ಕುಮಟಾ :ತಾಲೂಕಿನ ಬೆಟ್ಕುಳಿಯ ಸಂಗಮ ಯುವಕ ಸಂಘ ಇವರ ಆಶ್ರಯದಲ್ಲಿ ಊರ ನಾಗರಿಕರ ಹಾಗೂ ದಾನಿಗಳ ಸಹಕಾರದೊಂದಿಗೆ ಬೆಟ್ಕುಳಿಯ ಸಂಗಮ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ವಾಲಿಬಾಲ ಪಂದ್ಯಾವಳಿ ಹಾಗೂ ಡಾನ್ಸ್ ಡಿವೋಟರ್ಸ್ ಹೊಸ್ಕಟ್ಟ ಇವರಿಂದ ಡಾನ್ಸ ಧಮಾಕಾ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಕಬಡ್ಡಿ ಅಸೋಸಿಯೇಷನ್‍ನ ಉಪಾಧ್ಯಕ್ಷರಾದ ಸೂರಜ ನಾಯ್ಕ ಸೋನಿ ಅವರು ಮಾತನಾಡಿ ಸಂಗಮ ಯುವಕ ಸಂಘದವರು ಅತ್ಯಂತ ಯಶಸ್ವಿಯಾಗಿ ವಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದಾರೆ. ಇಂತಹ ಕಾರ್ಯಗಳು ಜರುಗುವುದರಿಂದ ಪರಸ್ಪರರಲ್ಲಿ ಸೌಹಾರ್ದತೆ ಉಂಟಾಗುತ್ತದೆ ಜೊತೆಗೆ ಕ್ರೀಡಾಸಕ್ತಿ ಬೆಳೆಯುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಕ್ರೀಡೆಗಳಿಂದ ಮಾನವನ ಸರ್ವಾಂಗೀಣ ಅಭವೃದ್ಧಿ ಸಾಧ್ಯವಿದೆ. ಇಲ್ಲಿ ಕ್ರೀಡೆಗಳೊಂದಿಗೆ ಡಾನ್ಸ ಧಮಾಕಾದಂತಹ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ಥಳೀಯರಿಗೆ ಮನರಂಜನೆಯನ್ನು ನೀಡಿದ ಸಂಗಮ ಯುವಕ ಸಂಘದವರ ಕಾರ್ಯ ಶ್ಲಾಘನೀಯ ಎಂದರು. ಕ್ರೀಡೆಗಳಿಂದ ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯುವುದರಿಂದ ಮನುಷ್ಯನ ಜಡತ್ವ ದೂರವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರ ಮೂಲಕ ಚಟುವಟಿಕೆಯಿಂದಿರಬೇಕು ಎಂದರು. ಇಲ್ಲಿ ಕೇವಲ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಿಗಷ್ಟೇ ಆದ್ಯತೆ ನೀಡದೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ವಿಶೇಷ ಮಕ್ಕಳ ಶಾಲೆ ನಡೆಸುತ್ತಿರುವ ಸಿರಿಲ್ ಲೋಪಿಸ್ ಹಾಗೂ ಪ್ರತಿಭಾವಂತ ವಿಕಲಚೇತನ ಕುಮಾರ ಸಂದೇಶ ಹರಿಕಾಂತ ಹಾಗೂ ಜನತಾ ವಿದ್ಯಾಲಯದ ಶಿಕ್ಷಕರಾದ ರಾಜು ನಾಯ್ಕ ಇವರನ್ನು ಸನ್ಮಾನಿಸಿರುವುದು ಅರ್ಥಪೂರ್ಣವಾಗಿದೆ. ಮುಂದಿನ ದಿನಗಳಲ್ಲೂ ಈ ಸಂಘಟನೆಯಿಂದ ಇನ್ನೂ ಹತ್ತು ಹಲವಾರು ಸಾಮಾಜಿಕ ಕಾರ್ಯಗಳು ಜರುಗಲಿ ಈ ಮೂಲಕ ಸರಕಾರದ ಹತ್ತು ಹಲವಾರು ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ನಿರಂತರವಾಗಿ ಜರುಗಲಿ ಎಂದು ಶುಭ ಕೋರಿದರು.

RELATED ARTICLES  ಖಾಸಗಿ ಸುದ್ದಿ ಸಂಸ್ಥೆಯ ಹೆಸರುನ್ನು ದುರ್ಬಳಕೆ ಮಾಡಿಕೊಂಡು ಹಣಕ್ಕೆ ಬೇಡಿಕೆ : ಆರೋಪಿಗಳು ಅರೆಸ್ಟ್

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಪ್ರದೀಪ ನಾಯಕ ದೇವರಬಾವಿ, ಉದ್ಯಮಿ ಕೃಷ್ಣ ಜೆ. ಗೌಡ, ನಿವೃತ್ತ ಶಿಕ್ಷಕ ಶಂಕರ ನಾರಾಯಣ ಗೌಡ, ಲಕ್ಷ್ಮಣ ಹನುಮಂತ ಹರಿಕಾಂತ ರಾಮ ಕೆ. ಪಟಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES  ಹರಿದಾಸ ಪಿ.ಎನ್ ಹೆಗಡೆ ಇನ್ನಿಲ್ಲ: ಹೃದಯಾಘಾತದಲ್ಲಿ ಕೊನೆಯುಸಿರೆಳೆದ ಕಲಾವಿದ!