ಯಲ್ಲಾಪುರ: ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರ ಪ್ರಯುಕ್ತ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಎಲ್.ಇ.ಡಿ. ಪರದೆಯುಳ್ಳ ಪ್ರಚಾರ ವಾಹನವನ್ನು ಒದಗಿಸಲಾಗಿದ್ದು, ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಪ್ರಚಾರದ ನಿಟ್ಟಿನಲ್ಲಿ ಜನತಾದಳ ಜಾತ್ಯಾತೀತ ಪಕ್ಷವು ಹೊಸ ಹೆಜ್ಜೆಯನ್ನು ಇಟ್ಟಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಪಕ್ಷದ ಘೋಷಿತ ಅಭ್ಯರ್ಥಿ ಎ.ರವೀಂದ್ರ ನಾಯ್ಕ ತಿಳಿಸಿದ್ದಾರೆ.

RELATED ARTICLES  ವಿದ್ಯಾರ್ಥಿನಿಯೋರ್ವಳಿಗೆ ಕೊರೋನಾ ಪಾಸಿಟಿವ್ : ತರಗತಿ ಅರ್ಧಕ್ಕೆ ಬಿಟ್ಟು ತೆರಳಿದ ವಿದ್ಯಾರ್ಥಿಗಳು

“ಅಭಿವೃದ್ಧಿಗಾಗಿ ಅಧಿಕಾರ”-ಜನಸಾಮಾನ್ಯರ ಸರ್ಕಾರ ಎಂಬ ಘೋಷಣೆ ಹೊತ್ತ ವಿಕಾಸ ಪರ್ವದ ಎಲ್.ಇ.ಡಿ. ಪ್ರಚಾರ ವಾಹನದಲ್ಲಿನ ಪ್ರಮುಖ ವ್ಯಾಖ್ಯೆ ಜನಸಾಮಾನ್ಯರ ಬಳಿಗೆ ಪಕ್ಷವನ್ನು ಒಯ್ಯಲು ಈ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

ಚುನಾವಣಾ ವಿಷಯಗಳ ವಿಚಾರಕ್ಕೆ ಒತ್ತು ನೀಡುವ ಕಿರುಚಿತ್ರ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ಜನಪರ ಯೋಜನೆ, ಸರ್ಕಾರ ಬಂದಲ್ಲಿ ಕೈಗೊಳ್ಳಬಹುದಾದ ಯೋಜನೆಗಳನ್ನು ಹಾಗೂ ಅಭ್ಯರ್ಥಿಯ ಪರಿಚಯ ಚಿತ್ರಣಗಳನ್ನೊಳ ಗೊಂಡಿರುವ ಪ್ರಚಾರ ವಾಹನದ ಮೂಲಕ ಬಿತ್ತರಿಸಲಾಗುವುದೆಂದು ಹೇಳಿದ್ದಾರೆ.

RELATED ARTICLES  ಸರ್ಕಾರದ ಹಣ ಸ್ವಂತಕ್ಕೆ ಬಳಕೆ: ಕಾರವಾರ ನಗರಸಭೆಯ ದ್ವಿತೀಯ ದರ್ಜೆ ಸಹಾಯಕನಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 8 ಸಾವಿರ ರೂ. ದಂಡ

ವಾಹನದಲ್ಲಿ 10*10 ಎಲ್.ಇ.ಡಿ. ಪರದೆ, ಜನರೇಟರ್, ಪಕ್ಷದ ನಾಯಕರುಗಳ ಫೋಟೋ ಮುಂತಾದವುಗಳನ್ನೊಳಗೊಂಡ ಸೌಕರ್ಯವನ್ನು ಹೊಂದಿರುವುದು.

ಸದ್ರಿ ವಾಹನದ ಮೂಲಕ ವ್ಯಾಪಕವಾದ ಪ್ರಚಾರವನ್ನು ಕೈಗೊಳ್ಳುವ ದಿಶೆಯಲ್ಲಿ ನಗರ ಮತ್ತು ಗ್ರಾಮೀಣ ಭಾಗದ ಪ್ರಚಾರ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.