ಕುಮಟಾ: ಯಕ್ಷಕಲಾ ಪೋಷಕ ವೃಂದ ಕಲ್ಲಬ್ಬೆ ಇವರ ಆಶ್ರಯದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದ ಶ್ರೀ ಬಳ್ಕೂರ ಕೃಷ್ಣ ಯಾಜಿಯವರಿಗೆ ಸನ್ಮಾನ ಹಾಗೂ ಯಕ್ಷಗಾನ ಪ್ರದರ್ಶನವನ್ನು ಕುಮಟಾ ತಾಲೂಕಿನ ಮೂರೂರು ಗ್ರಾಮದ ಕಲ್ಲಬ್ಬೆಯ ನಂದಿಕೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ಶ್ರೀ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಶರಾವತಿ ಶ್ರೀರಾಮನ ಶರದಿಂದ ಹುಟ್ಟಿದಳು ಎಂಬ ಪ್ರತೀತಿ ಇದೆ. ಈ ಮಣ್ಣು ದಿ| ಪದ್ಮಶ್ರೀ ಪುರಸ್ಕøತ ಚಿಟ್ಟಾಣ ರಾಮಚಂದ್ರ ಹೆಗಡೆ, ಕೆರೆಮನೆ ಶಂಭು ಹೆಗಡೆ ಮುಂತಾದ ಮೇರು ಕಲಾವಿದರನ್ನು ನೀಡಿದೆ. ಯಕ್ಷಗಾನವು ಕರಾವಳಿಯ ಗಂಡುಮೆಟ್ಟಿನ ಕಲೆಯಾಗಿದೆ. ಇದೊಂದು ವಿಶಿಷ್ಟ ಹಾಗೂ ಮಹತ್ವಪೂರ್ಣ ಕಲೆಯಾಗಿದೆ. ಈ ಕಲೆಯಲ್ಲಿ ನಮ್ಮ ಕನ್ನಡ ಭಾಷೆಯ ಮುಖ್ಯವಾಗಿ ಸಂಸ್ಕøತಿಯ ಜೀವಂತಿಕೆಯನ್ನು ಕಾಣಬಹುದಾಗಿದೆ. ಇಂತಹ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ. ಬಳ್ಕೂರ ಕೃಷ್ಣ ಯಾಜಿಯವರು ಅದ್ಭುತವಾದ ಯಕ್ಷಗಾನ ಕಲಾವಿದರು. ಅವರ ನಟನೆ, ಕುಣ ತ ಎಲ್ಲವೂ ವಿಶಿಷ್ಟವಾಗಿದ್ದು ಎಲ್ಲರ ಮನಗೆದ್ದ ಕಲಾವಿದರಾಗಿದ್ದಾರೆ. ಇಂತಹ ಕಲಾವಿದರನ್ನು ನಾವು ಪ್ರೋತ್ಸಾಹಿಸಿ ಸಹಕರಿಸಿ ಅವರು ಇನ್ನೂ ಹೆಚ್ಚಿನ ಸಾಧನೆಗೈಯುವಂತೆ ಹುರಿದುಂಬಿಸಬೇಕು. ಈ ನಿಟ್ಟಿನಲ್ಲಿ ಕಲ್ಲಬ್ಬೆಯ ಯಕ್ಷಕಲಾ ಪೋಷಕ ವೃಂದದವರು ಬಹಳ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿ.ಪಂ. ಸದಸ್ಯ ಪ್ರದೀಪ ನಾಯಕ ದೇವರಬಾವಿ ಅವರು ಮಾತನಾಡಿ ಯಕ್ಷಗಾನವು ವೈಶಿಷ್ಟ್ಯಪೂರ್ಣ ಕಲೆಯಾಗಿದ್ದು ಯುವಜನಾಂಗದವರು ಈ ಕಲೆಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಯಕ್ಷಗಾನ ಕಲೆಯ ಮಹತ್ವವನ್ನು ಯುವಜನಾಂಗಕ್ಕೆ ತಿಳಿಸಿ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಸದಾನಂದ ನಂದಿ ಹೆಗಡೆ, ಸುಬ್ರಾಯ ವಿ. ಭಟ್ಟ, ಮಕ್ಕಿಕೇರಿ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.