ಮುಂಡಗೋಡ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದರೆ ಆರ್ಥಿಕ ದುರ್ಬಲರಿಗೆ ಹಾಗೂ ರೈತಾಬಿ ಜನರ ಸರ್ವತೋಮುಖವಾಗಿ ಅಭಿವೃದ್ದಿ ಕೈಗೊಳ್ಳಲಿದೆ ಇದಕ್ಕೆ ಪಕ್ಷವು ಬದ್ದವಾಗಿದೆ ಆದ್ದರಿಂದ ಮತದಾರ ಬಾಂದವರು ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರಬೇಕು ಎಂದು ಜೆಡಿಎಸ್ ಯಲ್ಲಾಪುರ ಕ್ಷೇತ್ರದ ಘೋಷಿತ ಅಭ್ಯರ್ಥಿ ರವೀಂದ್ರ ನಾಯಕ ಹೇಳಿದರು

ಅವರು ಕಾತೂರಿನ ಬಸವೇಶ್ವರ ದೇವಾಲಯದ ಆವರಣದಲ್ಲಿ ಜರುಗಿದ ಪಕ್ಷದ ಸಭೆಯಲ್ಲಿ ಜೆ.ಡಿ.ಎಸ್. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಪಕ್ಷದ ಪ್ರಣಾಳಿಕೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರ ಮಾಸಿಕ ವೇತನ 10 ಸಾವಿರ ರೂ ಹೆಚ್ಚಿಸಲಾಗುವುದು ಎಂಬ ಅಂಶವನ್ನು ಸೇರಿಸಲಾಗಿದೆ. ಗರ್ಭಿಣಿ, ಬಾಣಂತಿ ಮಹಿಳೆಯರಿಗೆ 6 ಸಾವಿರ ರೂ ಹಾಗೂ ಅಂಗವಿಕಲರಿಗೆ 5 ಸಾವಿರ ರೂ ಮಾಸಿಕ ವೇತನ, ಕಾರ್ಮಿಕರಿಗೆ ಹಾಗೂ ಅಸಂಘಟಿತ ವಲಯಕ್ಕೆ ಆರೋಗ್ಯವಿಮೆ ಮುಂತಾದ ಯೋಜನೆಗಳಿಗೆ ಸಹಕಾರ ನೀಡಲು ಪಕ್ಷವು ಕಟಿಬದ್ದವಾಗಿದೆ ಎಂದರು

RELATED ARTICLES  ಸಮುದಾಯಭವನದ ಜಾಗ ಖರೀದಿಗೆ 5 ಲಕ್ಷ ರೂ. ನೀಡಿದ ಶಾಸಕ ದಿನಕರ ಶೆಟ್ಟಿ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಡಿ.ಎಸ್. ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಕುಟ್ರಿ ವಹಿಸಿದ್ದರು.
ತಾಲೂಕು ಯುವ ಘಟಕದ ಕಾರ್ಯಾಧ್ಯಕ್ಷ ಸಹದೇವ ಮುಡಸಾಲಿ, ಫಕೀರಪ್ಪಾ ದುಮ್ಮಾಡ, ಪರಶು ಹೊಸ್ಮನಿ, ಶ್ರೀಕಾಂತ ಘೊಟಗೋಡಿ, ಮಂಜುನಾಥ ಡೊಳ್ಳೇಶ್ವರ್, ಭೀಮಾ ಪಾಟೀಲ್, ಬಸವರಾಜ ವಾಲ್ಮೀಕಿ ಮುಂತಾದವರು ಮಾತನಾಡಿದರು.

ಕಾತೂರ ಘಟಕದ ಪ್ರಮುಖರಾದ ನಾಗನಗೌಡ ಕಾಡಣ್ಣನವರ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ಮುಂಡಗೋಡ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದರೆ ಆರ್ಥಿಕ ದುರ್ಬಲರಿಗೆ ಹಾಗೂ ರೈತಾಬಿ ಜನರ ಸರ್ವತೋಮುಖವಾಗಿ ಅಭಿವೃದ್ದಿ ಕೈಗೊಳ್ಳಲಿದೆ ಇದಕ್ಕೆ ಪಕ್ಷವು ಬದ್ದವಾಗಿದೆ ಆದ್ದರಿಂದ ಮತದಾರ ಬಾಂದವರು ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರಬೇಕು ಎಂದು ಜೆಡಿಎಸ್ ಯಲ್ಲಾಪುರ ಕ್ಷೇತ್ರದ ಘೋಷಿತ ಅಭ್ಯರ್ಥಿ ರವೀಂದ್ರ ನಾಯಕ ಹೇಳಿದರು

ಅವರು ಕಾತೂರಿನ ಬಸವೇಶ್ವರ ದೇವಾಲಯದ ಆವರಣದಲ್ಲಿ ಜರುಗಿದ ಪಕ್ಷದ ಸಭೆಯಲ್ಲಿ ಜೆ.ಡಿ.ಎಸ್. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು.

RELATED ARTICLES  ಅಶ್ವಿನಿ ಕೋಡಿಬೈಲ್ ಕವನ ಸಂಕಲನ ಬಿಡುಗಡೆ: ಉಮೇಶ ಮುಂಡಳ್ಳಿ ತಂಡದಿಂದ ಗಾನಸುಧೆ.