ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆಯೆಂದು ಘೋಷಿಸಬೇಕು ಎಂದು ಒತ್ತಾಯಿಸಿ, ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆಯ ಸದಸ್ಯರು ಬುಧವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ವೇದಿಕೆಯ ಅಧ್ಯಕ್ಷರಾದ ದಿಯೋಗ ಸಿದ್ದಿ ನೇತೃತ್ವದಲ್ಲಿ ಮೆರವಣಿಗೆ ಬಂದು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲೆಯನ್ನು ಬುಡಕಟ್ಟು ಜಿಲ್ಲೆಯನ್ನಾಗಿ ಮಾಡಿ ಗಿರಿಜನರ ರಕ್ಷಣೆಯಾಗಬೇಕು. ಸಮಾಜ ಕಲ್ಯಾಣ ಸಚಿವರು ತಾಲ್ಲೂಕಿನ ಬುಡಕಟ್ಟು ಜನರ ವಾಡಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿ ₹52 ಕೋಟಿ ಪ್ಯಾಕೇಜ್ ಅನ್ನು ಸಿದ್ದಿ ಜನಾಂಗದ ಅಭಿವೃದ್ಧಿಗೆ ಘೋಷಣೆ ಮಾಡಿದ್ದರು. ಅದು ಅನುಷ್ಠಾನಗೊಳ್ಳಬೇಕು. ಜಿಲ್ಲೆಯ ಸಿದ್ದಿ ಜನಾಂಗವನ್ನು ಮೂಲ ನಿವಾಸಿಯೆಂದು ಘೋಷಿಸಬೇಕು, ರಾಜ್ಯ ಪರಿಶಿಷ್ಟ ಪಂಗಡ ವರ್ಗಗಳ ನಾಗರಿಕ ಹಕ್ಕು ನಿರ್ದೇಶನಾಲಯ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ನಜೀರ ಸಿದ್ದಿ, ಬಿಯಾಮಾ ಸಿದ್ದಿ, ಅಂತೋನ್ ಸಿದ್ದಿ, ಸಿಮಾಂವ ಸಿದ್ದಿ, ಸಂಜೀವ ಸಿದ್ದಿ, ನತಾಲಿನ ಸಿದ್ದಿ, ಯಾಕೂಬ ಸಿದ್ದಿ, ಸಲೀಮ ಸಿದ್ದಿ, ಲಾರೆನ್ಸ್ ಸಿದ್ದಿ, ಮೇರಿ ಸಿದ್ದಿ, ಇಬ್ರಾಹಿಂ ಸಿದ್ದಿ, ಅಂತೋನ್ ಸಿದ್ದಿ, ಮಿಂಗೇಲ ಸಿದ್ದಿ, ಜುವಾನಿ ಸಿದ್ದಿ, ನನ್ನೇಸಾಬ ಸಿದ್ದಿ, ರೆಹಮಾನ ಸಿದ್ದಿ ಇದ್ದರು.