ಯಲ್ಲಾಪುರ : ಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಎಲ್ಲ ರೀತಿಯಲ್ಲಿ ಸಜ್ಜಾಗಿದೆ, ಪಕ್ಷದ ಹಿರಿಯರ ಮಾರ್ಗದರ್ಶನದ ಪ್ರಕಾರ ಪ್ರತಿ ಬೂತಗಳಲ್ಲಿ 9 ಜನರ ತಂಡವನ್ನು ರಚಿಸಲಾಗಿದೆ. ಕ್ಷೇತ್ರದ 230 ಬೂತಗಳಲ್ಲಿ ಬಿಜೆಪಿ ತಂಡ ನೇಮಕವಾಗಿದೆ ಎಂದು ಯಲ್ಲಾಪುರ ತಾಲೂಕು ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಹಂಡ್ರಮನೆ ಹಾಗೂ ಯಲ್ಲಾಪುರ ಬಿಜೆಪಿ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಸಾದ ಹೆಗಡೆ ತಿಳಿಸಿದ್ದಾರೆ.

RELATED ARTICLES  ಆಟವಾಡುವ ಸಂದರ್ಭದಲ್ಲಿ ಬಿದ್ದ ಬಾಲಕಿ ಸಾವು.

230 ಬೂತಗಳ 2100 ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು `ನವಶಕ್ತಿ` ಹೆಸರಿನಲ್ಲಿ ಮಾರ್ಚ್ 9ರಂದು ಬೆಳಿಗ್ಗೆ 10.30ಕ್ಕೆ ಯಲ್ಲಾಪುರದ ಈಶ್ವರಿ ವಿಶ್ವವಿದ್ಯಾಲಯ ದಲ್ಲಿ ಜರುಗಿಸಲಾಗುವುದು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಮಾವೇಶವನ್ನು ಉದ್ಘಾಟಿಸಲಿದ್ದು, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ ಜೀ, ಕ್ಷೇತ್ರದ ಚುನಾವಣಾ ಉಸ್ತುವಾರಿ ಪ್ರಹ್ಲಾದ ಜೋಶಿ ಹಾಗೂ ಪಕ್ಷದ ಜಿಲ್ಲಾ ಅಧ್ಯಕ್ಷ ಕೆ. ಜಿ ನಾಯ್ಕ ಉಪಸ್ಥಿತಿಯಲ್ಲಿ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದಿದ್ದಾರೆ.

RELATED ARTICLES  ಇಂಡೋನೇಷ್ಯಾದಲ್ಲಿ ಗಾಳಿಪಟ ಹಾರಿಸಿ ಸಂಭ್ರಮಿಸಿದ ನಮೋ!