ಯಲ್ಲಾಪುರ ; ಮಳೆ ದೇವರು ಕೊಟ್ಟರೆ ಅದನ್ನು ತಡೆದು ನಿಲ್ಲಿಸುವ ಕೆಲಸ ನಮ್ಮಿಂದಾಗಬೇಕು, ಸ್ಥಳೀಯ ಗೆಳೆಯರ ಬಳಗ ನಿರ್ಮಾಣ ಮಾಡುತ್ತಿರುವ ನೀರಿಂಗಿಸುವ ಕಾರ್ಯ ಶ್ಲಾಘನೀಯವಾಗಿದ್ದು ಎಂದು ಶಿರಸಿ ಉಪ ವಿಭಾಗಾಧಿಕಾರಿ ರಾಜು ಮೊಗವೀರ ಹೇಳಿದರು.
ಅವರು ಹಾಸಣಗಿ ಗ್ರಾಮದ ಜೋಗಭಟ್ರ ಕೇರಿಯಲ್ಲಿ ಸ್ಥಳೀಯ ಗ್ರಾಮಸ್ಥರು ಕಟ್ಟಿದ, ಗೆಳೆಯರ ಬಳಗ ನಿರ್ಮಾಣ ಮಾಡುತ್ತಿರುವ ಕೆರೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಆರ್.ಎನ್ ಹೆಗಡೆ ಗೋರ್ಸಗದ್ದೆ, ಇಂದಿನ ಏರುತ್ತಿರುವ ತಾಪಮಾನದಿಂದಾಗಿ ಅಂತರ್ಜಲ ಬತ್ತುತ್ತಿದ್ದು, ಪರ್ಯಾಯವಾಗಿ ನೀರಿಂಗಿಸುವ ಕೆಲಸ ಆಗಬೇಕಿದೆ. ಸಂಘ ಸಂಸ್ಥೆಗಳು ಸಮಾಜ ಮತ್ತು ಸಂಘ-ಸಂಸ್ಥೆಗಳು ಇಂತಹ ಉತ್ತಮ ಕಾರ್ಯಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿವಾನಂದ ಕಳವೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಂಚಿಕೇರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ವಿ.ಕೆ ಈ ಕಾರ್ಯಕ್ಕೆ ತಾವೂ ಕೈಜೋಡಿಸುವುದಾಗಿ ತಿಳಿಸಿದರು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಆರ್.ಜಿ ಹೆಗಡೆ ಸ್ವಾಗತಿಸಿದರು. ಗುರುಪ್ರಸಾದ ಭಟ್ ಕಾರ್ಯಕ್ರಮ ನಿರ್ವಹಿಸಿದರು.