ಕುಮಟಾ:ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಡಿ ಮೂಲಿಕೇರಿ, ಮಾದನಗೇರಿ, ಹಿರೇಗುತ್ತಿ, ಪಡುವಣ , ಬರ್ಗಿ, ಮುಗ್ವಾ ಮುಂತಾದ ಗ್ರಾಮಗಳಲ್ಲಿ ಸುಮಾರು 10 ಫಲಾನುಭವಿಗಳಿಗೆ ಅವರವರ ಮನೆ ಬಾಗಿಲಿಗೆ ಈ ಯೋಜನೆಯಡಿ ಗ್ಯಾಸ್ ಕಿಟ್ಗಳನ್ನು ವಿತರಿಸಲಾಗಿದೆ. ಬಡವರ ಕನಸಿಗೆ ಕೊಡಲಿಯೇಟು ನೀಡುವ ದುರುದ್ದೇಶದಿಂದ ಈ ಬಡವರಪರ ಯೋಜನೆಯನ್ನು ಸಕಾಲದಲ್ಲಿ ಬಡವರಿಗೆ ತಲುಪಿಸುವಲ್ಲಿ ಕಾಣದ ರಾಜಕೀಯದ ಕುಟಿಲ ತಂತ್ರವನ್ನು ಹೂಡಿ ಅಡ್ಡಿಯುಂಟು ಮಾಡುತ್ತಿದ್ದರು. ಅದನ್ನು ಲೆಕ್ಕಿಸದೆ ಬಡವರಿಗೆ ಈ ಯೊಜನೆಯ ಸೌಲಭ್ಯವನ್ನು ದೊರಕಿಸಿಕೊಡಲೇಬೇಕೆಂದು ಪಣತೊಟ್ಟು ಎಷ್ಟೇ ಕಷ್ಟ ಬಂದರೂ ಅದನ್ನು ಲೆಕ್ಕಿಸದೇ ಬಡವರ ಹಕ್ಕಿಗಾಗಿ, ನ್ಯಾಯಕ್ಕಾಗಿ, ಸ್ನೇಹಕ್ಕಾಗಿ ಸದಾ ಸಿದ್ಧ ಎಂದು ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಹಾಗೂ ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಅರ್ಹರಿಗೆ ಈ ಯೋಜನೆಯಡಿ ಗ್ಯಾಸ್ ಕಿಟ್ ಗಳನ್ನು ವಿತರಿಸುತ್ತಿರುವುದು ಅಭಿನಂಧನಾರ್ಹ.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಉಜ್ವಲ ಯೋಜನೆ ಬಡವರ ಪರವಾದ ಯೋಜನೆಯಾಗಿದೆ. ಇದರಿಂದ ಕಡುಬಡವರಿಗೆ ತುಂಬಾ ಅನುಕೂಲತೆ ಉಂಟಾಗುತ್ತಿದೆ. ಮಹಿಳೆಯರ ಸ್ವಾಸ್ಥ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಜಾರಿಯಾದ ಈ ಯೋಜನೆಯ ಸೌಲಭ್ಯಗಳಲ್ಲಿ ರಾಜಕೀಯ ತಂತ್ರ ಹೂಡುವುದು ಸರಿಯಲ್ಲ. ಬಡವರಿಗೆ ಅನುಕೂಲತೆ ಒದಗಿಸುವುದು ಎಲ್ಲಾ ರಾಜಕೀಯ ಪಕ್ಷಗಳ ಉದ್ದೇಶವಾಗಿರಬೇಕು. ಬಡವರ ಪರ ಕೆಲಸವನ್ನು ಯಾರೇ ಮಾಡುತ್ತಿದ್ದರೂ ಅವರಿಗೆ ಪ್ರೋತ್ಸಾಹ ನೀಡಬೇಕೇ ವಿನಃ ಅಡ್ಡಿಪಡಿಸುವುದು ಸರಿಯಲ್ಲ. ಜನಪರ ಯಾವುದೇ ಯೋಜನೆಗಳಿದ್ದರೂ ಅವುಗಳನ್ನು ಪ್ರಾಮಾಣ ಕವಾಗಿ ಅವರಿಗೆ ತಲುಪಿಸುವ ನಿಟ್ಟಿನಲ್ಲಿ ನಾವು ಸದಾ ಕಂಕಣಬದ್ಧರಾಗಿರುತ್ತೇವೆ ಎಂದರು.