದವರು ಶ್ರಮ ಜೀವಿಗಳು ಕೆಲವರು ಮೀನುಗಾರಿಕೆ ಅವಲಂಬಿಸಿದರೆ ಕೆಲವರು ಆಚಾರಿ ವೃತ್ತಿಯನ್ನು ಕೈಗೊಳ್ಳುವುದರ ಮೂಲಕ ಕಷ್ಟಮಯ ಜೀವನ ಸಾಗಿಸುತ್ತಿದ್ದಾರೆ. ಈ ಸಮಾಜದವರು ಉತ್ತಮ ಸಂಘಟನೆಯೊಂದಿಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಮುನ್ನಡೆಯಬೇಕಾಗಿದೆ. ಇತ್ತಿಚ್ಚಿನ ದಿನಗಳಲ್ಲಿ ಮತ್ಸ್ಯಕ್ಷಾಮದಿಂದಾಗಿ ಈ ಸಮುದಾಯದವರು ತೀರಾ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸರಕಾರ ಈ ಸಮುದಾಯವರ ಅಭಿವೃದ್ಧಿಗಾಗಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ಇಂತಹ ಸಮುದಾಯದವರು ರಾಜ್ಯಮಟ್ಟದ ಪಂದ್ಯಾವಳಿ ಹಮ್ಮಿಕೊಂಡಿರುವುದು ಅಭಿನಂದನಾರ್ಹ. ಯುವ ಶಕ್ತಿ ನಮ್ಮ ದೇಶದ ಶಕ್ತಿಯಾಗಿದೆ. ಯುವಕರು ನಮ್ಮ ದೇಶ, ಸಂಸ್ಕ್ರತಿ ಹಾಗೂ ಧರ್ಮದ ಬಗ್ಗೆ ಗೌರವ ಹಾಗೂ ಅಭಿಮಾನವನ್ನು ಹೊಂದಿರಬೇಕು. ಎಂದು ಕಿವಿಮಾತು ಹೇಳಿ ಈ ಸಮಾಜದ ಅಭಿವೃದ್ಧಿಯ ನಿಟ್ಟಿನಲ್ಲಿ ಸದಾ ಪ್ರಯತ್ನಿಸುವುದಾಗಿ ನುಡಿದರು.

RELATED ARTICLES  ಅ.8 ರಿಂದ ಹುಬ್ಬಳ್ಳಿಯಲ್ಲಿ ಪರ್ತಗಾಳಿ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ

ಅಧ್ಯಕ್ಷತೆ ವಹಿಸಿದ ಬಿ.ಜೆ.ಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಬಿ. ನಾಯ್ಕ ಅವರು ಮಾತನಾಡಿ ಅಚ್ಚು ಕಟ್ಟಾಗಿ ಈ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯನ್ನು ಶ್ಲಾಘಿಸಿ ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗುತ್ತಿರಲಿ ಎಂದು ಹಾರೈಸಿದರು.

RELATED ARTICLES  ಜನಮೆಚ್ಚುಗೆ ಪಡೆದ "ದೀಪಾವಳಿ ಮೇಳ"

ಈ ಸಂಧರ್ಭದಲ್ಲಿ ಬಿಜೆ.ಪಿ ಪ್ರಮುಖರಾದ ಸೂರಜ್ ನಾಯ್ಕ ಸೋನಿ, ದಿನಕರ ಶೆಟ್ಟಿ, ವೆಂಕಟರಮಣ ಹೆಗಡೆ, ಚಾರೋಡಿ ಮೇಸ್ತ ಸಮಾಜದ ರಾಜ್ಯಾಧ್ಯಕ್ಷರಾ ಕೃಷ್ಣಮೂರ್ತಿ ಆಚಾರ್ಯ, ಸಾಗರ, ದತ್ತಾತ್ರೇಯ ಎಲ್.ಮೇಸ್ತ,ಕೆ.ಎನ್.ಆಚಾರ್ಯ,ರಾಮಾ ಮೇಸ್ತ, ಶ್ರೀಧರ ಆಚಾರ್ಯ,ಸೋಮ ಪಿ.ಮೇಸ್ತ, ಸೇರಿದಂತೆ ಹಲವರು ಉಪಸ್ಥಿತರಿದ್ದರು.