ಶಿವಮೊಗ್ಗ: ಜೋಗ ಜಲಪಾತದ ಬುಡದಲ್ಲಿ ನಾಪತ್ತೆಯಾಗಿದ್ದ ಕೋತಿ ರಾಮ ಅಲಿಯಾಸ್ ಜ್ಯೋತಿರಾಜ್ ಅವರು ಬುಧವಾರ ಪತ್ತೆಯಾಗಿದ್ದಾರೆ.
ರಾಜಾಫಾಲ್ಸ್ ಕೆಳಗೆ ಸಿಲುಕಿಕೊಂಡಿದ್ದ ಜ್ಯೋತಿರಾಜ್ ಅವರನ್ನು ರಕ್ಷಣಾ ತಂಡಗಳು ಇಂದು ಬೆಳಿಗ್ಗೆ ರಕ್ಷಣೆ ಮಾಡಿದ್ದಾರೆಂದು ತಿಳಿದುಬಂದಿದೆ.
ರಾಜಾಫಾಲ್ಸ್ ಕೆಳಗೆ ನೀರಿನಿಂದ ಸುಮಾರು 100 ಅಡಿ ಮೇಲ್ಭಾಗದಲ್ಲಿ ಬಂಡೆಗಳ ನಡುವೆ ಪೊಟರೆಯೊಳಗೆ ಜ್ಯೋತಿರಾಜ್ ಅವರು ಆಶ್ರಯ ಪಡೆದುಕೊಂಡಿದ್ದರು. ನಂತರ ರಕ್ಷಣಾ ತಂಡಗಳು ಅವರನ್ನು ಸುರಕ್ಷಿತ ತಾಣಕ್ಕೆ ಕರೆತಂದಿದ್ದಾರೆಂದು ವರದಿಗಳು ತಿಳಿಸಿವೆ.
ಜೋಗ ಜಲಪಾತಕ್ಕೆ ಧುಮುಕಿ ಆತ್ಮಹತ್ಯೆ ಮಾಡಿಕೊಕಂಡಿದ್ದ ಯುವಕನೊಬ್ಬನ ಮೃತದೇಹವನ್ನು ಹುಡುಕುವ ಸಲುವಾಗಿ ನಿನ್ನೆ ಮಧ್ಯಾಹ್ನ ಜ್ಯೋತಿರಾಜ್ ಅವರು ಜಲಪಾತಕ್ಕೆ ಇಳಿದಿದ್ದರು. ಹಲವು ಗಂಟೆಗಳಾದರೂ ಅವರು ಮತ್ತೆ ಮೇಲಕ್ಕೆ ಬಂದಿರಲಿಲ್ಲ. ಹೀಗಾಗಿ ಆಂತಕ ಸೃಷ್ಟಿಯಾಗಿತ್ತು.
ಶವವನ್ನು ಹುಡುಕುವ ಹಂತದಲ್ಲಿ ಜ್ಯೋತಿರಾಜ್ ಅವರ ಎಡಗೈ ತೋಳಿಗೆ ಪೆಟ್ಟಾಗಿದ್ದು, ನೋವು ತೀವ್ರವಾಗಿ ಕಾಡಿದೆ. ಅಲ್ಲದೆ, ಬಂಡೆಗಳಲ್ಲಿ ಪಾಚಿ ಹೆಚ್ಚಾಗಿದ್ದರಿಂದ ಜಾರುತ್ತಿತ್ತು. ಮಬ್ಬು ಕವಿದ ಕಾರಣ ಈ ಹಂತದಲ್ಲಿ ಸಾಹಸ ಬೇಡವೆಂದು ಪೊಟರೆಯೊಳಗೆ ಆಶ್ರಯ ಪಡೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ.

RELATED ARTICLES  ಅತಿವೃಷ್ಟಿಯಿಂದಾಗಿ ತತ್ತರಿಸಿ ಹೋಗಿರುವ ಕೇರಳ ಅರಬ್ ನಿಂದ 700 ಕೋಟಿ ರೂ ನೆರವು!