ಜೀವನಶೈಲಿ, ಅನಾರೋಗ್ಯಕರ ಆಹಾರ ಕ್ರಮದಿಂದ ಹಲವಾರು ರೀತಿಯ ಸಮಸ್ಯೆಗಳು ದೇಹವನ್ನು ಭಾದಿಸುವುದು. ಇದರಲ್ಲಿ ಪ್ರಮುಖವಾಗಿ ಮಲಬದ್ಧತೆ. ಮಲಬದ್ಧತೆಯಿರುವ ವ್ಯಕ್ತಿ ಪ್ರತೀ ದಿನ ಬೆಳಿಗ್ಗೆ ಶೌಚಾಲಯದಲ್ಲಿ ತುಂಬಾ ಹೊತ್ತು ಕಳೆಯಬೇಕಾಗುತ್ತದೆ ಮತ್ತು ದೇಹದಲ್ಲಿ ಇರುವಂತಹ ತ್ಯಾಜ್ಯ ಹೊರಹಾಕಲು ಭಾರೀ ಶ್ರಮ ಪಡಬೇಕಾಗುತ್ತದೆ. ಕೆಲವು ಸಲ ಮಲ ಹೊರಬರಬಹುದು. ಆದರೆ ಇನ್ನು ಕೆಲವೊಮ್ಮೆ ಪ್ರಯತ್ನ ವ್ಯರ್ಥವಾಗಿ ನೋವು ಉಂಟು ಮಾಡಬಹುದು. ಅಧಿಕ ಪಿಷ್ಠ ಮತ್ತು ಕಡಿಮೆ ನಾರಿನಾಂಶ ಇರುವ ಆಹಾರ ಸೇವನೆ ಮಾಡುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಆಯಂಟಿಬಯೋಟಿಕ್ಸ್ ನಂತಹ ಕೆಲವೊಂದು ಔಷಧಿ, ಹಾರ್ಮೋನು ಬದಲಾವಣೆ ಇತ್ಯಾದಿಗಳಿಂದ ಮಲಬದ್ಧತೆ ಸಾಮಾನ್ಯವಾಗಿ ಕಾಡುವುದು.
ಇನ್ನು ಕೆಲವು ವ್ಯಕ್ತಿಗಳಲ್ಲಿ ಕೆಮ್ಮು ಆಗಾಗ ಬಂದು ಕಾಡುತ್ತಾ ಇರುತ್ತದೆ. ಒಣ ಕೆಮ್ಮು ಪ್ರಮುಖವಾದ ಶ್ವಾಸಕೋಶದ ಸಮಸ್ಯೆಯಾಗಿದೆ. ಒಣ ಕೆಮ್ಮು ಇರುವ ವ್ಯಕ್ತಿಗೆ ಹಲವಾರು ಸಮಸ್ಯೆಗಳು ಕಾಣಿಸುತ್ತದೆ. ಹವಾಮಾನ ಬದಲಾವಣೆ, ಧೂಳಿನ ಅಲರ್ಜಿ, ಪ್ರಾಣಿಗಳ ಅಲರ್ಜಿ ಇತ್ಯಾದಿಗಳು ಒಣ ಕೆಮ್ಮಿಗೆ ಪ್ರಮುಖ ಕಾರಣವಾಗಿದೆ. ಅಲರ್ಜಿಯಿಂದ ಉಂಟಾಗುವ ಕಿರಿಕಿರಿಯಿಂದ ಒಣ ಕೆಮ್ಮು ಕಾಣಿಸಿಕೊಳ್ಳುವುದು ಸಾಮಾನ್ಯ. ವೈರಲ್ ಜ್ವರ, ಶ್ವಾಸಕೋಶದ ಸಮಸ್ಯೆಗಳಾದ ಶ್ವಾಸನಾಳದ ಒಳಪೊರೆಯ ಉರಿಯೂತ, ಅತಿಯಾದ ಧೂಮಪಾನ, ಕ್ಷಯರೋಗ ಇತ್ಯಾದಿಗಳು ಒಣಕೆಮ್ಮಿಗೆ ಕಾರಣವಾಗಿರಬಹುದು. ವೈದ್ಯರನ್ನು ಭೇಟಿಯಾಗಿ ಒಣಕೆಮ್ಮಿಗೆ ಚಿಕಿತ್ಸೆ ಪಡೆಯುವುದು ತುಂಬಾ ಒಳ್ಳೆಯ ವಿಧಾನ. ಆಯುರ್ವೇದ ಔಷಧಿಯನ್ನು ಮನೆಯಲ್ಲೇ ತಯಾರಿಸಿಕೊಂಡು ಮಲಬದ್ಧತೆ ಮತ್ತು ಒಣಕೆಮ್ಮನ್ನು ನಿವಾರಣೆ ಮಾಡುವುದು ಹೇಗೆ ಎಂದು ತಿಳಿಯಿರಿ.
ಬೇಕಾಗುವ ಸಾಮಗ್ರಿಗಳು

RELATED ARTICLES  ಐಒಸಿಎಲ್'ನಲ್ಲಿ ಜೂನಿಯರ್ ಆಪರೇಟರ್ ಹುದ್ದೆಗಳಿಗೆ ನೇಮಕಾತಿ.

ಬಿಸಿ ತುಪ್ಪ 1 ಚಮಚ

ಬಿಸಿ ನೀರು ಒಂದು ಲೋಟ

 

 

ವಿಧಾನ

ಒಂದು ಚಮಚ ಬಿಸಿ ತುಪ್ಪವನ್ನು ಸೇವಿಸಿ

RELATED ARTICLES  ವಿದ್ಯಾರ್ಥಿವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನ: ಅರ್ಜಿ ಸಲ್ಲಿಕೆ ದಿನ ಹಿಂದೂಡಿಕೆ: ಮನಿಸಬೇಕಿದೆ ಪಾಲಕರು.

ತಕ್ಷಣ ಒಂದು ಲೋಟ ಬಿಸಿ ನೀರು ಸೇವಿಸಿ.
ಮಲಬದ್ಧತೆಯಿದ್ದರೆ ಉಪಹಾರಕ್ಕೆ ಮೊದಲು ಇದನ್ನು ಸೇವನೆ ಮಾಡಿ.

ಒಣ ಕೆಮ್ಮಿನ ಸಮಸ್ಯೆಯಿದ್ದರೆ ರಾತ್ರಿ ಮಲಗುವ ಮೊದಲು ಇದನ್ನು ಸೇವಿಸಿ