ಶ್ರೀ ಪಟ್ಟ ವಿನಾಯಕ ಫ್ರೆಂಡ್ಸ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಗೋಕರ್ಣದ ಗೋಗರ್ಭ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭವು ಅದ್ಧೂರಿಯಾಗಿ ಜರುಗಿತು.

ಈ ಕಾರ್ಯಕ್ರಮಕ್ಕೆ ಬಹುಮಾನ ವಿತರಕರಾಗಿ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ನಾಗರಾಜ ನಾಯಕ ತೊಕೆ9 ಅವರು ಮಾತನಾಡಿ ಅತ್ಯುತ್ತಮ ರೀತಿಯಲ್ಲಿ ಯಶಸ್ವಿಯಾಗಿ ಈ ಪಂದ್ಯಾವಳಿ ಜರುಗಿದೆ. ನಮ್ಮ ಸುತ್ತಮುತ್ತಲೂ ಹಲವಾರು ಕ್ರೀಡಾಪಟುಗಳು ಇರುತ್ತಾರೆ. ಆದರೆ ಅವರಿಗೆ ತಮ್ಮ ಸಾಮಥ್ರ್ಯಗಳನ್ನು ಪ್ರದರ್ಶಿಸಲು ಅವಕಾಶ ದೊರೆಯದೇ ಎಲೆಮರೆಯ ಕಾಯಿಗಳಾಗಿರುತ್ತಾರೆ. ಆದರೆ ಇಂತಹ ಪಂದ್ಯಾವಳಿಗಳು ಜರುಗಿದಾಗ ಸ್ಥಳೀಯ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ದೊರೆತಂತಾಗಿ ಅವರ ಸಾಮಥ್ರ್ಯವನ್ನು ಪ್ರದರ್ಶಿಸಲು ಸಾದ್ಯವಾಗುತ್ತದೆ. ಮ್ಯಾನ್ ಆಫ್ ದ ಮ್ಯಾಚ್, ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸಮನ್ ಮುಂತಾದವರನ್ನು ಗುರುತಿಸಿ ಬಹುಮಾನಗಳನ್ನು ವಿತರಿಸಿದಾಗ ಅವರು ಇನ್ನಷ್ಟು ಉತ್ತೇಜಿತರಾಗುತ್ತಾರೆ. ಇಂತಹ ಸಂಘಟನೆಗಳು ಕೇವಲ ಕ್ರೀಡಾಚಟುವಟಿಕೆಗಳಿಗೆ ಆದ್ಯತೆ ನೀಡದೇ ಸಾಂಸ್ಕøತಿಕ, ಶೈಕ್ಷಣ ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಸರಕಾರದ ಯೋಜನೆಗಳನ್ನು ಬಡಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಂಕಣಬದ್ಧರಾಗಬೇಕು. ಆ ಮೂಲಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕ್ರೀಡೆಗಳಿಂದ ಮಾನವ ಉತ್ತಮ ಆರೋಗ್ಯದೊಂದಿಗೆ ಏಕಾಗ್ರತೆಯನ್ನೂ ಪಡೆಯಲು ಸಾಧ್ಯ ಎಂದರು. ಈ ಗೋಗರ್ಭ ಮೈದಾನವು ಒಂದು ವಿಶಿಷ್ಟವಾದ ಮೈದಾನವಾಗಿದ್ದು ತಾವು ಕೂಡಾ ಈ ಮೈದಾನದಲ್ಲಿ ಆಡಿ ಬೆಳೆದವರು. ತಮಗೆ ಮತ್ತೆ ಇಲ್ಲಿಗೆ ಬರಲು ಅವಕಾಶ ಸಿಕ್ಕಿದ್ದು ಸಂತಸದಾಯಕವಾಗಿದೆ ಎಂದು ಆಯೋಜಕರ ಸಂಘಟನಾ ಚಾತುರ್ಯವನ್ನು ಪ್ರಶಂಸಿಸಿದರು.

RELATED ARTICLES  ನಾಪತ್ತೆಯಾಗಿರುವ ಬೋಟ್ ನಲ್ಲಿದ್ದ ಸತೀಶ್ ಈಶ್ವರ ಹರಿಕಂತ್ರ ಮನೆಗೆ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಭೇಟಿ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿ. ಪಂ. ಸದಸ್ಯರಾದ ಪ್ರದೀಪ ನಾಯಕ ದೇವರಬಾವಿ ಅವರು ಮಾತನಾಡಿ ಪಂದ್ಯಾವಳಿಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

RELATED ARTICLES  ಪೂ ಶ್ರೀ ನೇತ್ರಾವತಿ ಮಾತಾಜಿಯವರಿಗೆ ಗೋಕರ್ಣ ಗೌರವ.

ಈ ಸಂದರ್ಭದಲ್ಲಿ ಸುಬ್ರಾಯ ವಾಳ್ಕೆ, ವೆಂಕಟ್ರಮಣ ಕವರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.