ಕುಮಟಾ: ರಾಜ್ಯದ ಕಾಂಗ್ರೆಸ್‍ನ ಆಡಳಿತದಲ್ಲಿ ಸಜ್ಜನರಿಗೆ ಅವಮಾನ, ಗೂಂಡಾಗಳಿಗೆ ಗೌರವ ನೀಡುವ ಕೆಲಸವಾಗುತ್ತಿದೆ. ಹಿಂದು ವಿರೋಧಿ ಧೋರಣೆಯ, ಜನವಿರೋಧಿ ಸರ್ಕಾರ ಕಿತ್ತೆಸೆಯುವುದಕ್ಕಾಗಿ ಭಾರತೀಯ ಜನತಾ ಪಾರ್ಟಿಯು ಈ ಜನಸುರಕ್ಷಾ ಯಾತ್ರೆ ಹಮ್ಮಿಕೊಳ್ಳುತ್ತಿದೆ. ಹೊನ್ನಾವರದ ಯುವಕ ಪರೇಶ ಮೆಸ್ತರಂತಹ ಅಮಾಯಕರನ್ನು ನಿರ್ಧಯವಾಗಿ ಕೊಲ್ಲಲಾಗಿದೆ. ಕಾಂಗ್ರೇಸ್ ಆಳ್ವಿಕೆಯಲ್ಲಿ ನಿರ್ಧೋಷಿಗಳು ಅಮಾನುಷವಾಗಿ ಕೊಲೆಯಾಗುತ್ತಿದ್ದು, ಗೂಂಡಾಗಳು ರಾಜಾರೋಷವಾಗಿ ನಿರ್ಭಯವಾಗಿ ಒಡಾಡುತ್ತಿದ್ದಾರೆ. ಅಧಿಕಾರದ ಮದವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇಳಿಸಲಿದೆ ಎಂದು ಅನಂತ್ ಕುಮಾರ ಹೆಗಡೆ ಕಾಂಗ್ರೆಸ್ ಸರಕಾರದ ವಿರುದ್ಧ ಗುಡುಗಿದರು. ಅವರು ಇಂದು ಕುಮಟಾದಲ್ಲಿ ನಡೆದ ಜನ ಸುರಕ್ಷಾ ಯಾತ್ರೆಯನ್ನು ಉದ್ಧೇಶಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅನಂತ ಕುಮಾರ ಹೆಗಡೆ ಈ ಮಣ್ಣಿನಲ್ಲಿ ನಡೆಯುವ ಅನಾಹುತ ನೋಡಿದಾಗ ಬಂಡೆಗಲ್ಲೂ ಕರಗಿ ನೀರಾಗುತ್ತದೆ. ಒಂದೆಡೆ ಕಾಂಗ್ರೆಸ್ ಸರಕಾರ ಕೆಕೆ ಹಾಕಿ ನಗುತ್ತಿದೆ. ಹಿಂದು ಮಠ ಮಂದಿರಗಳ ಮೇಲೆ ದಾಳಿ ಮಾಡುವುದು ಸರಕಾರದ ಕಾರ್ಯವಾಗಿದೆ. ಸಿದ್ಧರಾಮಯ್ಯ ಸರಕಾರ ಹುಚ್ಚರಂತೆ ವರ್ತಿಸುತ್ತಿರುವುದಕ್ಕೆ ಉತ್ತರ ಕೊಡಬೇಕಾಗಿರುವುದು ನಾವು ಎಂದರು. ಸರ್ವಾಧಿಕಾರಿಗಳನ್ನು ನಿಯಂತ್ರಿಸಲು ಇದು ಸಕಾಲ. ಚುನಾವಣೆ ನ್ಯಾಯಯುತವಾಗಿ ನಡೆಯುವ ವಿಶ್ವಾಸ ನನಗಿಲ್ಲ ಎಂದು ಹರಿ ಹಾಯ್ದ ಅವರು. ಅಪರಾಧಿಕಾರಣದಲ್ಲಿ ತೊಡಗಿದ ಸರಕಾರ ನ್ಯಾಯಕ್ಕೆ ಬೆಲೆ ಕೊಡುವ ಬಗ್ಗೆ ನಂಬಿಕೆ ಇಲ್ಲ ಎಂದರು.

RELATED ARTICLES  ಪಕ್ಷ-, ಪಂಗಡ-, ಮತದ ದೃಷ್ಠಿಯನ್ನು ಬದಿಗಿಟ್ಟು, ಸಮಾಜ ಸೇವೆ ಎಂದು ಕೆಲಸ ಮಾಡಬೇಕು :ಸಚಿವ ಕಾಗೋಡು ತಿಮ್ಮಪ್ಪ

ಕಾಂಗ್ರೆಸ್ ಮುಕ್ತ ಭಾರತವಾಗಿಸುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಭೃಷ್ಟಾಚಾರದಮೂಲಕವೇ ಸರಕಾರ ನಡೆಸಬೇಕು ಎಂದಿದ್ದು ಕಾಂಗ್ರೆಸ್ ,ಕಾಂಗ್ರೆಸ್ ಕೇವಲ ಪಕ್ಷವಲ್ಲ ಅದು ಸಂಸ್ಕ್ರತಿ ಎಂದ ಅವರು ನಮ್ಮ ಮಣ್ಣಿನ ಪರಂಪರೆ ವಿರೋಧಿಸುವುದೇ ನೀತಿ ಎಂದಿದ್ದು ಕಾಂಗ್ರೆಸ್, ಜಾತಿ ಜಾತಿಯ ವಿಷ ಬೀಜ ಬಿತ್ತಿ ಹಿಂದುಗಳನ್ನು ಒಡೆಯುವ ಕೆಲಸ ಮಾಡಿದ್ದು ಕಾಂಗ್ರೆಸ್, ಕಪ್ಪು ಹಣವನ್ನು ಸಂಗ್ರಹಿಸಿದ ಸರಕಾರ ಕಾಂಗ್ರೆಸ್ ಸರಕಾರ ಎಂದು ಅವರು ವಾಗ್ದಾಳಿ ನಡೆಸಿದರು.

ಸಿದ್ಧರಾಮಯ್ಯನವರದ್ದು ರಾಕ್ಷಸ ಮುಖ ಅವರು ಕನ್ನಡಿಯಲ್ಲಿ ಮುಖ ನೋಡಿಕೊಂಡೆ ರಾಕ್ಷಸ ಮುಖ ಬಯಲಾಗುತ್ತದೆ ಎಂದರು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ೭೭೪೮ ಕೊಲೆಗಳು ನಡೆದಿದೆ ಎಂದು ಅಂಕಿ ಅಂಶ ನೀಡಿದ ಅವರು ಸಿದ್ಧರಾಮಯ್ಯನವರ ವಿರುದ್ಧ ಹರಿಹಾಯ್ದರು. ಕಂಡ ಕಂಡ

ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ರಾಜ್ಯದಲ್ಲಿ ಭ್ರಷ್ಟ, ಹಿಂದುವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಜನತೆ ಕಿತ್ತೊಗೆಯಬೇಕಿದೆ. ನಿತ್ಯ ಅಮಾಯಕ ಹಿಂದೂಗಳ ಕೊಲೆ ನಡೆಯುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಸಂವೇದನೆಯನ್ನೇ ಕಳೆದುಕೊಂಡಂತೆ ವರ್ತಿಸುತ್ತಿದೆ, ಎಂದು ಕಿಡಿಕಾರಿದರು.

RELATED ARTICLES  ಅಕ್ಟೊಬರ್ ೬ ರಿಂದ ೧೨ರ ವರೆಗೆ ತಾಳಮದ್ದಳೆ ಸಪ್ತಾಹ

ಹಿಂದುಗಳ ಹತ್ಯೆಗೆ ಖಂಡನೆ ಹಾಗೂ ನ್ಯಾಯ ಒದಗಿಸಬೇಕೆಂದು ಆಗ್ರಹಗಳು ಕೇಳಿಬಂದವು.ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಇದೇ ಸಂದರ್ಭದಲ್ಲಿ ಮಾತನಾಡಿ ಕಾಂಗ್ರೆಸ್ ಆಡಳಿತದ ವಿರುದ್ಧ ಹರಿ‌ಹಾಯ್ದರು.

ಕುಮಟಾದ ಬಿಜೆಪಿ ಪ್ರಮುಖರಾದ ಮಾಜಿ ಶಾಸಕ ದಿನಕರ ಶೆಟ್ಟಿ, ಸೂರಜ್ ನಾಯ್ಕ ಸೋನಿ, ನಾಗರಾಜ ನಾಯಕ ತೊರ್ಕೆ, ಸುಬ್ರಾಯ ವಾಳ್ಕೆ, ಡಾ.ಜಿ.ಜಿ ಹೆಗಡೆ, ಎಂ.ಜಿ ಭಟ್ಟ, ಕುಮಾರ ಮಾರ್ಕಡೇಯ,ವೆಂಕಟೇಶ ನಾಯ್ಕ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.

ಕಾರವಾರ: ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ಮಗ ತನ್ನ ಸ್ನೇಹಿತರ ಜೊತೆಗೂಡಿ ಗೂಂಡಾಗಿರಿ ತೋರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇದು ಕಾಂಗ್ರೆಸ್‍ನ ಅಧಿಕಾರದ ಮದ ತೋರಿಸುತ್ತದೆ, ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ ಹೇಳಿದರು. ಅವರು ಇಲ್ಲಿಯ ಮಾಲಾದೇವಿ ಮೈದಾನದಲ್ಲಿ ಕಾರವಾರದಿಂದ ಮಂಗಳೂರು ವರೆಗಿನ ಜನಸುರಕ್ಷಾ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಕ್ಷದ ವಕ್ತಾರ ರಾಜೇಶ ನಾಯಕ, ಮಹಿಳಾಮೊರ್ಚಾದ ರೂಪಾಲಿ ನಾಯ್ಕ, ಗಣಪತಿ ಉಳ್ವೇಕರ ಮುಂತಾದವರು ಇದ್ದರು