ಭಟ್ಕಳ: ಚಲಿಸುತ್ತಿದ್ದ ರೈಲಿನಲ್ಲಿ ಹೃದಯಾಘಾತಕ್ಕೊಳಗಾದ ವೈದ್ಯ ವಿದ್ಯಾರ್ಥಿಯೋರ್ವ ಮಂಗಳಾ ಎಕ್ಸಪ್ರೆಸ್ಸ ರೈಲಿನಲ್ಲಿ ಸಾವನ್ನಪಿದ್ದಾನೆ.

ಮೃತ ವಿದ್ಯಾರ್ಥಿ ಮಣಿಪಾಲದ ಮೆಡಿಕಲ್ ಕಾಲೇಜಿನ ಉತ್ತರ ಪ್ರದೇಶದ ಜಾನ್ಸಿ ಮೂಲದ ಕೃಷ್ಣಕುಮಾರ ಕುಶವಾ ಎಂದು ತಿಳಿದು ಬಂದಿದೆ.

RELATED ARTICLES  ಪ್ರತಿಭೆಗಳನ್ನು ಗುರುತಿ ಪ್ರೋತ್ಸಾಹಿಸುವ ಕೆಲಸ ಸಮಾಜದ ಮೇಲಿದೆ- ನಾಗರಾಜ ನಾಯಕತೊರ್ಕೆ

ಉತ್ತರ ಪ್ರದೇಶದಿಂದ ಮಣಿಪಾಲದ ಕಾಲೇಜಿಗೆ ರೈಲಿನಲ್ಲಿ ತೆರಳುತ್ತಿದ್ದ ಸಂಧರ್ಭದಲ್ಲಿ ರೈಲಿನಲ್ಲಿಯೇ ಹೃದಯಾಘಾತಕ್ಕಿಡಾಗಿ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ರೈಲು ಭಟ್ಕಳದಲ್ಲಿ ನಿಂತಿದ್ದು, ತಕ್ಷಣಕ್ಕೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

RELATED ARTICLES  ಕೆನರಾ ಕಾಲೇಜು ಸೊಸೈಟಿ ನೂತನ ಆಡಳಿತ ಮಂಡಳಿ ಅಸ್ಥಿತ್ವಕ್ಕೆ. : ಅಧ್ಯಕ್ಷರಾಗಿ ರಾಮಚಂದ್ರ ರಂಗಪ್ಪ ಕಾಮತ್

ಈ ಕುರಿತು ಕೊಂಕಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.