ಉತ್ತರಕನ್ನಡ : ಅನಾರೋಗ್ಯಪೀಡಿತ ಆನೆಯೊಂದು ನಾಡಿಗೆ ಕಾಲಿಟ್ಟಿದ್ದು, ಮರಳಿ ಕಾಡಿಗೆ ಹೊಗಲಾರದ ಸ್ಥಿತಿಯಲ್ಲಿ ಓಡಾಡುತ್ತಿರುವ ದೃಶ್ಯ ಶಿರಸಿ ತಾಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಳ್ಳಾಲದಲ್ಲಿ ಕಂಡು ಬಂದಿದೆ.ಇನ್ನು ಈ ವಿಷಯ ತಿಳಿದ ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ.
ಕಳೆದ 2 ದಿನದ ಹಿಂದೆ ನಾಡಿಗೆ ಬಂದ ಆನೆಗೆ ವಾಪಸ್ ಕಾಡಿಗೆ ಹೋಗಲು ತಿಳಿಯದಾಗುತ್ತಿದೆ. ಸ್ಥಳೀಯರಿಗೆ ಆನೆಗೆ ಸಹಾಯ ಮಾಡುವ ಮನಸ್ಸಿದ್ದರು ಅದರ ಹತ್ತಿರ ಸುಳಿಯಲು ಭಯಪಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷ್ಯ ತೋರುತ್ತಿದ್ದು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆನೆಗೆ ಸರಿಯಾಗಿ ಕಣ್ಣು ಕಾಣದೇ ಇರುವುದು ಗಮನಕ್ಕೆ ಬಂದಿದ್ದು, ನಡೆದಾಡುವಾಗ ಅಲ್ಲಲ್ಲಿ ಬಿದ್ದು ಸಾಕಷ್ಟು ಗಾಯಗೊಂಡಿರುವ ಆನೆಗೆ ನಿರಂತರ ರಕ್ತಸ್ರಾವವಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಆದಷ್ಟು ಬೇಗ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಆನೆ ಪರಿಸ್ಥಿತಿ ಇನ್ನೂ ಕಷ್ಟವಾಗಲಿದೆ.