ಶಿಲ್ಲಾಂಗ್​/ಕೊಹಿಮಾ/ಅಗರ್ತಲ: ತೀವ್ರ ಕುತೂಹಲ ಕೆರಳಿಸಿರುವ ಈಶಾನ್ಯ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ತ್ರಿಪುರದಲ್ಲಿ ಬಿಜೆಪಿ ಮೈತ್ರಿಕೂಟ , ಮೇಘಾಲಯದಲ್ಲಿ ಕಾಂಗ್ರೆಸ್​ ಮತ್ತು ನಾಗಾಲ್ಯಾಂಡ್​ ಬಿಜೆಪಿ ಮೈತ್ರಿಕೂಟ ಮುನ್ನಡೆ ಸಾಧಿಸಿದೆ.

ತ್ರಿಪುರಾದಲ್ಲಿ ಬಿಜೆಪಿ ಮೈತ್ರಿಕೂಟ
ತ್ರಿಪುರಾದಲ್ಲಿ ಬಿಜೆಪಿ ಮಿತ್ರಪಕ್ಷ ಹಾಗೂ ಸಿಪಿಐಎಂ ಮಿತ್ರಪಕ್ಷಗಳಿಗೆ ತೀವ್ರ ಪೈಪೋಟಿ ಏರ್ಪಟ್ಟಿದ್ದು 59 ಸ್ಥಾನಗಳಲ್ಲಿ ಬಿಜೆಪಿ 41 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಬಿಜೆಪಿ 51 ಕ್ಷೇತ್ರಗಳಲ್ಲಿ ಹಾಗೂ ಉಳಿದ ಕ್ಷೇತ್ರಗಳಲ್ಲಿ ಮಿತ್ರಪಕ್ಷ ಇಂಡೀಜಿನಿಯಸ್​ ಪೀಪಲ್​ ಫ್ರಂಟ್​ ಆಫ್ ತ್ರಿಪುರ (ಐಪಿಎಫ್​ಟಿ) ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಸಿಪಿಐಎಂ 57 ಸ್ಥಾನಗಳಿಗೆ ಸ್ಪರ್ಧಿಸಿದ್ದು, ಮಿತ್ರಪಕ್ಷಗಳಿಗೆ 2 ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು. ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿತ್ತು.

RELATED ARTICLES  ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ

ತ್ರಿಪುರಾ (ಒಟ್ಟು ಸ್ಥಾನಗಳು – 59/ 60)
ಸಿಪಿಐಎಂ+ – 18, ಕಾಂಗ್ರೆಸ್ – 00, ಬಿಜೆಪಿ+ – 41, ಇತರೆ – 00

ಮೇಘಾಲಯದಲ್ಲಿ ಕಾಂಗ್ರೆಸ್​ ಮುನ್ನಡೆ (ಒಟ್ಟು ಸ್ಥಾನಗಳು – 59/ 60)
ಕಾಂಗ್ರೆಸ್+ – 19, ಎನ್​ಪಿಪಿ – 19, ಬಿಜೆಪಿ – 03, ಇತರೆ – 18

RELATED ARTICLES  ದಿನಾಂಕ 19/05/2019 ರ ದಿನ ಭವಿಷ್ಯ ಇಲ್ಲಿದೆ.

ನಾಗಾಲ್ಯಾಂಡ್​ ಬಿಜೆಪಿ, ಎನ್​ ಪಿಎಫ್​ ಪೈಪೋಟಿ (ಒಟ್ಟು ಸ್ಥಾನಗಳು – 60/60)
ಎನ್​ಪಿಎಫ್ – 29, ಕಾಂಗ್ರೆಸ್ – 02, ಬಿಜೆಪಿ – 26 ಹಾಗೂ ಇತರೆ – 03

ನಾಗಾಲ್ಯಾಂಡ್​, ಮೇಘಾಲಯದಲ್ಲಿ ಫೆ. 27ರಂದು ವಿಧಾನಸಭಾ ಚುನಾವಣೆ ನಡೆದಿತ್ತು. ಮೇಘಾಲಯದಲ್ಲಿ ಶೇ.67 ಮತ್ತು ನಾಗಾಲ್ಯಾಂಡ್​ನಲ್ಲಿ ಶೇ.75 ಮತದಾನವಾಗಿತ್ತು. ಇಂದು ಬೆಳಗ್ಗೆ 8 ಗಂಟೆಯಿಂದ ಮೂರೂ ರಾಜ್ಯಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ.