ಬೆಂಗಳೂರು: ಆದಾಯ ಮೀರಿ ಆಸ್ತಿ ಸಂಪಾದಿಸಿರುವ ಮಾಹಿತಿ ಆಧರಿಸಿ ವಿವಿಧ ಇಲಾಖೆಯ ಒಂಬತ್ತು ಅಧಿಕಾರಿ ಗಳ ಮನೆ ಮತ್ತು ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

ಬೆಂಗಳೂರು, ಬೆಳಗಾವಿ ಜಿಲ್ಲೆ ಅಥಣಿ, ಉಡುಪಿ, ಕೊಪ್ಪಳ ಜಿಲ್ಲೆ ಗಂಗಾವತಿ, ಕೋಲಾರ ಜಿಲ್ಲೆ ಶ್ರೀನಿವಾಸ ಪುರ, ಚಿಕ್ಕಮಗಳೂರು ಜಿಲ್ಲೆ ಕಡೂರು, ರಾಮನಗರ ಜಿಲ್ಲೆ ಮಾಗಡಿ ಸೇರಿ ಒಟ್ಟು 36 ಸ್ಥಳಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಇದಕ್ಕಾಗಿ ಆಯಾ ಜಿಲ್ಲೆಯ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ತಂಡ ರಚಿಸಲಾಗಿದೆ.

RELATED ARTICLES  ಮನೆ ಮೇಲ್ಚಾವಣಿ ಕುಸಿದು ತೀವ್ರ ಹಾನಿ; ಸ್ಥಳಕ್ಕ ೆ ಗಜಾನನ ಪೈ ಭೇಟಿ

ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಲಾಗಿದೆ. ಶೋಧ ಮುಂದುವರಿದಿದ್ದು, ಪೂರ್ಣಗೊಂಡ ಬಳಿಕ ಅಕ್ರಮ ಆಸ್ತಿಯ ವಿವರ ಬಹಿರಂಗಪಡಿಸಲಾಗುವುದು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

* ಆರ್. ಗಂಗಾಧರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಬಿಬಿಎಂಪಿ (ಘನತಾಜ್ಯ ನಿರ್ವಹಣೆ), ಬೆಂಗಳೂರು

* ರಾಜಶ್ರೀ ಜೈನಾಪುರ, ವಿಶೇಷ ಭೂಸ್ವಾಧೀನಾಧಿಕಾರಿ, ಹಿಪ್ಪರಗಿ ಅಣೆಕಟ್ಟು ಯೋಜನೆ, ಅಥಣಿ, ಬೆಳಗಾವಿ

* ವಿನೋದ್‌ಕುಮಾರ್, ಅಬಕಾರಿ ಉಪ ಅಧೀಕ್ಷಕ, ಉಡುಪಿ

* ಪಿ. ವಿಜಯಕುಮಾರ್, ಸಹಾಯಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಉಪವಿಭಾಗ, ಗಂಗಾವತಿ, ಕೊಪ್ಪಳ ಜಿಲ್ಲೆ

RELATED ARTICLES  ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ಮಲ್ಲಿಕಾರ್ಜುನ ಖರ್ಗೆ

* ಎನ್. ಅಪ್ಪಿ ರೆಡ್ಡಿ, ಸಹಾಯಕ ಎಂಜಿನಿಯರ್, ಗ್ರಾಮೀಣ ನೀರು ಸರಬರಾಜು ಮತ್ತು ಒಳಚರಂಡಿ, ಶ್ರೀನಿವಾಸಪುರ, ಕೋಲಾರ ಜಿಲ್ಲೆ

* ಎ.ಪಿ. ಶಿವಕುಮಾರ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಕಡೂರು, ಚಿಕ್ಕಮಗಳೂರು ಜಿಲ್ಲೆ

* ರಘುನಾಥ, ವೈದ್ಯಕೀಯ ಅಧಿಕಾರಿ, ಬಣವಾಡಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ

* ಎಸ್.ಬಿ. ರುದ್ರ ಪ್ರಸಾದ್, ಸೂಪರಿಂಟೆಂಡಿಗ್‌ ಎಂಜಿನಿಯರ್, ‌ಕೆ.ಜಿ.ಐ.ಡಿ(ವಿಮಾ ಇಲಾಖೆ), ಬೆಂಗಳೂರು

* ಕೆ.ಸಿ. ವಿರೂಪಾಕ್ಷ, ದ್ವಿತೀಯ ದರ್ಜೆ ಸಹಾಯಕ, ಪ್ರಾದೇಶಿಕ ಸಾರಿಗೆ ಕಚೇರಿ,
ಚಿಕ್ಕಮಗಳೂರು