ವೇಣೂರು: ಕಣ್ಣಿನಿಂದ ಕಲ್ಲುಗಳು ಉದುರುವ ಘಟನೆಯನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ಬಾಲಕಿಯ ಕಣ್ಣಿನಿಂದ ಇರುವೆಗಳು ಹೊರಬರುತ್ತಿವೆ!

ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ನೆಲ್ಲಿಂಗೇರಿ ಸ.ಕಿ.ಪ್ರಾ. ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ ನೆಲ್ಲಿಂಗೇರಿ ಅಮ್ಮು ಆಚಾರಿ ಅವರ ಪುತ್ರಿಯ ಕಣ್ಣಿನಿಂದ ಕಳೆದ ಒಂದು ವಾರದಿಂದ ದಿನವೊಂದಕ್ಕೆ ಸುಮಾರು ಐದಾರು ಇರುವೆಗಳು ಉದುರುತ್ತಿವೆ.

ಸ್ಥಳೀಯ ಆಸ್ಪತ್ರೆಯಲ್ಲಿ ತೋರಿಸಿದಾಗ ರಾತ್ರಿ ವೇಳೆಯಲ್ಲಿ ಕಿವಿಯ ಮೂಲಕ ಇರುವೆಗಳು ಒಳ ಪ್ರವೇಶಿಸಿರಬೇಕೆಂದು ತಿಳಿಸಿ ಕಣ್ಣಿಗೆ ಬಿಡಲು ಡ್ರಾಪ್‌ ನೀಡಿದ್ದಾರೆ. ಆದರೆ ಕಣ್ಣಿನಿಂದ ಇರುವೆಗಳು ಉದುರುವುದು ನಿಂತಿಲ್ಲ. ಈ ಮಧ್ಯೆ ಭಯಗೊಂಡ ಮನೆಮಂದಿ ಶಿರ್ತಾಡಿಯಲ್ಲಿ ಜೋತಿಷಿಯೊಬ್ಬರ ಬಳಿಗೂ ತೆರಳಿದ್ದಾರೆ. ನಿಮಗೆ ನಾಗದೋಷ ಇದೆ. ನಿಮ್ಮ ಮನೆಸುತ್ತ ನಾಗಸಂಚಾರ ಇದೆ ಎಂದು ಅವರು ಹೇಳಿ ಕಳುಹಿಸಿದ್ದಾರೆ. ಶಿಕ್ಷಕರು ಸೋಮವಾರ ಬಾಲಕಿಯನ್ನು ಮೂಡಬಿದಿರೆ ಕಣ್ಣಿಗೆ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು, ಇರುವೆ ಬರುವುದನ್ನು ವೀಕ್ಷಿಸದೆ ಏನನ್ನೂ ಹೇಳಲಾಗದು ಎಂದು ವೈದ್ಯರು ತಿಳಿಸಿದ್ದಾರೆ.

RELATED ARTICLES  ಯುವಕರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ವಿಷಯದಲ್ಲಿ ಇನ್ಸ್ಟಾಗ್ರಾಮ್ ಮೊದಲ ಸ್ಥಾನದಲ್ಲಿದೆ. !

ಒಂದು ದಿನ ಬೆಳಗ್ಗೆ ಎದ್ದಾಗ ಬಾಲಕಿಗೆ ಕಣ್ಣು ತುರಿಕೆ ಕಂಡು ಬಂದಿದೆ. ಈ ವೇಳೆ ಗಮನಿಸಿದಾಗ ಕಣ್ಣಿನ ಕೆಳಭಾಗದಲ್ಲಿ ಇರುವೆ ಇರುವುದು ಪತ್ತೆಯಾಗಿದೆ. ರಾತ್ರಿ ವೇಳೆ ಬಿದ್ದಿರಬೇಕೆಂದು ಮನೆಮಂದಿ ಸುಮ್ಮನಾದರು. ಆದರೆ ಕೆಲವೇ ಗಂಟೆಗಳಲ್ಲಿ ಮತ್ತೆ ಕಣ್ಣಿನಲ್ಲಿ ಇರುವೆ ಕಾಣಿಸಿಕೊಂಡಿತ್ತು. ಇರುವೆ ಹೊರಬರುವಾಗ ಕಣ್ಣಿನಲ್ಲಿ ಸ್ವಲ್ಪಪ್ರಮಾಣದ ನೋವು ಕಾಣಿಸಿಕೊಳ್ಳುತ್ತಿದೆ ಎಂದು ಬಾಲಕಿ ತಿಳಿಸಿದ್ದಾಳೆ.

RELATED ARTICLES  ಕಾಲುಜಾರಿ ಬಾವಿಗೆ ಬಿದ್ದು ಶಿಕ್ಷಕಿ ಸಾವು.