ದಾವಣಗೆರೆ : ಗಾಳಿಯಲ್ಲಿ ತಿರುಗಿಸಿದ ಬೆಳಕು ಚಿತ್ರವಾಗುವುದನ್ನು ನೀವು ಎಲ್ಲಿಯಾದರೂ ಕಂಡೀರಾ, ಇಲ್ಲ ಬಿಡಿ ನೀವು ನೋಡಿರುವುದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಇಂತಹ ಕಲೆ ಗೊತ್ತಿರುವುದು ಪ್ರಪಂಚದಲ್ಲಿ ಕೇವಲವು ವ್ಯಕ್ತಿಗೆ ಮಾತ್ರ. ಹಾಗಾದ್ರೆ ಆ ವ್ಯಕ್ತಿ ಯಾರು ಎಂಬ ಕುತುಹೂಲ ನಿಮಗೆ ಇದೆಯಲ್ವಾ. ಹಾಗಾದ್ರೆ ಈ ಸ್ಟೋರಿಯನ್ನು ಸಂಪೂರ್ಣವಾಗಿ ಓದಿ.

ಈ ಕಲೆ ಹೆಸರು ‘ಗ್ಲೋ ಆರ್ಟ್‌’ (ಬೆಳಕಿನ ಚಿತ್ತಾರ), ಚಿತ್ರ ಕಲಾವಿದ ವಿನಯ್‌ ಹೆಗಡೆ ಎಂಬುವರಿಗೆ ಮಾತ್ರ ಈ ಕಲೆ ಗೊತ್ತು. ಮೂಲತಃ ಉತ್ತರ ಕನ್ನಡದ ಶಿರಸಿಯ ಭೈರುಂಬೆ ಇವರ ಗ್ರಾಮದ ಕಲಾಸಕ್ತ ಕುಟುಂಬ ಗಡಿಕೈಯಲ್ಲಿ ಹುಟ್ಟಿದವರು. ಬಾಲ್ಯದಲ್ಲಿಯೇ ಸಂಗೀತ ಮತ್ತು ಯಕ್ಷಗಾನ, ಪರಿಸರ ಪ್ರಭಾವದಿಂದ ಬೆಳೆದರು.

ಮೊದಲು ಇವರಿಗೆ ಕಲೆಯಲ್ಲಿ ಆಸಕ್ತಿ ಇತ್ತು. ಚಿತ್ರಶಿಲ್ಪಗಳು ಅಂತರಂಗದ ಅಭಿವ್ಯಕ್ತಿಯಾಗಿತ್ತು. ಬೆಂಗಳೂರಿನ ಕೆನ್‌ ಕಲಾಶಾಲೆಯಲ್ಲಿ ಚಿತ್ರ ಕಲಾಭ್ಯಾಸ ಮತ್ತು ಪೇಟಿಂಗ್‌ನಲ್ಲಿ ತರಬೇತಿ ಪಡೆದರು. ಭಾರತೀಯತೆಯ ಮೂರ್ತ ಸ್ವರೂಪ ಪ್ರೊ.ಸಾ.ಕೃ.ರಾಮಚಂದ್ರತಾಯರು ಇವರು ಗುರುಗಳು. ವಿನಯ್‌ಹೆಗಡೆ ತಬಲಾ ವಾದಕರು ಕೂಡಾ ಹೌದು.

ಗ್ಲೋ ಆರ್ಟ್‌ ಎಂದರೇನು?: ಗಾಳಿಯಲ್ಲಿ ತಿರುಗಿಸಿದ ಬೆಳಕು ಚಿತ್ರವಾಗುವುದನ್ನೇ ಗ್ಲೋ ಆರ್ಟ್‌ ಎನ್ನುತ್ತೇವೆ. ಮೊದಲು ಬೆಳಕನ್ನು ಕೆಲವು ಕ್ಷಣ ಹಿಡಿದು ನಿಲ್ಲಿಸಿ ತನ್ನ ಅಭಿವ್ಯಕ್ತಿ ಮಾಧ್ಯಮವಾಗಿಸಿದ ವಿಜ್ಞಾನದ ಮೂಲವೂ ಕೂಡ ಈ ಕಲೆ ನೆಲೆ. ಸಾಂದ್ರ ಕತ್ತಲೆಯಲ್ಲಿ ಮಿತ ಬೆಳಕಿನ ವಕ್ರತೆಯೇ ಇದರ ವೈಶಿಷ್ಟ್ಯ.ಸಂಪೂರ್ಣ ಕತ್ತಲೆಯಲ್ಲಿ ಬೆಳಕನ್ನು ಕೆಲವು ಕಾಲ ಹೀರಿಕೊಳ್ಳುವ ಕ್ಯಾನ್ವಾಸ್ವಿನ ಮೇಲೆ ಟಾರ್ಚ್‌ ಓಡಿಸುತ್ತಾ ಚಿತ್ರ ಬಿಡಿಸುವ ಆಶು ರೀತಿ ಈ ಕಲೆಯ ಸೌಂದರ್ಯ.

RELATED ARTICLES  ಇಂದಿನ(ದಿ-23/10/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ವಿಸ್ಮಯ: ಮೊದಲೇ ಅನ್ವೇಷಕರಾದ ಇವರು, ಕ್ಯಾನ್ವಾಸಿನಲ್ಲಿ ಅಂಟಿನ ಮೂಲಕ ಚಿತ್ರ ಬಿಡಿಸಿ ಅದರ ಮೇಲೆ ಹೊಳೆಯುವ ಪುಡಿಯನ್ನೇರಚಿತ್ತಿದ್ದರು. ತದನಂತರ ಕೆಲವೇ ಕ್ಷಣಗಳಲ್ಲಿ ಪರದೇ ಮೇಲೆ ಚಿತ್ರ ಬಂದಾಗ ಇದು ಯಾವ ಚಿತ್ರ ಎಂದು ಗೊತ್ತಾ ಗುತ್ತಿತ್ತು. ಇನ್ನು ಕ್ಲಾಸ್ಮಿಕ್‌ ಸ್ಪ್ಲಾಷ್‌ ಎಂಬುದು ಹೊಸ ಕಲಾಪ್ರಕಾರದ ಕಲೆಯಾಗಿದ್ದು, ಖಾಲಿ ಜಾಗದಲ್ಲಿ ನಿಂತು, ಗಾಳಿಯಲ್ಲಿ ಕೈ ಆಡಿಸಿದರೆ ಸಾಕು ಪರದೆಯ ಮೇಲೆ ಮೂಡುತ್ತಿತ್ತು.

ಯಾವ ಕಲೆ ಗೊತ್ತು: ವಿನಯ್‌ಹೆಗಡೆಗೆ ಶಿಲೆ, ಲೋಹ, ಮರ, ಮಣ್ಣು, ಮೇಣ, ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಹಾಗೂ ಫೈಬರ್‌ ಗ್ಲಾಸ್‌ನಲ್ಲಿ ಶಿಲ್ಪವನ್ನು ರಚಿಸುವ ಮೂಲಕ ಕಲಿತ ವಿದ್ಯೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಅಧ್ಯಯನವನ್ನು ಪ್ರಕೃತ ಕಾಲಾನುಸಾರಿಯಾದ ಡಿಜಿಟಲ್‌ ಮಾಧ್ಯಮದಲ್ಲಿ ಪ್ರಯೋಗಿಸುವ ಸಾಧ್ಯತೆಯನ್ನು ಸ್ವಾಧೀನಪಡಿಸಿಕೊಳ್ಳಲು ಕೆನಡಾದ ವ್ಯಾಂಕೋವರ್‌ ಫಿಲ್ಮ್‌ ಸ್ಕೂಲ್‌ನಲ್ಲಿ ಅಭ್ಯಾಸ ಮಾಡಿ ಅನಿಮೇಷನ್‌ ಪದವಿ ಪಡೆದಿದ್ದಾರೆ. ಸಿಂಗಾಪೂರ್‌ ಲುಕಾಸ್‌ ಅನಿಮೇಷನ್‌ನಿಂದ ಜೆಡಿ ಮಾಸ್ಟರ್‌ ಪದವಿ ಪಡೆದು ಸದ್ಯ ಉದ್ಯೋಗಾರ್ಥಿಯಾಗಿ ಹಾಲಿವುಡ್‌ನ ಡ್ರೀಮ್‌ ವರ್ಕ್ಸ್‌ ಕಂಪನಿಯಲ್ಲಿ ಅನಿಮೇಷನ್‌ ವೃತ್ತಿ ನಿರತರಾಗಿದ್ದಾರೆ.

RELATED ARTICLES  ಜಯಾ ಯಾಜಿ ಪಾರ್ಥಿವ ಶರೀರಕ್ಕೆ ಜಿಲ್ಲಾ ಕ.ಸಾ.ಪ. ದಿಂದ ಅಂತಿಮ ನಮನ

ಹಾಲಿವುಡ್‌ ಸಿನಿಮಾಗಳು: ಸ್ಪ್ರೇಂಜ್‌ ಮ್ಯಾಜಿಕ್‌, ಮಡಗಾಸ್ಕರ್‌, ಹೌ ಟು ಟ್ರೇನ್‌ ಯುವರ್‌ ಡ್ರ್ಯಾಗನ್‌-2, ಡ್ರೀಮ್‌ ಪ್ಲೇಸ್‌, ಟ್ರೋಲ್ಸ್‌ ಹಾಗೂ ಬಾಸ್‌ ಬೇಬಿ ಚಿತ್ರದಲ್ಲಿ ಇವರು ಕೈಚಳಕ ತೋರಿಸಿದ್ದಾರೆ.

ಪ್ರದರ್ಶನ ನೀಡಿದ ಕೆಲವು ಪ್ರಮುಖ ವೇದಿಕೆಗಳು: ಅಮೆರಿಕಾದಲ್ಲಿ ನಡೆದ ‘ಅಕ್ಕ’ ಅಂತಾರಾಷ್ಟ್ರೀಯ ಕನ್ನಡ ಸಮ್ಮೇಳನ, ಸ್ಯಾನ್‌ ಹ್ಯುಸೆ, ಡ್ರೀಮ್‌ವಕ್ಸ್‌ ಆನಿಮೇಶನ್‌ ಕಂಪನಿ, ಹಾಲಿವುಡ್‌, ಫ್ರಾಸ್ಟ್‌ಬರ್ಗ್‌ ಯೂನಿವರ್ಸಿಟಿ, ಎಲ್ಲ ಪ್ರಮುಖ ಕನ್ನಡ ಕೂಟಗಳು, ಮುಂಬಯಿನ ಮಹಿಂದ್ರ ಮತ್ತು ಮಹಿಂದ್ರ ಅಗ್ರಿ ವೆಬ್‌ಸೈಟ್‌ ಲಾಂಚ್‌, ಹಾಸನದ ಹೊಯ್ಸಳೋತ್ಸವ, ಬನವಾಸಿ ಕಂದಬತ್ಸೋವ ಸೇರಿದಂತೆ ನಾನಾ ಕಡೆ ಪ್ರದರ್ಶನ ನೀಡಿದ್ದಾರೆ.

ದಾವಣಗೆರೆಯ ಜನಕ್ಕೆ ವಿನಯ ಹೆಗಡೆ ಪ್ರದರ್ಶನ ಎಂದರೆ ಸಾಕಷ್ಟು ಜನರು ಬರುತ್ತಾರೆ. ಜಿಲ್ಲೆಯಲ್ಲಿ ಒಟ್ಟು ಮೂರು ಬಾರಿ ಪ್ರದರ್ಶನ ನೀಡಿದ್ದಾರೆ. ಇವರಿಗೆ ಸಾಕಷ್ಟು ಡಿಮ್ಯಾಂಡ್‌ ಇದ್ದು, ಇನ್ನುಷ್ಟು ಮನರಂಜನೆಯನ್ನು ನಮ್ಮೂರಿನ ಜನಕ್ಕೆ ನೀಡಬೇಕು ಎಂದು ಕಾರ್ಯಕ್ರಮ ಆಯೋಜಕರಾದ ವಾಸುದೇವ್‌ ರಾಯ್ಕರ್‌ ಹೇಳುತ್ಥಾರೆ. ನನ್ನ ಈ ಸಾಧನೆಗೆ ಗುರುಗಳಾದ ಪ್ರೊ.ಸಾ.ಕೃ.ರಾಮಚಂದ್ರರಾಯರು ಕಾರಣರಾಗಿದ್ದು, ಇನ್ನಷ್ಟು ಸಾಧನೆ ಮಾಡುವ ಹಂಬಲವಿದೆ ಎಂದು ವಿನಯ್‌ಹೆಗಡೆ ಆಶಯ.