ಕುಮಟಾ: ಜನತೆಯ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಉಗ್ರ ಹೋರಾಟಕ್ಕೂ ಸಿದ್ಧ ಎಂದು ದಿನಕರ ಶೆಟ್ಟಿ ಸತ್ವಾಧಾರ ನ್ಯೂಸ್ ಗೆ ತಿಳಿಸಿದರು. ಅವರು ಕುಮಟಾದಲ್ಲಿ ಆಧಾರ್ ಕಾರ್ಡ ನೋಂದಾವಣೆ ಕುರಿತು ಎದ್ದಿದ್ದ ಗೊಂದಲ ಹಾಗೂ ಜನತೆಗೆ ಉಂಟಾಗುತ್ತಿದ್ದ ಸಮಸ್ಯೆ ಆಲಿಸಿ, ಜನತೆಗೆ ಭರವಸೆ ನೀಡಿದರು.

ಆದಾರ ಕಾರ್ಡನಲ್ಲಿ ನಮೂದಿಸಿದ ವ್ಯಕ್ತಿಯ ಹೆಸರು , ಜನ್ಮದಿನಾಂಕ ಮತ್ತು ವಿಳಾಸ ಮತ್ತು ಬ್ಯಾಂಕ್ ಖಾತೆಯಲ್ಲಿ ಇರುವ ವಿಳಾಸ ಹೆಸರು ಹಾಗು ಮಾಹಿತಿ ಒಂದೇ ಅಗಿರಬೇಕೆಂಬ ಕೆಂದ್ರ ಸರಕಾರದ ಆದೇಶದ ಮೇರೆಗೆ ಹಾಗು ಹೊಸ ಅದಾರ್ ಕಾರ್ಡ ನೀಡುವ ಜವಾಬ್ದಾರಿಯನ್ನ ಖಾಸಗಿ ಸಂಸ್ಥೆಗೆ ನೀಡಿದ್ದು .ಖಾಸಗೀ ಸಂಸ್ಥೆಯವರು ಈ ಕುರಿತು ವ್ಯವಸ್ಥೆ ಮಾಡಲು ಕುಮಟಾದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನವರಿಗೆ ನೀಡಿದ್ದಾರೆಂದು ತಿಳಿದು ಬಂದಿದ್ದು.

RELATED ARTICLES  ಸಂದಿತು ಶಕ್ತಿ ದೇವತೆಗೆ ಪೂಜೆ, ಸಂಪನ್ನವಾಯ್ತು ಕದ್ರಾ ಜಾತ್ರೆ!

ವಿಕಾಸ ಗ್ರಾಮೀಣ ಬ್ಯಾಂಕ್ ಗೆ ನೂರಾರು ಗ್ರಾಹಕರು ಆಧಾರ ಕಾರ್ಡ ನೊಂದಣಿಗಾಗಿ ಆಗಮಿಸುತ್ತಿದ್ದು ಗ್ರಾಹಕರು ಪರದಾಡುವಂತಾಗಿದೆ ಎಂಬ ವಿಷಯ ತಿಳಿದ ಮಾಜಿ ಶಾಸಕರಾದ ದಿನಕರ ಶೆಟ್ಟಿಯವರು ಬ್ಯಾಂಕ್ ಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

RELATED ARTICLES  ಆ್ಯಸಿಡ್ ಚೆಲ್ಲಿ ಮೂವರಿಗೆ ಗಾಯ : ಕಾರವಾರದಲ್ಲಿ ದುರ್ಘಟನೆ.

ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಿ ಒಂದು ವಾರದ ಒಳಗಾಗಿ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ನೀಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಿಳಸಿದರು.

ರೀಜನಲ್ ಮೆನೇಜರ್ ಪಿ ಡಿ ದೇಸಾಯಿ ಮಾತನಾಡಿ ನಾವು ಸಾರ್ವಜನಿಕರಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ನಮ್ಮಲ್ಲಿ ಒಂದಿ ದಿನಕ್ಕೆ ೫೦ ಕಾರ್ಡಗಳನ್ನ ನೀಡುವ ಸಾದ್ಯತೆ ಇದ್ದು ಅದನ್ನ ಮಾಡುತ್ತಿದ್ದೇವೆ ಇನ್ನು ಕೆಲವು ಕಡೆ ಕಾರ್ಡ ನೀಡುವ ವ್ಯವಸ್ಥೆ ಯನ್ನ ಸರಕಾರ ಮಾಡಿದರೆ ಸಾರ್ವಜನಿಕರಿಗೆ ಸಹಕಾರ ಅಗಬಹುದು ಎಂದಿದ್ದಾರೆ.