ಗೋಕರ್ಣ: ಆಲದಕೆರೆಯ ಶ್ರೀ ಪಂಚಬ್ರಹ್ಮ ಯುವಕ ಸಂಘದ ಆಶ್ರಯದಲ್ಲಿ 14 ನೇ ವರ್ಷದ ಅಂತರಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನೆಯನ್ನು ಆಲದಕೆರೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಪಂದ್ಯಾವಳಿಯನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪಂಚಬ್ರಹ್ಮ ಯುವಕ ಸಂಘದವರು ಸತತ 14 ನೇ ವರ್ಷದಲ್ಲಿ ಈ ಪಂದ್ಯಾವಳಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ದೇಶದ ಅಭಿವೃದ್ಧಿ ಹಾಗೂ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಇಂತಹ ಯುವಕ ಶಕ್ತಿಯ ಪಾತ್ರ ಮಹತ್ವವಾದದ್ದು. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದಿಂದ ಉತ್ತಮ ಆರೋಗ್ಯದೊಂದಿಗೆ ಮನಸ್ಸು ನವಚೈತನ್ಯದಿಂದ ಕೂಡಿರುತ್ತದೆ. ಆಲಸ್ಯವನ್ನು ತೊಲಗಿಸಿ ಸದಾ ಚಟುವಟಿಕೆಯಿಂದಿರುವಲ್ಲಿ ಈ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕ್ರೀಡೆಗಳೊಂದಿಗೆ ಇತರೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಸರಕಾರದ ಯೋಜನೆಗಳನ್ನು ಬಡ ಜನರಿಗೆ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಜಾಗೃತರಾಗಬೇಕು. ಕಳೆದ ಮೂರು ವರ್ಷಗಳಿಂದ ಈ ಕಾರ್ಯಕ್ರಮಕ್ಕೆ ತಾವು ಆಗಮಿಸುತ್ತಿದ್ದು ಕಳೆದ ಬಾರಿ ಪದ್ಮಶ್ರೀ ಪುರಸ್ಕøತೆ ಸುಕ್ರಿ ಬೊಮ್ಮ ಗೌಡ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದನ್ನು ಸ್ಮರಿಸಿಕೊಂಡರು. ಹಾಗೂ ಹಾಲಕ್ಕಿ ಸಮಾಜದವರು ಶೈಕ್ಷಣ ಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಮುಂದುವರಿಯುವಲಿ ಇಂತಹ ಸಂಘಟನೆ ಸಾಂಕೇತಿಕವಾಗಿದೆ ಎಂದರು.

RELATED ARTICLES  ಫೇ ೨೩ ರಿಂದ ಹೊಸಾಡದಲ್ಲಿ ಆಲೆಮನೆ ಹಬ್ಬ.

ಗೋವಿಂದ ಗೌಡ ಅವರು ಕ್ರೀಡಾಂಗಣದ ಉದ್ಘಾಟನೆಯನ್ನು ನೇರವೇರಿಸಿದರು.

ತಾಲೂಕ ಪಂಚಾಯತ ಸದಸ್ಯರಾದ ಮಹೇಶ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಮಹಾಬಲೇಶ್ವರ ಗೌಡ, ಮಂಗಳ ಮೂರ್ತಿ ಸಭಾಹಿತ, ರಾಮಮೂರ್ತಿ ನಾಯಕ, ಗಜಾನನ ರಾಮ ನಾಯಕ, ಶಂಕರ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES  ಶಿರಸಿಯಲ್ಲಿ ಮತ್ತೊಮ್ಮೆ ಕಳ್ಳರ ಕೈಚಳಕ; ಮೊಬೈಲ್ ಅಂಗಡಿಗೆ ಖನ್ನ