ಹೊನ್ನಾವರ : ತಾಲೂಕಿನ ಕರ್ಕಿ ನಾಕಾದ ಬಳಿ ಗೋ ಕಳ್ಳ ಸಾಗಾಣೆ ನಡೆಯುತ್ತಿರುವ ಕುರಿತು, ಮಿನಿ ಟ್ರಕ್ ಸವಾರರಿಬ್ಬರ ಮೇಲೆ ಯುವಕರ ಗುಂಪೊಂದು ಹಲ್ಲೇ ನಡೆಸಿದ ಘಟನೆ ವರದಿಯಾಗಿತ್ತು. ಅಂಕೋಲಾದಿಂದ ದನಗಳನ್ನು ಮಿನಿ ಟ್ರಕ್ ನಲ್ಲಿ ಭಟ್ಕಳಕ್ಕೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಗೋ ಕಳ್ಳ ಸಾಗಾಣೆ ನಡೆಯುತ್ತಿರುವ ಅನುಮಾನದಿಂದ ಸ್ಥಳೀಯ ಯುವಕರು ಮಿನಿ ಟ್ರಕ್ ವೊಂದನ್ನು ತಡೆದು ಪರಿಶೀಲಿಸಿದಾಗ, ದನಗಳನ್ನು ಅಮಾನವಿಯವಾಗಿ ತುಂಬಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿ ಯುವಕರ ಗುಂಪು ಟ್ರಕ್ ನಲ್ಲಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ, ಎಂಬುದು ಇವರ ಮೇಲಿನ ಆರೋಪ.
ಹಲ್ಲೆಗೆ ಒಳಗಾದವರು ಭಟ್ಕಳದ ನಿವಾಸಿಗಳೆಂದು ತಿಳಿದು ಬಂದಿದ್ದು ಗಾಯಗೊಂಡವರನ್ನು ಕಾರವಾರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೊನಿ ವಿರುದ್ಧ ಪಿತೂರಿ ಆರೋಪ
ಹೊನ್ನಾವರ ತಾಲೂಕಿನ ಕರ್ಕಿ ನಾಕಾದ ಬಳಿ ಗೋ ಕಳ್ಳ ಸಾಗಾಣೆ ನಡೆಯುತ್ತಿರುವ ಕುರಿತು, ಮಿನಿ ಟ್ರಕ್ ಸವಾರರಿಬ್ಬರ ಮೇಲೆ ಯುವಕರ ಗುಂಪೊಂದು ಹಲ್ಲೇ ನಡೆಸಿದ ಘಟನೆ ವರದಿಯಾಗಿತ್ತು. ಅಂಕೋಲಾದಿಂದ ದನಗಳನ್ನು ಮಿನಿ ಟ್ರಕ್ ನಲ್ಲಿ ಭಟ್ಕಳಕ್ಕೆ ಸಾಗಾಟ ಮಾಡಲಾಗುತ್ತಿದ್ದ ಪ್ರಕರ್ಣ ಚುನಾವಣೆ ಸಂದರ್ಭದಲ್ಲಿ ನಡೆದ ಈ ಘಟನೆಗೆ ಈಗ ರಾಜಕೀಯ ಬಣ್ಣ ಪಡೆದುಕೊಂಡು ಹೊಸ ತಿರುವು ತೆಗೆದುಕೊಂಡಿದ್ದು, ಪೊಲೀಸರು ಜಿಲ್ಲೆಯ ಪ್ರಭಾವಿ ಬಿಜೆಪಿ ಮುಖಂಡರಾದ ಸೂರಜ್ ನಾಯ್ಕ ಸೋನಿ ವಿರುದ್ಧ ಪೊಲೀಸರು 307 ಕೇಸ್ ದಾಖಲಿಸಿದ್ದಾರೆ, ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.
ಈ ಘಟನೆಯ ನಡೆಯುತ್ತಿರುವ ಸಂದರ್ಭದಲ್ಲಿ, ಸೂರಜ್ ನಾಯ್ಕ ಸೋನಿ ಈ ಮಾರ್ಗದಲ್ಲೇ ಸಂಚರಿಸುತ್ತಿದ್ದು, ಘಟನೆಯ ಸ್ಥಳದಲ್ಲಿ ತಮ್ಮ ವಾಹನದಿಂದ ಇಳಿದು ಘಟನೆಯ ಬಗ್ಗೆ ವಿಚಾರಿಸಿ, ಮುಂದೆ ಸಾಗಿದ್ದರು, ಆದರೆ, ಈ ವಿಷಯವನ್ನೇ ಅವರ ರಾಜಕೀಯ ವಿರೋದಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಮುಂದಾಗಿದ್ದು, ವಿನಾಕಾರಣ ತಮ್ಮ ಮುಖಂಡರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ, ಎಂದು ಸೂರಜ್ ನಾಯ್ಕ ಸೋನಿ ಬೆಂಬಲಿಗರು ಆರೋಪಿಸಿದ್ದಾರೆ. ಅಲ್ಲದೇ ಪೊಲೀಸರ ಈ ಕಾರ್ಯವೈಕರಿಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುಮಾಡಿದ್ದಾರೆ , ಎಂದು ತಿಳಿದುಬಂದಿದೆ.
ಇವಿಷ್ಟೇ ಅಲ್ಲದೇ ರಾಜಕೀಯ ದ್ವೇಷವನ್ನು ನಡೆಸುವ ಉದ್ದೇಶದಿಂದ ಪ್ರಭಾವಿ ರಾಜಕಾರಣಿ ಸುರಜ್ ನಾಯ್ಕ ಸೋನಿ ವಿರುದ್ಧವಾಗಿ ಪಿತೂರಿ ನಡೆಸಲಾಗಿದೆ ಎನ್ನಲಾಗಿದ್ದು ಇದು ಅವರ ಬೆಂಬಲಿಗರ ಆಕ್ರೋಷಕ್ಕೆ ಕಾರಣವಾಗಿದ್ದು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸತ್ಯಾಸತ್ಯತೆಯ ನಿಖರ ಮಾಹಿತಿ ಹೊರಬರಬೇಕಾಗಿದೆ. ಈ ರೀತಿಯ ಪಿತೂರಿ ನಡೆಯುವುದಿಲ್ಲ ಹಾಗೂ ಇದೆಲ್ಲವೂ ಅಸಾಧ್ಯ ಎಂಬುದು ಇನ್ನೊಂದು ಕಡೆಯ ಮಾತಾದರೆ ಅನಗತ್ಯವಾಗಿ ತೇಜೋವಧೆಯ ಪ್ರಯತ್ನ ಎಂಬುದು ಮತ್ತೊಬ್ಬರ ಮಾತು.
ಈ ಬಗ್ಗೆ ಅನೇಕ ಪೂರ್ಣ ಮಾಹಿತಿಗಳು ಹೊರಬರಬೇಕಿದ್ದು ಈ ಬಗ್ಗೆ ಮಾಹಿತಿ ಸಂಗ್ರಹ ಕಾರ್ಯ ನಡೆದಿದೆ.. ಜನತೆಯ ಮಾತುಗಳು ಹಾಗೂ ಅನಿಸಿಕೆ ಅಭಿಪ್ರಾಯಗಳನ್ನು ಸಾಮಾನ್ಯ ಹೇಳಿಕೆಗಳನ್ನು ಇಲ್ಲಿ ಪ್ರಕಟಿಸಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ಅಥವಾ ಅಧಿಕೃತ ಜನರ ಹೇಳಿಕೆಯ ನಂತರದಲ್ಲಿ ಪೂರ್ಣ ವರದಿ ಸತ್ವಾಧಾರ ನ್ಯೂಸ್ ನಲ್ಲಿ ಸಿಗಲಿದೆ.
ಪೋಲೀಸ್ ಇಲಾಖೆಯವರು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತೆಯ ವ್ಯವಸ್ಥೆಯನ್ನು ಈಗಾಗಲೇ ಮಾಡಿದ್ದು ಜನತೆ ಸುಖಾ ಸುಮ್ಮನೆ ಗೊಂದಲ ಮಾಡದಂತೆ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳ ಬಗ್ಗೆ ಸೂಕ್ತ ಗಮನ ನೀಡುತ್ತಿದ್ದು ಪರಿಸ್ಥಿತಿ ತಿಳಿಯಾಗಿ ಇರಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ.
ಯಾವುದೇ ರೀತಿಯ ಊಹಾಪೋಹಗಳಿಗೆ ಜನತೆ ಬಗ್ಗದೆ ಸತ್ಯಾಸತ್ಯತೆ ಅರಿಯುವ ವರೆಗೆ ಶಾಂತರೀತಿಯಿಂದ ಸಹಕರಿಸ ಬೇಕು ವಿನಾಕಾರಣ ಗೊಂದಲಗಳು ಬೇಡೆಂಬುದು ಇಲಾಖೆಯ ಹಾಗೂ ಸತ್ವಾಧಾರ ಬಳಗದ ಕಳಕಳಿಯ ಮನವಿ.