ಕಾರವಾರ: ಕಾರವಾರ ಕಡಲತೀರವನ್ನು ಮೀನುಗಾರರಿಂದ ಕಸಿದುಕೊಂಡು, ಪ್ರವಾಸೋದ್ಯಮದ ಹೆಸರಲ್ಲಿ ಶ್ರೀಮಂತ ಉದ್ಯಮಿಗಳಿಗೆ 20 ವರ್ಷ ಲೀಜ್‌ ಮೇಲೆ ಆಡಿಟೋರಿಯಂ, ಹೋಟೆಲ್‌, ರಿಕ್ರಿಯೇಶನ್‌ ಚಟುವಟಿಕೆಗಳಿಗೆ ನೀಡಿರುವುದರ ಹಿಂದೆ ಅಧಿಕಾರಿಗಳ ಕೈವಾಡವಿದೆ. ಅಲ್ಲದೇ ಸಿಆರ್‌ಝೆಡ್‌ ನಿಯಮಗಳ ಉಲ್ಲಂಘನೆಯಾಗಿದೆ. ಇದರ ವಿರುದ್ಧ ದಲಿತ ಮುಖಂಡರು, ಮೀನುಗಾರರು ಹಾಗೂ ಎನ್‌ಜಿಓ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿದೆ. ಈ ಅರ್ಜಿ ವಿಚಾರಣೆ

ಹಾಗೂ ಅದರ ಮೇಲಿನ ಕೋರ್ಟ್‌ ತಿರ್ಮಾನ ನೋಡಿ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಹೇಳಿದರು.

RELATED ARTICLES  ಘನ ತ್ಯಾಜ್ಯ ವಿಲೇವಾರಿಗೆ ಬಂತು ಕಾಂಪ್ಯಾಕ್ಟರ್ : ಕುಮಟಾದಲ್ಲಿ ಶಾಸಕರಿಂದ ಚಾಲನೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಚ್‌ ಸಂರಕ್ಷಣೆ ಹೆಸರಲ್ಲಿ ಅತ್ಯಂತ ಆಯಕಟ್ಟಿನ ಭೂಮಿಯನ್ನು ಪ್ರವಾಸಿಗರಿಂದ ಕಸಿದು ವಾಣಿಜ್ಯ ಉದ್ದೇಶಗಳಿಗೆ ನೀಡಲಾಗಿದೆ. ಬಡ ಮೀನುಗಾರರನ್ನು ಒಕ್ಕಲೆಬ್ಬಿಸಿದ ಜಿಲ್ಲಾಡಳಿತ ಈಗ ಅದೇ ಬೀಚ್‌ನ್ನು

ಶ್ರೀಮಂತ ಉದ್ಯಮಿಗಳಿಗೆ ಲೀಜ್‌ ನೀಡುತ್ತದೆ ಎಂದರೆ ಏನರ್ಥ. ಇದು ಪ್ರವಾಸೋದ್ಯ ಮದ ಅಭಿವೃದ್ಧಿಯಲ್ಲ. ಕಡಲ ದಂಡೆಯನ್ನು

ಖಾಸಗಿ ಶ್ರೀಮಂತರಿಗೆ ಮಾರಿಕೊಳ್ಳುವುದು ಇದ್ದಂತೆ. ಇದರ ವಿರುದ್ಧ ಹೋರಾಟ ರೂಪಿಸಲಾಗುವುದು. ಕಡಲನ್ನು ಶ್ರೀಮಂತರಿಗೆ ಸಿಆರ್‌ಝೆಡ್‌ ನಿಯಮ ಗಾಳಿಗೆ ತೂರಿ ಕೊಟ್ಟಿದ್ದನ್ನು ಪ್ರಶ್ನಿಸಲಾಗುವುದು ಎಂದರು. ಕಾಳಿ ನದಿ ದಡದಲ್ಲಿ ಉಸುಕಿನ ಉದ್ಯಮ ನಡೆಯುತ್ತಿತ್ತು. ಅದಕ್ಕೆ ಬ್ರೇಕ್‌ ಹಾಕಿ ಉಸುಕು ವ್ಯಾಪಾರಿಗಳ ಕತ್ತು ಹಿಚುಕಲಾಯಿತು. ನೂರಾರು ಕಾರ್ಮಿಕರು ಬೀದಿಗೆ ಬಿದ್ದರು.

RELATED ARTICLES  ಮೀನುಗಾರ ಇಬ್ಬರು ಮುಖಂಡರು ಬಿಜೆಪಿಗೆ.

ಉಸುಕು ಮಾರಾಟ ಮಾಡುತ್ತಿದ್ದ ಸಣ್ಣಪುಟ್ಟ ವ್ಯಾಪಾರಸ್ಥರ ಗೋಳು ಕೇಳಲಿಲ್ಲ. ಉದ್ಯಾನವನದ ಹೆಸರಲ್ಲಿ ಮಂಗಳೂರಿನ ಉದ್ಯಮಿಗೆ ಕಾಳಿ ರಿವರ್‌ ಗಾರ್ಡನ್‌ ನೀಡಲಾಯಿತು. ಇದು ಅಧಿಕಾರಿಗಳು ಮಾಡಿದ ವ್ಯಾಪಾರ ಎಂದು ಟೀಕಿಸಿದ ಮಾಜಿ ಸಚಿವ ಆಸ್ನೋಟಿಕರ್‌

ಇದರ ವಿರುದ್ಧ ಕಾನೂನು ಹೋರಾಟ ಮತ್ತು ಸಾರ್ವಜನಿಕ ಹೋರಾಟ ರೂಪಿಸಲಾಗುವುದು ಎಂದರು.