ಯಲ್ಲಾಪುರ ; ತಾಲೂಕಿನಲ್ಲಿರುವ ಮೂರು ಸಮೂಹ ಸಂಪನ್ಮೂಲ ವ್ಯಕ್ತಿಗಳ (ಸಿಆರ್.ಪಿ) ಆಯ್ಕೆ ಕುರಿತು ಶಿಕ್ಷಕರಿಗೆ ಸೂಕ್ತ ಮಾಹಿತಿ ಇಲ್ಲದೆ, ಅವಧಿ ಮುಗಿದಿರುವ ಕುರಿತು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಆರ್.ಪಿ ಹುದ್ದೆಗೆಳನ್ನು ಭರ್ತಿ ಮಾಡುವ ಬಗ್ಗೆ ಶಿರಸಿಯ ಡಯಟ್ ಆನೈನ್ ನಲ್ಲಿ ಮಾಹಿತಿ ಪ್ರಕಟಿಸಿದೆ. ಯಲ್ಲಾಪುರ ತಾಲೂಕಿನಲ್ಲಿ ಗ್ರಾಮೀಣ ಭಾಗದ ಶಾಲೆಗಳಿಗೆ ಮೊಬೈಲ್ ಅಥವಾ ಇಂಟರ್ನೆಟ್ ನ ಯಾವುದೇ ಸೌಲಭ್ಯ ಇಲ್ಲದೆ ಡಯಟ್ ಪ್ರಕಟಿಸಿರುವ ಮಾಹಿತಿಯಿಂದ ಅನೇಕ ಶಿಕ್ಷಕರು ವಂಚಿತರಾಗಿದ್ದಾರೆ. ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಕುರಿತು ಪ್ರತಿಯೊಂದು ಶಾಲೆಗಳಿಗೂ ಸಿಆರ್.ಪಿ ಹಾಗೂ ಇಲಾಖೆಯ ಅಧಿಕಾರಿಗಳು ಅಧಿಕೃತವಾಗಿ ಪತ್ರದ ಮೂಲಕ ಮಾಹಿತಿ ನೀಡಿದಾಗ ಶಿಕ್ಷಕರು ಬಿಇಓ ಕಚೇರಿಯನ್ನು ಸಂಪರ್ಕಿಸಿ ಖಾಲಿ ಉದ್ದೆಗಳ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ. ಈ ಕುರಿತು ಇಲಾಖೆಯ ವೆಬ್ಸೈಟ್ ನಲ್ಲಿ ಡಯಟ್ ಪ್ರಕಟಣೆ ಹೊರಡಿಸಿದ್ದು, ಅನೇಕ ಶಿಕ್ಷಕರು ಮಾಹಿತಿಯಿಂದ ವಂಚಿತರಾಗಿದ್ದಾರೆ.

RELATED ARTICLES  ಭಗವದ್ಗೀತೆಯ ಒಂದು ಅಧ್ಯಯವನ್ನಾದರೂ ಓದಿ : ಎಂ.ಎನ್.ಹೆಗಡೆ

ಅರ್ಜಿ ತುಂಬುವ ಕೊನೆಯ ದಿನಾಂಕದ ಕುರಿತು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಬಹುದಾಗಿತ್ತು ಎಂದು ಅಸಮಾಧಾನಗೊಂಡ ಶಿಕ್ಷಕರು ತಿಳಿಸಿದ್ದಾರೆ. ಸೂಕ್ತ ಮಾಹಿತಿ ಇಲ್ಲದೆ ಅನೇಕ ಶಿಕ್ಷಕರು ಅರ್ಹತೆ ಇದ್ದರೂ ಕೂಡ ಹುದ್ದೆಯಿಂದ ಅವಕಾಶ ವಂಚಿತರಾಗಿದ್ದಾರೆ. ಇಲಾಖೆಯ ಮೇಲಾಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಂಡು ಅರ್ಜಿ ತುಂಬುವ ದಿನಾಂಕವನ್ನು ಮುಂದುಡಬೇಕೆಂದು ಆಗ್ರಹಿಸಿರುವ ಶಿಕ್ಷಕರು, ಈ ಕುರಿತು ಯಾವುದೇ ಕ್ರಮವಾಗದಿದ್ದರೆ ಶಿಕ್ಷಣ ಸಚಿವರ ಬಳಿ ದೂರು ನೀಡಲಾಗುವುದೆಂದು ಎಚ್ಚರಿಸಿದ್ದಾರೆ.

RELATED ARTICLES  ನನ್ನ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ : ಶಿವರಾಮ ಹೆಬ್ಬಾರ

ಶಿಕ್ಷಕರಿಗೆ ಎಲ್ಲ ಮಾಹಿತಿಯನ್ನು ಆನ್ಲೈನ್ ನಲ್ಲಿ ಪ್ರಕಟಿಸಬೇಕೆಂದು ರಾಜ್ಯ ಮಟ್ಟದಲ್ಲಿ ಸೂಚನೆಯಿದೆ. ಯಲ್ಲಾಪುರದಂತಹ ಗ್ರಾಮೀಣ ಭಾಗದಲ್ಲಿ ಮೊಬೈಲ್ ನೆಟ್ವರ್ಕ್, ಇಂಟರ್ನೆಟ್ ಸಂಪರ್ಕ ಅಸಾಧ್ಯ , ಹೀಗಾಗಿ ಆನ್ಲೈನ್ ನಲಿ ಮಾಹಿತಿ ತಲುಪುವುದಿಲ್ಲ , ಹೀಗಾಗಿ 3 ಖಾಲಿ ಇರುವ ಹುದ್ದೆಗಳ ಮಾಹಿತಿಗಳ ಕುರಿತು ಪ್ರತಿಯೊಂದು ಶಾಲೆಗಳಿಗೆ ತೆರಳಿ ಮಾಹಿತಿ ನೀಡುವಂತೆ, ಎಲ್ಲ ಸಿಆರ್.ಪಿಗಳಿಗೆ ಸೂಚಿಸಿದ್ದೇನೆ. ಸಿಆರ್.ಪಿಗಳು ಕೇವಲ 12 ಶಾಲೆಗಳಿಗೆ ಮಾತ್ರ ಮಾಹಿತಿ ನೀಡಿರುವ ಬಗ್ಗೆ ತಿಳಿದುಬಂದಿದೆ. ಇದರಿಂದ ಸಿಆರ್.ಪಿಗಳು ತಪ್ಪು ಮಾಡಿರುವುದು ಕಂಡು ಬಂದಿದೆ ಎಂದು ಎನ್ ಆರ್ ಹೆಗಡೆ, (ಕ್ಷೇತ್ರ ಶಿಕ್ಷಣಾಧಿಕಾರಿ) ತಿಳಿಸಿದ್ದಾರೆ.