ಹೊನ್ನಾವರ : ಸಾಮಾಜಿಕ ಪರಿಶೋಧನೆಯಿಂದ ಇಂದು ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಪಾರದರ್ಶಕತೆ ಹೆಚ್ಚಾಗಿದೆ. ಸ್ವಯಂ ಪ್ರೇರಿತವಾಗಿ ಗ್ರಾಮಸ್ಥರು ಪಂಚಾಯತ ಕಡೆಗೆ ಮುಖಮಾಡುವಂತಾಗಿದೆ ಸಾಮಾಜಿಕ ಪರಿಶೋಧನೆಯಿಂದ ಸಾಮಾಜಿಕ ಒಳಗೊಳ್ಳುವಿಕೆ ಸಾಧ್ಯ ಎಂದು ತಾಲೂಕಾ ಸೋಶಿಯಲ್ ಆಡಿಟರ್ ಉಮೇಶ ಮುಂಡಳ್ಳಿ ಹೇಳಿದರು. ಅವರು ಶನಿವಾರ ತಾಲೂಕಿನ ಹಳದಿಪುರ ಗ್ರಾಮ ಪಂಚಾಯತನಲ್ಲಿ ನಡೆದ 2017-18ನೇ ಸಾಲಿನ ಎರಡನೇ ಹಂತದ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮಹಾತ್ಮಾ ಗಾಂಧಿ ನರೇಗಾ ಯೋಜನೆ ಆರ್ಥಿಕವಾಗಿ ಹಿಂದುಳಿದವರಿಗಾಗಿಯೇ ಇರುವ ಒಂದು ಮಹತ್ವಪೂರ್ಣ ಯೋಜನೆಯಾಗಿದ್ದು, ಸಮಾಜದಲ್ಲಿ ನಿರ್ಗತಿಕರು ಅಸಹಾಯಕರಿಗೆ ಯೋಜನೆ ಕೈದೀವಟಿಗೆಯಂತೆ ಕಾರ್ಯನಿರ್ವಹಿಸುತ್ತಿದೆ. ಅವಕಾಶಗಳು ಒಮ್ಮೊಮ್ಮೆ ಮಾತ್ರ ಒದಗಿ ಬರುವಂತದ್ದು ಆಗ ನಾವು ಅವಕಾಶ ಪಡೆಯುವಲ್ಲಿ ಮೀನ ಮೇಷ ಎಣಿಸಿದಲ್ಲಿ ಅದರಿಂದ ವಂಚಿತರಾಗುತ್ತೇವೆ. ಯೋಜನೆ ನಿಂತ ನೀರಲ್ಲ ಸದಾ ಹರಿಯುವ ನದಿಯಂತೆ. ಯೋಜನೆ ನಿಯಮದಂತೆ ಕಾಮಗಾರಿ ನಿರ್ವಹಿಸಿದ್ದಲ್ಲಿ ಅನೇಕ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ ಎಂದರು. ಈ ಬಗ್ಗೆ ಗ್ರಾಮದ ಸಾಮಾನ್ಯ ಜನರಿಗೆ ಅರಿವೂ ಮೂಡಿಸುವ ಅವಶ್ಯಕತೆ ಇದೆ ಆ ದಿಶೆಯಲ್ಲಿ ಸಾಮಾಜಿಕ ಪರಿಶೋಧನೆ ತಂಡ ತನ್ನ ಪ್ರಯತ್ನ ಮುಂದುವರಿಸಿದೆ ಎಂದರು.

RELATED ARTICLES  ಒಂದೇ ಕಡೆ ನಾಲ್ಕು ಹೆಬ್ಬಾವು : ಹಾವು ಕಂಡ ಜನ ಕಂಗಾಲು.

ಗ್ರಾಮಮಟ್ಟದಲ್ಲಿ ನಡೆಯುತ್ತಿರುವ ಹಲವು ಯೋಜನೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ಯಾವುದೇ ಕಾಮಗಾರಿ ನಿರ್ವಹಿಸುವ ಮೊದಲು ಅವಶ್ಯ ದಾಖಲುಗಳನ್ನು ಸಂಗ್ರಹಿಸಿಕೊಂಡು ಮತ್ತು ಯೊಜನೆಯ ನಿಯಮ ಮೀರದಂತೆ ಕಾಮಗಾರಿ ನಿರ್ವಹಿಸಬೇಕಾಗಿ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾದ ನಾರಾಯಣ ಹೆಗಡೆಯವರು ಹೇಳಿದರು. ಸಾಮಾಜಿಕ ಪರಿಶೋಧನಾ ವರದಿಯನ್ನು ತಾಲೂಕು ಸಂಯೋಜಕರ ಸಹಾಯಕರಾದ ಗ್ರಾಮಸಂಪನ್ಮೂಲ ವ್ಯಕ್ತಿ ಅಜಿತ್ ನಾಯ್ಕ ಸಭೆಯಲ್ಲಿ ಮಂಡಿಸಿ ಸಭೆಯ ತಿರ್ಮಾನಕ್ಕೆ ಬಿಟ್ಟರು.

RELATED ARTICLES  ಗೋ ಕಳ್ಳ ಸಾಗಣೆ ಪ್ರಕರಣ: ಕುಮಟಾದಲ್ಲಿ ಪತ್ರಿಕಾಗೋಷ್ಟಿ ನಡೆಸಿ ರಾಜ್ಯ ಸರಕಾರದ ವಿರುದ್ಧ ಹರಿ ಹಾಯ್ದ ಬಿಜೆಪಿಗರು.

ಈ ಅವದಿಯಲ್ಲಿ ನಿರ್ವಹಿಸಿದ ಕಾಮಗಾರಿಗಳ ವಿವರವನ್ನು, ಹಿಂದಿನ ಸಭೆಯ ನಡಾವಳಿಯನ್ನು ಕಾರ್ಯದರ್ಶಿ ಕೃಷ್ಣ ಭಂಡಾರಿ ಓದಿ ಹೇಳಿದರು. ಪಂಚಾಯತ ಅಧ್ಯಕ್ಷೆ ಗುಣಮಾಲಾ ಜೈನ್ ಯೋಜನೆಯ ಸದುಪಯೋಗ ಪಡೆದುಕೊಳ್ಳುವ ಬಗ್ಗೆ ಗ್ರಾಮೀಣ ಜನರಲ್ಲಿ ಕೇಳಿಕೊಂಡರು. ಗ್ರಾಮ ಪಂಚಾಯತ ಸದಸ್ಯರು, ಸಿಬ್ಬಂದಿವರ್ಗದವರು ಮತ್ತು ಫಲಾನುಭವಿಗಳು ಹಾಜರಿದ್ದರು.