ಯಲ್ಲಾಪುರ ; ಕಳೆದ ಇಪ್ಪತೈದು ವರ್ಷದಿಂದ ಯಲ್ಲಾಪುರ ಜಿಲ್ಲಾ ಪಂಚಾಯತ ಎಂಜಿಯರಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿರುವ ಕೆಲಸ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ರಾಜೇಂದ್ರ ನಾಯ್ಕ ಅವರಿಗೆ ಇಲಾಖೆ ಹಾಗೂ ಗುತ್ತಿಗೆದಾರರ ವತಿಯಿಂದ ಬುಧವಾರ ಹೃತ್ಪೂರ್ವಕವಾಗಿ ಸನ್ಮಾನಿಸಿ ಬಿಳ್ಕೊಡಲಾಯಿತು.
ಇಲಾಖೆಯ ಪರವಾಗಿ ಸನ್ಮಾನಿಸಿ ಮಾತನಾಡಿದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಲ್.ನಾಯ್ಕ, ರಾಜೇಂದ್ರ ನಾಯ್ಕ ಸೇವೆಯಿಂದ ನಿವೃತ್ತಿಯಾಗಿದ್ದಾರೆ, ಅವರು ಇಷ್ಟ ಪಟ್ಟರೆ ಅವರ ಅನುಭವ ಜ್ಣಾನವನ್ನು ಮುಂದೆಯೂ ಇಲಾಖೆಗೆ ಅವರ ಸೇವೆ ಪಡೆಯಲಾಗುವುದು. ಜನತೆ ಶ್ಲಾಘಿಸುವ ಕೆಲಸ ಮಾಡಿರುವ ರಾಜೇಂದ್ರ ಅವರಿಗೆ ಕುಟುಂಬದವರ ತ್ಯಾಗ ಹಾಗೂ ಬೆಂಬಲವೂ ಕಾರಣವಾಗಿದೆ ಎಂದರು
ಸನ್ಮಾನ ಸ್ವೀಕರಿಸದ ರಾಜೇಂದ್ರ ನಾಯ್ಕ ಅಭಿಪ್ರಾಯಪಟ್ಟು ತಾವು ಸೇವೆಗೆ ಸೇರಿದ ಸಂದರ್ಭದಲ್ಲಿ ಸಹಕಾರ ನೀಡಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಇಲ್ಲಿಯವರೆಗೂ ಸಹಕಾರ ನೀಡಿದ ಎಲ್ಲ ಅಧಿಕಾರಿಗಳು ಸಿಬ್ಬಂದಿಗಳು ಗುತ್ತಿಗೆದಾರರ ಸಹಕಾರ ಮಾರ್ಗದರ್ಶನ ನನ್ನನ್ನು ಇಲ್ಲಿಯವರೆಗೆ ಬೆಳೆಯಲು ಅವಕಾಶ ನೀಡಿತು. ಇದೇ ಸಂದರ್ಭದಲ್ಲಿ ಎಲ್ಲರಿಗೂ ದನ್ಯವಾದ ಅರ್ಪಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಶಿವಾನಂದ ಮಾತನಾಡಿ, ರಾಜೇಂದ್ರ ನಾಯ್ಕ ಅಂತಹ ಆಲ್ ರೌಂಡರ್ ಕೆಲಸಗಾರರ ಅವಶ್ಯಕತೆ ಎಲ್ಲ ಇಲಾಖೆಯಲ್ಲಿದೆ. ರಾಜೇಂದ್ರ ನಾಯ್ಕ ಮಾದರಿಯಲ್ಲಿ ಎಲ್ಲ ಸಿಬ್ಬಂದಿಗಳು ಕೆಲಸ ಮಾಡಲು ಪ್ರಯತ್ನಿಸಬೇಕೆಂದರು.
ಎಂಜಿನಿಯರ ಅಜೀಜ ಅಬ್ದುಲಲಿ ಮಾತನಾಡಿ, ರಾಜೇಂದ್ರ ಅವರಲ್ಲಿ ಕೆಲಸಕ್ಕೆ ಸೇರಿದ್ದ ಸಂದರ್ಭದಲ್ಲಿರುವ ಉತ್ಸಾಹ ನಿವೃತ್ತಿಯ ಕೊನೆಯ ದಿನದವರೆಗೆ ಉಳಿಸಿಕೊಂಡಿದ್ದಾರೆ. ಕಚೇರಿಯಲ್ಲಿ ಆಲ್ ರೌಂಡರ್ ಆಗಿ ಕೆಲಸ ಮಾಡುತ್ತಿದ್ದರು. ತಾಳ್ಮೆ ಹಾಗೂ ಶ್ರದ್ಧೆಯಿಂದ ಕೆಲಸ ಮಾಡಿ ಕಚೇರಿಯ ಗೌರವ ಹೆಚ್ಚಲು ಕಾರಣರಾಗಿದ್ದಾರೆ ಎಂದರು.
ಗುತ್ತಿಗೆದಾರ ಕುಪ್ಪಯ್ಯ ಪೂಜಾರಿ, ರಾಜೇಂದ್ರ ನಾಯ್ಕ ಹಣ ಗಳಿಸುವುದಕ್ಕಿಂತ ಜನರನ್ನು ಗಳಿಸಿದ್ದಾರೆ ಎಂದರು.
ಚಂದಗುಳಿ ಗ್ರಾ.ಪಂ ಸದಸ್ಯ ಅರ್ ಎಸ್ ಭಟ್ ಮಾತನಾಡಿ, ವಯೋ ನಿವೃತ್ತಿ ಅನ್ನುವುದಕ್ಕಿಂತ ಅವರಲ್ಲಿರುವ ಶಕ್ತಿಯನ್ನು ಗಮನಿಸಿ ನಿವೃತ್ತಿ ಕೊಡಬೇಕು. ಇನ್ನು ಹತ್ತು ವಗರ್ಷ ಸೇವೆ ಸಲ್ಲಿಸುವಷ್ಟು ಶಕ್ತಿ ರಾಜೇಂದ್ರ ನಾಯ್ಕ ಅವರಲ್ಲಿದೆ ಎಂದರು.
ಗುತ್ತಿಗೆದಾರರಾದ ಗಣಪತಿ ಮುದ್ದೇಪಾಲ, ವಿ ಎಂ ಹೆಗಡೆ, ಮಂಜುನಾಥ ಪಾಟೀಲ, ಕಿರವತ್ತಿ ಗ್ರಾ.ಪಂ ಪಿಡಿಓ ಯೋಗೇಂದ್ರ, ಎಂಜಿನೀಯರ್ ಮೀನಾಕ್ಷಿ ರಾಜೇಂದ್ರ ಕುರಿತು ಮಾತನಾಡಿದರು.
ಕಚೇರಿ ಸಿಬ್ಬಂದಿ ರಾಘವೇಂದ್ರ ಮೊಗೇರ್ ಕಾರ್ಯಕ್ರಮ ನಿರ್ವಹಿಸಿದರು.