ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಮುಳ್ಳೇರ್ಯ ಬದಿಯಡ್ಕ ರಾಜಮಾರ್ಗದ ಬದಿಯಲ್ಲಿ ದೇಲಂಪಾಡಿ ಸಮೀಪ ನಿರ್ಮಾಣವಾಗಲಿರುವ ಚಂದ್ರಗಿರಿ ವಲಯ ಕಛೇರಿ ಉದ್ದೇಶಿತ ಸ್ಥಳಕ್ಕೆ ಹವ್ಯಕ ಮಹಾ ಮಂಡಲ ಮತ್ತು ಮುಳ್ಳೇರ್ಯ ಹವ್ಯಕ ಮಂಡಲ ಪದಾಧಿಕಾರಿಗಳು ಭೇಟಿಯಿತ್ತು ಯೋಜನೆಯ ಕುರಿತು ಸಮಗ್ರ ಅವಲೋಕನೆ ಮಾಡಿದರು.

ಮಹಾಮಂಡಲಾದ್ಯಂತವಾಗಿ ಸರ್ವರ ಸಹಕಾರಗಳೊಂದಿಗೆ ಅತಿಶೀಘ್ರದಲ್ಲಿ ಕಾರ್ಯ ಕೈಗೂಡಲಿ ಎಂಬುದಾಗಿ ಮಹಾಮಂಡಲ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು ಹೇಳುತ್ತಾ ಶುಭಾಶಂಸನೆಯಿತ್ತರು. ಮಹಾಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು ಅವರು ಮಾತನಾಡುತ್ತಾ ಅಮೂಲ್ಯ ಸಲಹೆಸೂಚನೆಗಳನ್ನಿತ್ತರು.

RELATED ARTICLES  ಭಾವ, ರಾಗ, ತಾಳ ಮೇಳೈಸಿದರೆ ಜೀವನ ಆಹ್ಲಾದಕರ: ರಾಘವೇಶ್ವರ ಶ್ರೀ

ಮುಳ್ಳೇರ್ಯ ಮಂಡಲ ಉಪಾಧ್ಯಕ್ಷರಾದ ಕುಮಾರ ಪೈಸಾರಿ ಅವರು ಸರ್ವವಿಧ ಸಹಕಾರಗಳನ್ನು ಹಾರೈಸುತ್ತಾ ಧನಸಹಾಯವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಉಲ್ಲೇಖ ಪ್ರಧಾನ ಗೋವಿಂದಬಳ್ಳಮೂಲೆ, ಮುಳ್ಳೇರ್ಯ ಮಂಡಲ ಅಧ್ಯಕ್ಷರಾದ ಪ್ರೊ ಶ್ರೀಕೃಷ್ಣ ಭಟ್, ಸಂಸ್ಕಾರ ಪ್ರಧಾನ ನವನೀತಪ್ರಿಯ ಕೈಪ್ಪಂಗಳ, ವೃತ್ತಿಪರ ಪ್ರಧಾನ ವೈ ಕೆ ಗೋವಿಂದ ಭಟ್, ವಲಯ ಸಹಾಯ ಪ್ರಧಾನ ಡಾ ಶಿವಕುಮಾರ ಅಡ್ಕ,ಮಂಡಲ ಮಾತೃ ಪ್ರಧಾನೆ ಕುಸುಮಾ ಪೆರುಮುಖ, ಮುಷ್ಥಿ ಭಿಕ್ಷಾ ಪ್ರಧಾನೆ ಗೀತಾಲಕ್ಷ್ಮಿ, ಚಂದ್ರಗಿರಿ ವಲಯ ಅಧ್ಯಕ್ಷ ಬಾಲಕೃಷ್ಣ ಭಟ್ ಅಮ್ಮಂಕಲ್ಲು, ಕಾರ್ಯದರ್ಶಿ ರಾಜಗೋಪಾಲ ಕೈಪ್ಪಂಗಳ , ಜಿ ಕೆ ಕುಳೂರು, ಸುಬ್ರಹ್ಮಣ್ಯ ಭಟ್ ಮೀನಗದ್ದೆ, ಸುಬ್ರಹ್ಮಣ್ಯ ಭಟ್ ಅಮ್ಮಂಕಲ್ಲು, ಬಾಲಸುಬ್ರಹ್ಮಣ್ಯ ಭಟ್ ಪೊನ್ನೆಪ್ಪಲ, ಈಶ್ವರ ಭಟ್ ಯಸ್ ಸಾಮರಸ್ಯ ಪ್ರಧಾನರು ಸುಳ್ಯ ವಲಯ ಇವರು ಉಪಸ್ಥಿತರಿದ್ದರು.

RELATED ARTICLES  ಕೃಷಿಕರ ನೆರವಿಗೆ ಭೈರುಂಬೆ ಸೊಸೈಟಿ; ವಿದೇಶಿ ವಿದ್ಯಾರ್ಥಿ ಅಧ್ಯಯನ ವರದಿಯೊಂದಿಗೆ ಯೋಜನೆ ಸಲ್ಲಿಕೆಗೆ ನಿರ್ಧಾರ