ಶಿರಸಿ : ಜೆಡಿಎಸ್ ರಾಜ್ಯ ಯುವ ರೈತ ದಳದ ರಾಜ್ಯಾಧ್ಯಕ್ಷೆ ಚೈತ್ರ ಗೌಡ ಸಮ್ಮುಖದಲ್ಲಿ ಇತ್ತೀಚೆಗೆ ಶಿರಸಿಯ ಜೆಡಿಎಸ್ ಕಚೇರಿಯಲ್ಲಿ ಹಲವಾರು ಕಾರ್ಮಿಕ ಮುಖಂಡರು ಜೆಡಿಎಸ್ ಪಕ್ಷವನ್ನು ಸೇರಿದರು.

ಈ ಸಂದರಭದಲ್ಲಿ ಮಾತನಾಡಿದ ಚೈತ್ರ ಗೌಡ, ಪಕ್ಷದ ಶಿಷ್ಟಾಚಾರದ ಕುರಿತು ಮಾಹಿತಿ ನೀಡಿ, ಪಕ್ಷದಲ್ಲಿ ಹೇಗೆ ನಡೆದುಕೊಳ್ಳಬೇಕು, ಪ್ರಣಾಳಿಕೆ ಕುರಿತು ಮಾಹಿತಿ ನೀಡಿ, ಜೆಡಿಎಸ್ ಪಕ್ಷದ ಗೆಲುವಿಗೆ ಅವಿರತವಾಗಿ ಶ್ರಮಿಸಬೇಕೆಂದು ಕರೆ ನೀಡಿದರು.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 03-04-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ತ್ರಿವೇಣಿ ಗೌಡ, ಜೆಡಿಎಸ್ ಪಕ್ಷಕ್ಕೆ ಯುವ ಜನತೆಯ ಅಗತ್ಯತೆಯಿದೆ, ಯುವಕರ ಸೇರ್ಪಡೆ ಪಕ್ಷಕ್ಕೆ ಇನ್ನಷ್ಟು ಭಲ ತಂದುಕೊಟ್ಟಿದೆ ಎಂದರು.

RELATED ARTICLES  ಅರಭಾಂವಿ ಕ್ಷೇತ್ರದಲ್ಲಿ ವಿರೋಧಿ ಪಕ್ಷಗಳ ಠೇವಣ ಜಪ್ತು ಮಾಡಿ, ಬಾಲಚಂದ್ರ ಅವರನ್ನು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ಗುಜರಾತ್ ನವಸಾರೆ ಸಂಸದ ಚಂದ್ರಕಾಂತ ಪಾಟೀಲ

ತಾಲೂಕ ಅಧ್ಯಕ್ಷ ಸುಭಾಷ ಮಂಡೂರು ಮಾತನಾಡಿ, ಸೇರ್ಪಡೆಗೊಂಡವರು ಬೂತ ಸಮಿತಿಯಲ್ಲಿ ಅವಕಾಶ ನೀಡಲಾಗುವುದೆಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆನಂದ ಗೌಡ್ರು, ಪ್ರಮುಖರಾದ ಇಮ್ರಾನ್ ರಜಾಕ್ ಹರೀಶ ಹೆಗಡೆ ಮುಂತಾದವರಿದ್ದರು.