ಹೊನ್ನಾವರ:ತಾಲೂಕಿನ ಕರ್ಕಿಯ ರಾಮೇಶ್ವರಕಂಬಿಯಲ್ಲಿ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.

ಕ್ರೀಡೆಯೆಂದರೆ ಹೆಚ್ಚಿನದಾಗಿ ಯುವಕರಿಗೆ ಅಚ್ಚು ಮೆಚ್ಚು. ಅಂತ ಒಂದು ಕ್ರೀಡೆಗೆ ಸಹಕಾರ ನೀಡುತ್ತಾ ಯುವಕರಿಗೆ ಪ್ರೋತ್ಸಾಹ ನೀಡುತ್ತಿರುವ ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿಯವರು ರಾಮೇಶ್ವರಕಂಬಿ ಕರ್ಕಿ ಯಲ್ಲಿ ನಡೆದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

RELATED ARTICLES  ಉಜ್ವಲ ಯೋಜನೆ ಬಡವರಿಗೆ ವರದಾನವಾಗಿದೆ : ದಿನಕರ ಶೆಟ್ಟಿ

ಕ್ರೀಡೆ ಆರೋಗ್ಯಯುತ ಜೀವನಕ್ಕೆ ಸಹಾಯಕಾರಿ, ಕ್ರೀಡಾಪಟುಗಳು ಹೆಚ್ಚಿದಂತೆ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ತುಕಾರಾಮ ನಾಯ್ಕ,ರವಿ ಗೌಡ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು. ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾ ಸ್ಪೂರ್ತಿ ಮೆರೆದರು.

RELATED ARTICLES  ಆನ್ಲೈನ್ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ವ್ಯಕ್ತಿ