ಸಿದ್ದಾಪುರ: ಕೋಡ್ಸರ-ಮುಠ್ಠಳ್ಳಿ ಸಮೀಪದ ಹೊಲಗದ್ದೆ ಹಾಗೂ ಬಕ್ಕೇಮನೆ ಹತ್ತಿರ ವಿದ್ಯುತ್ ತಂತಿ ಒಂದಕ್ಕೊಂದು ಹೊಡೆದುಕೊಂಡು ಬೆಂಕಿ ಬಿದ್ದು ಕರಡದ ಬೇಣ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಸಂಭವಿಸಿದೆ.

ಬೇಣದಲ್ಲಿ ಕಡಿದಿಟ್ಟ ಕರಡ, ಕಟ್ಟಿಗೆ, ಸೊಪ್ಪು, ದರಕುಗಳೆಲ್ಲ ಸಂಪೂರ್ಣ ಸುಟ್ಟು ಹೋಗಿದೆ. ಸುದ್ದಿ ತಿಳಿದ ತಕ್ಷಣ ಊರವರು, ಸ್ಥಳೀಯರು ಬಂದು ಬೆಂಕಿ ಆರಿಸುವಲ್ಲಿ ಪ್ರಯತ್ನಿಸಿದರೂ ಆಗಲೇ ಎಲ್ಲವೂ ಬೆಂಕಿಗೆ ಆಹುತಿಯಾಗಿದೆ. ಕಳೆದ ವರ್ಷವೂ ಇದೇ ಸಮಯದಲ್ಲಿ ವಿದ್ಯುತ್ ತಂತಿ ಒಂದಕ್ಕೊಂದು ಹೊಡೆದುಕೊಂಡು ಬೆಂಕಿ ಬಿದ್ದು ಹಾನಿ ಸಂಭವಿಸಿತ್ತು.

RELATED ARTICLES  ಭಟ್ಕಳ ತಾಲೂಕಾ ೧೦ನೇ ಸಾಹಿತ್ಯ ಸಮ್ಮೇಳನದ ಜಮಾಖರ್ಚು ಮಂಡನೆ.

ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸ್ಥಳೀಯ ಸಿಬ್ಬಂದಿಗಳಿಗೆ ಜೋತಾಡುತ್ತಿರುವ ವಿದ್ಯುತ್ ತಂತಿಯಿಂದಾಗುತ್ತಿರುವ ಅನಾಹುತದ ಬಗ್ಗೆ ಒಂದು ವರ್ಷದ ಹಿಂದೆಯೇ ತಿಳಿಸಿದ್ದರೂ ಅದನ್ನು ಸರಿಪಡಿಸಿಲ್ಲ. ಕೂಡಲೇ ವಿದ್ಯುತ್ ತಂತಿ ಸರಿಪಡಿಸುವಂತೆ ಗ್ರಾಪಂ ಸದಸ್ಯ ಮಧುಕೇಶ್ವರ ಹೆಗಡೆ ಬಕ್ಕೇಮನೆ, ಸ್ಥಳೀಯರಾದ ಶ್ರೀಪಾದ ಹೆಗಡೆ ಬಕ್ಕೇಮನೆ, ಸುಬ್ರಾಯ ಹೆಗಡೆ ಬಕ್ಕೇಮನೆ, ಹಾಗೂ ಹೊಲಗದ್ದೆ ಊರಿನ ಜನತೆ ಆಗ್ರಹಿಸಿದ್ದಾರೆ.

RELATED ARTICLES  ಕುಮಟಾದ ಅಳ್ವೆಕೋಡಿ ಸಮೀಪ ಟೆಂಪೊ ಪಲ್ಟಿ : ಕಂಗಾಲಾದ ಜನತೆ