ತುಮಕೂರು: ತುಮಕೂರು ಜಿಲ್ಲಾ ಆಸ್ಪತ್ರೆಯ ನವಜಾತ ಶಿಶು ತೀವ್ರ ನಿಗಾ ಘಟಕ (ಎನ್‌.ಐ. ಸಿ.ಯು) ದಲ್ಲಿ ಇಂದು ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಕಾರಣ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಎನ್‌.ಐ. ಸಿ.ಯು ಘಟಕರ ಹವಾನಿಯಂತ್ರಕದಲ್ಲಿ ಉಂಟಾದ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಈ ಅನಾಹುತ ಸಂಭವಿಸಿತ್ತು. ಆದರೆ ಅದೃಷ್ಟವಶಾತ್‌ ಘಟನೆಯಲ್ಲಿ ಯಾವ ಸಾವು ನೋವು ಸಂಭವಿಸಿಲ್ಲ.
ಘಟನಾ ಸ್ಥಳದಲ್ಲಿ ಹಾಜರಿದ್ದ ಆಸ್ಪತ್ರೆಯ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಮಕ್ಕಳ ಜೀವ ಉಳಿದಿದ್ದು ಒಟ್ಟು 29 ಮಕ್ಕಳನ್ನು ರಕ್ಷಿಸಲಾಗಿದೆ.

RELATED ARTICLES  ಕುಕ್ಕೆ ಸುಬ್ರಹ್ಮಣ್ಯ ಕಿರು ಷಷ್ಠಿಯಲ್ಲಿ ಧರ್ಮ ಸಮ್ಮೇಳನ ನಡೆಸಲು ನಿರ್ಧಾರ.

ಎಲ್ಲಾ ಇಪ್ಪತ್ತೊಂಭತ್ತು ಮಕ್ಕಳೂ ಸುರಕ್ಷಿತವಾಗಿದ್ದಾರೆ. ಗರದ ಶ್ರೀದೇವಿ ಮೆಡಿಕಲ್ ಕಾಲೇಜು ಮತ್ತು ಸಿದ್ಧಗಂಗಾ ಆಸ್ಪತ್ರೆಯ ನವಜಾತ ಶಿಶು ತೀವ್ರ ನಿಗಾ ಘಟಕಕ್ಕೆ ಮಕ್ಕಳನ್ನು ಸ್ಥಳಾಂತರಿಸಿ ಆರೈಕೆ ನಡೆಸಲಾಗಿದೆ. ಎಂದು ಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ವೀರಭದ್ರಯ್ಯ ಮಾದ್ಯಮಕ್ಕೆ ವಿವರಿಸಿದ್ದಾರೆ.
ಜಿಲ್ಲಾಧಿಕಾರಿ ಕೆ.ಪಿ ಮೋಹನ್ ರಾಜ್, ಎಸ್ಪಿ ಡಾ. ದಿವ್ಯಗೋಪಿನಾಥ್, ತುಮಕೂರು ಶಾಸಕ ರಫೀಕ್ ಅಹಮದ್ ಘಟನಾ ಸ್ಥಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

RELATED ARTICLES  ಮುಕ್ತ ವಿಶ್ವವಿದ್ಯಾನಿಲಯವನ್ನು ರಾಜ್ಯ ಸರಕಾರ ಮುಚ್ಚುವುದಿಲ್ಲ!