ಬೆಂಗಳೂರು: ಪ್ರತ್ಯೇಕ ನಾಡಧ್ವಜ ಹೊಂದುವ ಕರ್ನಾಟಕ ಜನತೆಯ ಕನಸು ನನಸಾಗಿದ್ದು, ಗುರುವಾರ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಕನ್ನಡನಾಡಿನ ನಾಡಧ್ವಜವನ್ನು ಅನಾವರಣಗೊಳಿಸಿದ್ದಾರೆ.
ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದು ಹಳದಿ, ಬಿಳಿ ಮತ್ತು ಕೆಂಪು ಬಣ್ಣದ ನಾಡಧ್ವಜವನ್ನು ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಅನಾವರಣಗೊಳಿಸಿದರು.
ನಾಡಧ್ವದ ಸಮಿತಿಕೊಟ್ಟ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ನಾಡಧ್ವಜ ಸಿದ್ಧಪಡಿಸಿದ್ದು. ಇದೀಗ ನಾಡಧ್ವಜವನ್ನು ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದ್ದಾರೆ. ಇನ್ನು ನಾಡಧ್ವಜ ಅನಾವರಣ ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರು, ರಾಜ್ಯ ಸಚಿವರು ಸೇರಿದಂತೆ ಪ್ರಮುಖ ಸಾಹಿತಿಗಳು ಪಾಲ್ಗೊಂಡಿದ್ದರು.
ಸಾಹಿತಿ ಹಂಪನಾಗರಾಜಯ್ಯ ಅವರು ತ್ರಿವರ್ಣ ಬಣ್ಣದ ನಾಡಧ್ವಜವನ್ನು ವಿನ್ಯಾಸ ಮಾಡಿದ್ದು, ಇಂದು ರಾಜ್ಯ ಸಂಪುಟ ಸಭೆಗೆ ಹಸ್ತಾಂತರಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಾಡಧ್ವಜಕ್ಕೆ ಅನುಮೋದನೆ ನೀಡಿದೆ. ಇದೀಗ ಸರ್ಕಾರ ಅನುಮೋದನೆ ನೀಡಿರುವ ನಾಡಧ್ವಜಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಬೇಕಿದ್ದು, ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದ್ದೇ ಆದರೆ ಪ್ರತ್ಯೇಕ ನಾಡಧ್ವಜ ಹೊಂದಿದ ಮೊದಲ ರಾಜ್ಯ ಎಂಬ ಕೀರ್ತಿಗೆ ಕರ್ನಾಟಕ ಭಾಜನವಾಗುತ್ತದೆ.

RELATED ARTICLES  ಯಶಸ್ವಿಯಾದ ರಾಮಾಯಣ ಮಾಸಾಚರಣೆ ಹಾಗೂ ಗುರುವಂದನೆ