ಜನಮನಸೂರೆಗೊಂಡ ಜಾನಪದ ಸೊಗಡಿನ ಸುಗ್ಗಿ ಕುಣಿತ.

ಸುಗ್ಗಿ ಕುಣಿತ ಜಾನಪದ ಕಲೆಯಾಗಿ ನಾಡಿನೆಲ್ಲೆಡೆ ಖ್ಯಾತಿ ಪಡೆದಿದೆ. ಆಕರ್ಷಕ ಕುಣಿತ, ಗತ್ತುಗಾರಿಕೆಯ ಮೂಲಕ ಎಲ್ಲರ ಗಮನ ಸೆಳೆಯುವ ಒಂದು ವಿಶಿಷ್ಟ ಹಬ್ಬವಾಗಿದೆ. ಪೌರಾಣ ಕ ಹಿನ್ನೆಲೆಯನ್ನು ಹೊಂದಿದ ಹೋಳಿ ಹುಣ್ಣಿಮೆ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು ಸದಾಚಾರವನ್ನು ರೂಪಿಸಿಕೊಳ್ಳುವ ಹಾಗೂ ಅಸುರ ಶಕ್ತಿಯ ದಮನದ ದ್ಯೋತಕವಾಗಿ ಈ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಕುಮಟಾ ತಾಲೂಕಿನ ಹಾಲಕ್ಕಿ, ಮಡಿವಾಳ, ಹಳ್ಳೇರ ಸಮಾಜದವರು ವಿಶಿಷ್ಟ ರೀತಿಯಲ್ಲಿ ಸುಗ್ಗಿ ಕುಣಿತವನ್ನು ಪ್ರದರ್ಶಿಸಿದರು. ಯಕ್ಷಗಾನ ವೇಷಗಳು, ಹುಲಿವೇಷಗಳು ಮುಂತಾದ ವಿವಿಧ ವೇಷಗಳನ್ನು ಹಾಕಿಕೊಂಡು, ಆಕರ್ಷಕ ತುರಾಯಿಗಳನ್ನು ಕಟ್ಟಿಕೊಂಡು ವಾದ್ಯಗಳೊಂದಿಗೆ ತಮ್ಮ ತಮ್ಮ ಸಾಂಪ್ರದಾಯಿಕ ಹಾಡುಗಳ ಮೂಲಕ ಅದ್ಭುತವಾಗಿ ತಾಳಕ್ಕೆ ತಕ್ಕ ಹೆಜ್ಜೆ ಹಾಕಿ ಜನಮನಸೂರೆಗೊಂಡರು.

RELATED ARTICLES  ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್​​ನ ಅವಶೇಷ ಪತ್ತೆ..!!

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ಶ್ರೀ ನಾಗರಾಜ ನಾಯಕ ತೊರ್ಕೆ ಅವರು ಇವರ ಸುಗ್ಗಿ ಕುಣ ತವನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಾ ಸುಗ್ಗಿ ಕುಣಿತವು ಜಾನಪದ ಸೊಗಡಿನ ಸಾಂಸ್ಕ್ರತಿಕ ಕಲೆಯಾಗಿದ್ದು ಇದನ್ನು ವೈಶಿಷ್ಟ್ಯಪೂರ್ಣವಾಗಿ, ಸಾಂಪ್ರದಾಯಿಕವಾಗಿ ಅತ್ಯಂತ ಭಕ್ತಿಭಾವದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದಕ್ಕೆಂದೇ ವಿಶಿಷ್ಟ ರೀತಿಯ ವೇಷಭೂಷಣಗಳನ್ನು ಕೊಡಲಾಗುತ್ತದೆ. ಈ ಹೋಳಿ ಹಬ್ಬದ ಆಚರಣೆಯನ್ನು ನಮ್ಮ ಉತ್ತರಕನ್ನಡ ಜಿಲ್ಲೆಯಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ದುಷ್ಟತನವನ್ನು ಭಸ್ಮ ಮಾಡುವ ಈ ಹೋಳಿ ಹಬ್ಬದಂದು ಮನಸ್ಸಿನಲ್ಲಿನ ಕೆಟ್ಟ ಆಲೋಚನೆಗಳನ್ನು ಸುಟ್ಟು ಇನ್ನೊಬ್ಬರಿಗೆ ನೋವಾಗದಂತೆ ಹೊಸ ಭರವಸೆಯ ಕನಸುಗಳೊಂದಿಗೆ ಬದುಕು ಕಟ್ಟಿಕೊಳ್ಳೋಣ ಹಾಗೂ ಈ ಕಲೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ಪ್ರಯತ್ನ ಮಾಡೋಣ ಎಂದು ನುಡಿದು ಎಲ್ಲರನ್ನೂ ಅಭಿನಂದಿಸಿದರು.

RELATED ARTICLES  ಜೂ.14 ರಿಂದ SSLC ಪರೀಕ್ಷೆ; ವೇಳಾಪಟ್ಟಿ ಹೀಗಿದೆ ನೋಡಿ