ಮಂಗಳೂರು : ದೇಶದಲ್ಲಿ ರಾಜಕಾರಣ ಮಾಡಬೇಕಾದರೆ ಹಿಂದುತ್ವದ ಹೆಸರಲ್ಲೇ ಮಾಡಬೇಕು. ಇಲ್ಲವಾದಲ್ಲಿ ಸಿದ್ದರಾಮಯ್ಯ ಸ್ಥಿತಿ ಬರುತ್ತದೆ.ಮುಂದಿನ ದಿನದಲ್ಲಿ ಸಿದ್ದರಾಮಯ್ಯ ಗೆಲ್ಲಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ್​​ ಹೆಗಡೆ ಮಂಗಳೂರಿನಲ್ಲಿ ಹೇಳಿದ್ದಾರೆ.

ಮಂಗಳೂರಿನ ಜನ ಸುರಕ್ಷಾ ಯಾತ್ರೆಯಲ್ಲಿ ಅನಂತಕುಮಾರ್​​​ ಹೆಗಡೆ ಮಾತನಾಡುತ್ತಾ, ರಾಜ್ಯದಲ್ಲಿ ಬೆವರಿಗಿಂತ ಹೆಚ್ಚು ರಕ್ತ ಹರಿದಿದೆ. ಸಿದ್ದರಾಮಯ್ಯ ಸಂತಾನ ರಾಜ್ಯದಲ್ಲಿ ಇರಬಾರದು.ಎಂತೆಂತ ಭಾಗ್ಯ ಕೊಟ್ರು, ಸಿದ್ದರಾಮಯ್ಯ ಜೊತೆಗೆ ಸಾವಿನ ಭಾಗ್ಯ ಕೂಡಾ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES  ದಿ// ಮಹಾದೇವ ಮಾಸ್ತರ ಮದ್ಗುಣಿಯವರ ಜನ್ಮಶತಮಾನೋತ್ಸವದ ನಿಮಿತ್ತ 25 ಶಾಲೆಗಳಿಗೆ ಪುಸ್ತಕ ಕೊಡುಗೆ.

ಸಿದ್ದರಾಮಯ್ಯ ಸರ್ಕಾರದಲ್ಲಿ 1700ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದೆ. ಪಾತಕ, ಪಾತಕಿಗಳ ಸರ್ಕಾರ ಕೊನೆಗೊಳಿಸಲು ಕರಾವಳಿಯಿಂದ ಬೆಂಗಳೂರಿಗೆ ಸುರಕ್ಷಾ ಯಾತ್ರೆ ಬರುತ್ತಿದೆ ಎಂದು ಗುಡುಗಿದ್ದಾರೆ. ಕರಾವಳಿಯ ಸುನಾಮಿ ಬೆಂಗಳೂರಿಗೆ ತಲುಪೋ ಮೊದಲೇ ರಾಜಿನಾಮೆ ಕೊಡಿ ಇಲ್ಲ ಸುನಾಮಿಯಲ್ಲಿ ಕೊಚ್ಚಿ ಹೋಗ್ತೀರಿ ಎಂದು ಸವಾಲು ಹಾಕಿದ್ದಾರೆ.

RELATED ARTICLES  ಗಜನಿ ಸಂರಕ್ಷಣಾ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕಿ ಶಾರದಾ ಮೋಹನ ಶೆಟ್ಟಿ.