ಕಲಬುರಗಿ: ಜಿಲ್ಲೆಯ ಅಫ್ಜಲ್‌ಪುರದ ಗಾಣಗಾಪುರದಲ್ಲಿ ತಂದೆಯೊಬ್ಬ ಎರಡೂವರೆ ತಿಂಗಳ ಹೆಣ್ಣು ಮಗುವನ್ನು ಎದೆಗವಚಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಭಾನುವಾರ ನಡೆದಿದೆ.

ವರದಿಯಾದಂತೆ ಶರಣ ಕವಲಗಿ (35) ಎಂಬಾತ ಕುಡಿದ ಮತ್ತಿನಲ್ಲಿ ಹೆಂಡತಿ ಮನೆಗೆ ತೆರಳಿ ಗಲಾಟೆ ಮಾಡಿದ್ದು ಈ ವೇಳೆ ಜೋಳಿಗೆಯಲ್ಲಿದ್ದ ಮಗುವನ್ನು ಏಕಾಏಕಿ ಎತ್ತಿಕೊಂಡು ಕೋಣೆಯೊಳಗೆ ತೆರಳಿ ಬಾಗಿಲು ಹಾಕಿಕೊಂಡು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಮನೆಯಲ್ಲಿದ್ದವರು ಬಾಗಿಲು ಒಡೆದು ಒಳಹೋಗುವಷ್ಟರಲ್ಲಿ ಮಗು ಸುಟ್ಟು ಕರಕಲಾಗಿತ್ತು. ಶರಣ ಕೂಡ ಬೆಂಕಿಯಲ್ಲಿ ಸುಟ್ಟು ಹೋಗಿದ್ದ.

RELATED ARTICLES  ಉಕ್ರೇನ್ ಹಾಗೂ ರಷ್ಯಾ ಯುದ್ಧ : ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಸಾವು.

ಶರಣ ನಿತ್ಯವೂ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ಹೇಳಲಾಗಿದೆ.

ಪತ್ನಿ ಮತ್ತು ಮನೆಯವರ ರೋದನ ಮುಗಿಲು ಮುಟ್ಟಿದೆ. ಗ್ರಾಮಸ್ಥರು ಮಗುವಿನ ಸಾವಿಗೆ ತೀವ್ರ ಮರುಕ ಪಟ್ಟಿದ್ದಾರೆ.

RELATED ARTICLES  ಕೆಟ್ಟಮೇಲೆ ಬುದ್ದಿ ಬಂತೇ BBMP ?

ಗಾಣಗಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.