ಕುಮಟಾ: ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಮಟಾ, ಉತ್ತರ ಕನ್ನಡ, ಐ.ಕ್ಯೂ.ಎ.ಸಿ. ಮತ್ತು ಮಹಿಳಾ ಅಭ್ಯುದಯ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಕುಮಟಾದ ಪುರಭವನದಲ್ಲಿ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಉದ್ಘಾಟಿಸಿ, ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

RELATED ARTICLES  ಕುಮಟಾದಲ್ಲಿ ಅ೨ ಕ್ಕೆ ಗೋಸಂಜೀವಿನಿ ಜೋಳಿಗೆ ಅಭಿಯಾನ ಮತ್ತು ಅಭಯಾಕ್ಷರ

ಭಾರತದಲ್ಲಿ ಮಹಿಳಾ ದಿನಾಚರಣೆಗೆ ಸಾಮಾಜಿಕ ಅಥವಾ ರಾಜಕೀಯ ಹಿನ್ನೆಲೆ ಏನೂ ಇಲ್ಲವಾದರೂ, ಭಾರತದಲ್ಲೂ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಸಾಧಾರಣವಾಗಿ ಗಂಡಸರು ಮಹಿಳೆಯರಿಗೆ ತಮ್ಮ ಗೌರವವನ್ನು ವ್ಯಕ್ತಪಡಿಸುತ್ತಾರೆ. ಆದರೆ ಭಾರತಕ್ಕೆ ಮಹಿಳಾ ಸಮಾನತೆ ಎಂಬುದು ಹೊಸ ಕಲ್ಪನೆಯೇನಲ್ಲ. ಅರ್ಧನಾರೀಶ್ವರ ಎಂಬ ಅದ್ಭುತ ಕಲ್ಪನೆ ಹುಟ್ಟಿದ್ದು ಭಾರತದಲ್ಲಿ. ಪ್ರಕೃತಿ ಅಥವಾ ಹೆಣ್ಣು ಹಾಗೂ ಪುರುಷ ಅಥವಾ ಗಂಡು ಒಬ್ಬರಿಂದೊಬ್ಬರು ಬೇರೆ ಅಲ್ಲ, ಸೃಷ್ಟಿಯಲ್ಲಿ ಇವರಿಬ್ಬರದು ಸಮಪಾಲು ಎಂಬುದೇ ಅರ್ಧನಾರೀಶ್ವರ ಎಂಬ ಕಲ್ಪನೆಯ ಸಂಕ್ಷಿಪ್ತ ಅರ್ಥ. ಪಶ್ಚಿಮ ರಾಷ್ಟ್ರಗಳ ಸಂಸ್ಕೃತಿಯಲ್ಲೆಲ್ಲೂ ಹೆಣ್ಣಿಗಿಲ್ಲದ ದೈವಿಕ ಪಟ್ಟವನ್ನು ಕೊಟ್ಟಿದ್ದು ಭಾರತೀಯರು ಎಂದರು.

RELATED ARTICLES  ಪಲ್ಟಿಯಾದ ಮೀನು ಲಾರಿ : ಒಳಗೆ ನೋಡಿದ್ರೆ ಇತ್ತು ದನದ ಮಾಂಸ..!