ಹೊನ್ನಾವರ :ಶ್ರೀ ಮಹಾಗಣಪತಿ ಕ್ರಿಕೆಟರ್ಸ್ ಗೆಳೆಯರ ಬಳಗ ಅಗ್ರಹಾರ, ಹಳದಿಪುರ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಪ್ರಥಮ ವರ್ಷದ ಸೂಪರ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭವು ಹಳದಿಪುರದ ಆರ್. ಈ. ಎಸ್. ಹೈಸ್ಕೂಲ ಮೈದಾನದಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ಜಿ. ಪಂ. ಸದಸ್ಯರಾದ ಶಿವಾನಂದ ಹೆಗಡೆ, ಕಡತೋಕ ಅವರು ಉದ್ಘಾಟಿಸಿ ಮಾತನಾಡಿ ಶ್ರೀ ಮಹಾಗಣಪತಿ ಕ್ರಿಕೆಟರ್ಸ್ ಗೆಳೆಯರ ಬಳಗವು ಪ್ರಥಮ ವರ್ಷದಲ್ಲೇ ಅತ್ಯಂತ ಅಚ್ಚುಕಟ್ಟಾಗಿ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ. ಮುಂದಿನ ದಿನಗಳಲ್ಲೂ ಈ ಗೆಳೆಯರ ಬಳಗದ ಆಶ್ರಯದಲ್ಲಿ ವಿವಿಧ ವಿನೂತನ ಕಾರ್ಯಕ್ರಮಗಳು ಜರುಗಲಿ ಎಂದು ಶುಭ ಕೋರಿದರು.

ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷ ಶ್ರೀ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ನಮ್ಮ ದೇಶ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿದೆ. ಈ ಯುವಶಕ್ತಿಯು ಸುಸಂಸ್ಕøತರು, ಆರೋಗ್ಯವಂತರೂ ಹಾಗೂ ದೇಶಾಭಿಮಾನಿಗಳಾಗಿ ಬೆಳೆಯಬೇಕು. ದೇಶದ ಅಭಿವೃದ್ಧಿ ಹಾಗೂ ಉತ್ತಮ ಸಮಾಜದ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಇದೀಗ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆಗಳನ್ನು ಎದುರಿಸಿರಿ ಎಂದು ಕರೆ ನೀಡಿದರು. ಹಾಗೂ ಈ ಗೆಳೆಯರ ಬಳಗದವರು ಮುಂದಿನ ದಿನಗಳಲ್ಲಿ ಕೇವಲ ಕ್ರೀಡಾತ್ಮಕ ಚಟುವಚಟಿಕೆಗಳಿಗೆ ಮಾತ್ರ ಸೀಮಿತರಾಗಿರದೆ ಸರಕಾರದ ಕಾರ್ಯಕ್ರಮಗಳನ್ನು ಬಡಜನರಿಗೆ ತಲುಪಿಸುವತ್ತ ಕಾರ್ಯಪ್ರವಬೃತ್ತರಾಗಬೇಕು. ಎಂದು ಹೇಳುತ್ತಾ ಪಂದ್ಯಾವಳಿಯ ಕುರುತು ಮೆಚ್ಚುಗೆ ವ್ಯಕ್ತಪಡಿಸಿದರು.

RELATED ARTICLES  ಯಲ್ಲಾಪುರದಲ್ಲಿ ಯುಗಾದಿ ಸ್ಪರ್ಧೆ: ಸಂತಸದಿಂದ ಭಾಗವಹಿಸಿದ ಮಹಿಳೆಯರು ಮಕ್ಕಳು.

ಮಾಜಿ ಜಿ.ಪಂ. ಸದಸ್ಯರಾದ ಕೃಷ್ಣ ಜೆ. ಗೌಡ ಹಾಗೂ ಇತರೇ ಎಲ್ಲಾ ಗಣ್ಯರೂ ಸೇರಿ ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರಹೊಮ್ಮಿದ ಎಸ್.ಎಸ್.ಪಿ. ಮೂಡಗಣಪತಿ ತಂಡಕ್ಕೆ ಹಾಗೂ ರನ್ನರ್ ಅಪ್ ಆಗಿ ಹೊರಹೊಮ್ಮಿದ ಆಯ್. ಎಫ್. ಸಿ. ಹಳದಿಪುರ ತಂಡಕ್ಕೆ ಬಹುಮಾನಗಳನ್ನು ವಿತರಿಸಿದರು.

RELATED ARTICLES  ಕುಮಟಾ- ಶಿರಸಿ ಹೆದ್ದಾರಿಯನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ

ಇದೇ ವೇಳೆ ಲಕ್ಕಿ ಡ್ರಾ ಕೂಡಾ ನಡೆದಿದ್ದು ಪ್ರಥಮ ಬಹುಮಾನವಾದ ಎಲ್. ಈ.ಡಿ. ಟಿವಿ ಹಾಗೂ ದ್ವಿತೀಯ ಬಹುಮಾನವಾಗಿ ಜಿಯೋ ಫೋನನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹಳದಿಪುರ ಗ್ರಾ. ಪಂ. ಸದಸ್ಯ ಸತೀಶ ಹಬ್ಬು, ಹಳದಿಪುರ ಗ್ರಾ. ಪಂ. ಸದಸ್ಯ ರವಿ ಮೊಗೇರ, ವಿನಾಯಕ, ಗಣಪತಿ ಹಾಗೂ ಗೆಳೆಯರ ಬಳಗದ ಸರ್ವ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶೀಲಾ ಮೇಸ್ತ ಸ್ವಾಗತಿಸಿ ನಿರೂಪಿಸಿ ವಂದಿಸಿದರು.