ಸಿದ್ದಾಪುರ: ಅರಣ್ಯದಲ್ಲಿ ಗಾಂಜಾ ಕೃಷಿ ಮಾಡಿದ ಆರೋಪದಡಿ ವ್ಯಕ್ತಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ಕರಡಿಗೋಡು ಗ್ರಾಮದ ಅವರೆಗುಂದ ನಿವಾಸಿ ಹಾಲಪ್ಪ (47) ಬಂಧಿತ.

ಅವರೆಗುಂದ ಅರಣ್ಯದಲ್ಲಿ ಗಾಂಜಾ ಕೃಷಿ ಮಾಡಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಬೆಳೆದಿದ್ದ 2ಅಡಿ ಎತ್ತರದ 75ಗಿಡಗಳನ್ನು ಪತ್ತೆ ಹಚ್ಚಿ ಸಿದ್ದಾಪುರ ಠಾಣೆಯಲ್ಲಿ ಹಾಲಪ್ಪ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES  ಪ್ರತೀ ಮೊಬೈಲ್ ಗೆ ಬಂದಿದೆ ಟೆಸ್ಟಿಂಗ್ ಮೆಸೇಜ್

ಕಾರ್ಯಾಚರಣೆಯಲ್ಲಿ ಮಡಿಕೇರಿ ವಿಭಾಗದ ಡಿವೈಎಸ್​ಪಿ ಸುಂದರ್ ರಾಜ್, ವಿರಾಜಪೇಟೆ ತಾಲೂಕು ತಹಸೀಲ್ದಾರ್ ಗೋವಿಂದರಾಜ್, ಸಿಐ ಮೇದಪ್ಪ, ಸಿದ್ದಾಪು ಪಿಎಸೈ ಸುಬ್ರಮಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

RELATED ARTICLES  ಬಸ್ ತಂಗುದಾಣದ ಹಿಂಬದಿಯಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ.