ಕಾರವಾರ:ಮಾರ್ಚ್ 3 ಮತ್ತು 4ರಂದು ಭಾರತೀಯ ಜನತಾಪಾರ್ಟಿ ಜನಸುರಕ್ಷಾ ಯಾತ್ರೆಯನ್ನು ಜಿಲ್ಲೆಯಲ್ಲಿ ಹಮ್ಮಿಕೊಂಡಿದೆ.
ಮಾ.3-ರಂದು ಬೆಳಿಗ್ಗೆ 9 ಗಂಟೆಗೆ ಪಾದ ಯಾತ್ರೆ ಮುಖಾಂತರ ಕಾರವಾರದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಅವರ ನೇತ್ರದಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಂಕೋಲಾಕ್ಕೆ ಆಗಮಿಸಲಿದೆ. ಅಂಕೋಲಾದ ಅಜ್ಜಿಕಟ್ಟಾದಲ್ಲಿ ಬೆಳಿಗ್ಗೆ 10.-30ಕ್ಕೆ ಕೇಂದ್ರ ಸಚಿವ ಪ್ರಕಾಶ ಜಾವ್ಡೆಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ, ಶಿರಸಿ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಜಿಲ್ಲೆಯ ಎಲ್ಲ ಪ್ರಮುಖರು ಮಂಡಲದ ಪ್ರಮುಖರು ಭಾಗವಹಿಸಲಿದ್ದಾರೆ. ಸುಮಾರು 10,000ಕ್ಕೂ ಹೆಚ್ಚಿನ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ಅಂದಾಜಿಸಿದೆ.
ಅಂಕೋಲಾದ ಕಿತ್ತೂರು ಚನ್ನಮ್ಮ ರಸ್ತೆ, ಬಂಡಿಬಜಾರ, ಮುಖ್ಯರಸ್ತೆ ಮುಖಾಂತರ ಬಂದು ಜೈಹಿಂದ್ ಹೈಸ್ಕೂಲ್ ಮೈದಾನದನದಲ್ಲಿ ಸಂಜೆ 5ಕ್ಕೆ ಸಾರ್ವಜನಿಕ ಸಭೆ ನಡೆಯಲಿದೆ. ಮಧ್ಯಾಹ್ನ 3-.30ಕ್ಕೆ ಕುಮಟಾ ಬಿಜೆಪಿ ಕಾರ್ಯಾಲಯದಿಂದ ಪ್ರಾರಂಭವಾಗಿ ಮಾಸ್ತಿಕಟ್ಟಾ ಸರ್ಕಲ್, ಬಸ್ತಿಪೇಟೆ, ಗಾಂಧಿಚೌಕ, ಸುಭಾಶ ರೋಡ್, ಕೋರ್ಟರೋಡ್ ಮುಖಾಂತರ ಗಿಬ್ ಸರ್ಕಲ್‍ನಿಂದ ಗಿಬ್ ಹೈಸ್ಕೂಲ್ ಮೈದಾನದಲ್ಲಿ 5- ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದೆ.
ಮಾ.4ರಂದು ಬೆಳಿಗ್ಗೆ 10-.30ಕ್ಕೆ ಹೊನ್ನಾವರದ ದಂಡಿನದುರ್ಗಾ ದೇವಸ್ಥಾನದಿಂದ ಪ್ರಾರಂಭವಾಗಿ ಬಸ್ ನಿಲ್ದಾಣ, ಮುಖ್ಯ ಮಾರುಕಟ್ಟೆ, ಮಾಸ್ತಿಕಟ್ಟಾರಸ್ತೆ ಮುಖಾಂತರ ಪ್ರಭಾತ್ ನಗರದ ಮೂಡಗಣಪತಿ ದೇವಸ್ಥಾನದ ಮೈದಾನದಲ್ಲಿ 12- ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದೆ. ಮಧ್ಯಾಹ್ನ 3-.30 ಗಂಟೆಗೆ ಭಟ್ಕಳದ ರಂಗಿನಕಟ್ಟಾದಿಂದ ಪ್ರಾರಂಭವಾಗಿ ಹೂವಿನ ಮಾರ್ಕೆಟ್ ಮುಖಾಂತರ ಹಳೆ ಬಸ್‌ಸ್ಟ್ಯಾಂಡ್ ಹತ್ತಿರವಿರುವ ಮೈದಾನದಲ್ಲಿ 5 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದೆ. ಸಂಜೆ 6-.30ಕ್ಕೆ ಮುರ್ಡೇಶ್ವರದಲ್ಲಿ ಪಾದಯಾತ್ರೆ ನಡೆಯಲಿದ್ದು, ಅಂದಿನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಸಂತೋಷಜಿ, ರಾಜ್ಯ ನಾಯಕ ಈಶ್ವರಪ್ಪ ಉಪಸ್ಥಿತರಿರುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ತಿಳಿಸಿದ್ದಾರೆ.