ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮತದಾರರ ಪಟ್ಟಿ ಇದೀಗ ಸಿದ್ಧವಾಗಿದೆ. ಫೆ. 28 ರವರೆಗೆ ನೂತನ ಮತದಾರರ ಸೇರ್ಪಡೆಯೂ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 11,34,513 ಮತದಾರರು ಇದ್ದಾರೆ. ಪುರುಷ ಮತದಾರರು 5,74,532 ಹಾಗೂ ಮಹಿಳಾ ಮತದಾರರು 5,59,981 ಇದ್ದಾರೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದ್ದಾರೆ.

ಅವರು ಈಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿನ ಮತದಾರರ ಪಟ್ಟಿ ಸಿದ್ಧವಾಗಿದೆ. ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರು 107565 ಹಾಗೂ ಮಹಿಳಾ ಮತದಾರರು 108679 ಇದ್ದಾರೆ. ಒಟ್ಟಾರೆ 216244 ಮತದಾರರು ಇದ್ದಾರೆ. ಮಹಿಳಾ ಮತದಾರರು ಹೆಚ್ಚಿರುವುದು ಇಲ್ಲಿನ ವಿಶೇಷ. ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸಹ 212646 ಮತದಾರರು ಇದ್ದು, ಪುರುಷ ಮತದಾರರು 108468 ಹಾಗೂ ಮಹಿಳಾ ಮತದಾರರು 104178 ಇದ್ದಾರೆ. ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರು 86360 ಹಾಗೂ ಮಹಿಳಾ ಮತದಾರರು 83606 ಇದ್ದಾರೆ. ಒಟ್ಟಾರೆ 169966 ಮತದಾರರು ನೂತನವಾಗಿ ಸಿದ್ಧಪಡಿಸಿದ ಮತದಾರರ ಪಟ್ಟಿಯಲ್ಲಿದ್ದಾರೆ.

RELATED ARTICLES  ನಾಗರಾಜ ನಾಯಕ ತೊರ್ಕೆ ಯವರಿಂದ ಮನೆ ಮನೆ ಭೇಟಿ.

ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರು 90319 ಹಾಗೂ ಮಹಿಳಾ ಮತದಾರರು 88768 ಇದ್ದಾರೆ. ಒಟ್ಟಾರೆ 179087 ಮತದಾರರು ಇದ್ದಾರೆ. ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರು 95745 ಹಾಗೂ ಮಹಿಳಾ ಮತದಾರರು 92632 ಇದ್ದಾರೆ. ಒಟ್ಟಾರೆ 188377 ಮತದಾರರು ಇದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ 86075 ಪುರುಷ ಮತದಾರರು, 82118 ಮಹಿಳಾ ಮತದಾರರು ಇದ್ದಾರೆ. ಒಟ್ಟಾರೆ 168193 ಮತದಾರರು ಇಲ್ಲಿ ದಾಖಲಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 11,34,513 ಮತದಾರರು ಇದ್ದು, ಇವರಲ್ಲಿ ಮಹಿಳಾ ಮತದಾರರು 559981, ಪುರುಷ ಮತದಾರರು 574532 ರಷ್ಟಿದ್ದಾರೆ ಎಂದು ವಿವರಿಸಿದರು. ನಾಮಪತ್ರ ಸಲ್ಲಿಕೆಯ 7 ದಿನ ಮೊದಲು ಸಹ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಅವಕಾಶವಿದೆ. ಜನವರಿ 3 ರಿಂತ ಮತದಾರರ ಪಟ್ಟಿ ನಿರಂತರವಾಗಿ ಪರಿಷ್ಕರಣೆಯಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜಿಲ್ಲೆಯಲ್ಲಿ 1434 ಮತಗಟ್ಟೆಗಳಿವೆ. ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 215, ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ 262, ಕುಮಾಟ ವಿಧಾನಸಭಾ ಕ್ಷೇತ್ರದಲ್ಲಿ 215, ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ 248, ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ 264, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ 230 ಮತಗಟ್ಟೆಗಳು ಇರಲಿವೆ.

RELATED ARTICLES  ಎ.ಟಿ.ಎಂ ರೂಮಿನಲ್ಲಿ ಕಾಣಿಸಿಕೊಂಡ ಬೆಂಕಿ

ಮತದಾರರು ಹೆಸರು, ಮತಗಟ್ಟೆ ಪರಿಶೀಲಿಸಿ :
ಮತದಾರರು ತಮ್ಮ ಹೆಸರು ಮತ್ತು ವಿಳಾಸದ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿಕೊಳ್ಳಲು ಅವಕಾಶವಿದೆ. 9731079899 ಮೊಬೈಲ್ ಸಂಖ್ಯೆಗೆ ಮತದಾರರ ಗುರುತಿನ ಚೀಟಿ ಎಪಿಕ್ ನಂಬರನ್ನು ಎಸ್‍ಎಂಎಸ್ ಕಳುಹಿಸಿ, ವಿಧಾನಸಭಾ ಕ್ಷೇತ್ರ ಮತ್ತು ಮತಗಟ್ಟೆ, ಇನ್ನಿತರ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು ಎಂದರು. ಮತದಾರರ ಪಟ್ಟಿ ಬಗ್ಗೆ ದೂರು ನೀಡುವುದಿದ್ದಲ್ಲಿ ಟೋಲ್ ಫ್ರೀ ದೂರವಾಣಿ ಸಂಖ್ಯೆ 1950ಗೆ ಕರೆ ಮಾಡಬಹುದು. ಅಲ್ಲದೇ ಜಿಲ್ಲಾಧಿಕಾರಿ ಕಚೇರಿಯ ಟೋಲ್ ಫ್ರೀ ದೂರವಾಣಿ ಸಂಖ್ಯೆ 1077 ಕ್ಕೆ ಸಹ ಕರೆ ಮಾಡಿ ತಿಳಿಸಬಹುದು ಎಂದರು.

1434 ಮತಗಟ್ಟೆಗಳಿದ್ದು, ಅವಶ್ಯಕತೆ ಬಿದ್ದರೆ ಹೆಚ್ಚು ಮತದಾರರು ಇರುವ ಕಡೆಗೆ ಮತಗಟ್ಟೆಗಳ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಅಧಿಕಾರಿ ವಲಯದಿಂದ ಸಮೀಕ್ಷೆ ನಡೆದಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.