ನೀಳ ಕಾಯ, ಸ್ಪಸ್ತ ಶರೀರ, ಸದೃಢ ಮೈಕಟ್ಟಿನಿಂದ ಕ್ರೀಡಾಪಟು ವಾಗಿ ಹೆಸರು ಮಾಡಿ, ನಂತರದಲ್ಲಿ ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಪ್ರಭಲ ವ್ಯಕ್ತಿತ್ವದ ಹಸನ್ಮುಖೀ ಹಾಗೂ ಜನತೆಯನ್ನು ಪ್ರೀತಿಯಿಂದ ಆದರಿಸಿ ಗೌರವಿಸುವ ವ್ಯಕ್ತಿ ಜಿ.ಪಂ.ಸದಸ್ಯ “ಪ್ರದೀಪ ನಾಯಕ ದೇವರಬಾವಿ”.

ಕ್ಷೇತ್ರ ಬದಲಿಸಿದರೂ ಗೆದ್ದ ಸಾಧನೆ.

ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯ ಸದಸ್ಯರಾಗಿರುವ ಶ್ರೀ ಪ್ರದೀಪ ನಾಯಕ ದೇವರ ಬಾವಿಯವರು 2 ಬಾರಿ ಬೇರೆ ಬೇರೆ ಕ್ಷೇತ್ರಗಳಿಂದ ಜಿ. ಪಂ. ಗೆ ಆಯ್ಕೆಯಾದವರು. 2011 ರಲ್ಲಿ ಗೋಕರ್ಣ ಜಿ. ಪಂ.ಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಿದ ಇವರು 2016 ರಲ್ಲಿ ನಡೆದ ಜಿಲ್ಲಾ ಪಂಚಾಯತಿಯ ಚುನಾವಣೆಯಲ್ಲಿ ಮಿರ್ಜಾನ್ ಕ್ಷೇತ್ರದಿಂದ ಗೆದ್ದು ಸಾಧನೆ ಮಾಡಿದರು. ಕ್ಷೇತ್ರ ಬದಲಾಯಿಸಿ ಗೆಲ್ಲುವ ಬಗ್ಗೆ ಪ್ರದೀಪ ನಾಯಕ ಬೆಂಬಲಿಗರು ‘ಸತ್ಪಾಧಾರ ನ್ಯೂಸ್’ ಜೊತೆಗೆ ಸಂತೋಷದಿಂದ ಹೇಳಿಕೊಂಡರು.

IMG 20180302 WA0024

ನಿರಂತರ ಹೋರಾಟಗಾರ
“ಪ್ರದೀಪ ನಾಯಕ”.

ಹುಟ್ಟು ಹೋರಾಟಗಾರರಾಗಿ ಜನ ಮಾನಸದಲ್ಲಿ ನೆಲೆ ನಿಂತವರಿವರು. ಗೋಕರ್ಣಕ್ಕೆ ಅಗತ್ಯವಾಗಿದ್ದ ನೆಮ್ಮದಿ ಕೇಂದ್ರಕ್ಕೆ ಅನುದಾನದ ಕೊರತೆ ಉಂಟಾದಾಗ ಸ್ವತಃ ತಾವೇ ಮುಂದೆ ನಿಂತು ನೆಮ್ಮದಿ ಕೇಂದ್ರವನ್ನು ಸುಭದ್ರಗೊಳಿಸಿ ಕಟ್ಟಿಸಿದ ಕೀರ್ತಿ ಇವರದು ಎಂಬುದು ಗೋಕರ್ಣದ ವಸಂತ ಭಟ್ಟರ ಮಾತು.
2017 ರಲ್ಲಿ ಗೋಕರ್ಣದ ವಾಟರ ಸಪ್ಲೈ ಬಗ್ಗೆ ನಡೆದ ಜಿಲ್ಲಾ ಪಂಚಾಯತಿಯ 27 ಸಭೆಗಳಿಗೆ ಹಾಜರಾಗಿ ಜನತೆಯ ಜೀವ ಜಲಕ್ಕಾಗಿ ಧ್ವನಿ ಎತ್ತಿದವರು. ಹಿತ್ತಲು ಮಕ್ಕಿಯಿಂದ ಗೋಕರ್ಣವರೆಗೆ ಹೊಸ ಪೈಪಲೈನಗಾಗಿ ಹೋರಾಟ, ತದಡಿಯಿಂದ ಮಾದನಗೇರಿ, ಮಾದನಗೇರಿಯಿಂದ ಹಿತ್ತಲಮಕ್ಕಿವರೆಗೆ ನೀರಿಗಾಗಿ ಹೋರಾಟ ಮಾಡಿದ ಪ್ರದೀಪ ನಾಯಕ ಈ ಘಟನೆಗಳನ್ನು ವಿವರಿಸುತ್ತ ರಾಮ್ ಮನೋಹರ ಹಾಗೂ ಕೃಷ್ಣ ಗೌಡ, ಲಲಿತಾ ಪಟಗಾರ ಇವರೆಲ್ಲರ ಸಹಾಯವನ್ನು ನೆನಪಿಸಿದರು.ಮೊದಲ ಬಾರಿಗೆ ಗೋಕರ್ಣಕ್ಕೆ ನೀರಾವರಿ ವ್ಯವಸ್ಥೆಗೆ ಪ್ರಯತ್ನಿಸಿದ್ದೇನೆ ಎಂಬುದು ಪ್ರದೀಪ ನಾಯಕ ರವರು ತುಸು ಹೆಮ್ಮೆಯಿಂದಲೇ ‘ಸತ್ಪಾಧಾರ ನ್ಯೂಸ’ ಜೊತೆ ಹಂಚಿಕೊಂಡ ಮಾತು. ತದಡಿ ಉಷ್ಣ ಸ್ಥಾವರ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿದ್ದ ಇವರು ಅಲ್ಲಿಂದ ಜನಮಾನಸ ಸೇರಿದವರು.

RELATED ARTICLES  ಶ್ರೀ ಶ್ರೀ ರಾಚಯ್ಯ ಸ್ವಾಮಿಗಳಿಗೆ ಗೋಕರ್ಣ ಗೌರವ.

IMG 20180302 WA0030
ಕ್ರೀಡಾಪಟು

ಪ್ರದೀಪ ನಾಯಕ ದೇವರಬಾವಿಯವರು ಕ್ರೀಡಾಪಟುವಾಗಿಯೇ ಗುರ್ತಿಸಿಕೊಂಡವರು. ವಾಲಿಬಾಲ್, ಕ್ರಿಕೆಟ್, ಕಬಡ್ಡಿ, ಜಾವಲಿನ ಎಸೆತಗಳಲ್ಲಿ ರಾಜ್ಯಮಟ್ಟದ ಕ್ರೀಡಾಪಟುವಾಗಿ ಗುರ್ತಿಸಿಕೊಂಡ ಪ್ರದೀಪ ನಾಯಕರ ಕ್ರೀಡಾಪಟುತ್ವವೇ ಅವರಿಗೆ ಸಾಮಾಜಿಕ ಕ್ಷೇತ್ರದಲ್ಲೂ ಹೆಗ್ಗುರುತು ಎನ್ನಬಹುದು.

ದೇವಾಲಯಗಳ ಬಗ್ಗೆ ಅಪಾರ ಒಲವು .

ಯಾವುದೇ ಜಾತಿ, ಮತ, ಪಂಥಗಳ ದೇವಾಲಯಗಳೇ ಇರಲಿ ಅವುಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಲ್ಲಿ ಪ್ರದೀಪ ನಾಯಕ ಸದಾ ಮುಂದು ಎಂಬುದು ವಿನಾಯಕ ಗೌಡರವರ ಮಾತು. ಗೋಕರ್ಣದ ಗಡಿವಾಳ ಭಟ್ಟದೇವ ದೇವಾಲಯದ ವಿಷಯದಲ್ಲಿ ಗೋಕರ್ಣದ ಕುಮಾರ ಹೆಗಡೆ ಹಾಗೂ ಹಾಲಕ್ಕಿ ಸಮುದಾಯದ ಮಧ್ಯೆ ಎದ್ದಿದ್ದ ಬಿರುಕನ್ನು ಸರಿಪಡಿಸಿ ಹಾಲಕ್ಕಿಗರ ಹಾಗೂ ಕುಮಾರ ಹೆಗಡೆಯವರ ಮನವೊಲಿಸುವ ಪ್ರಯತ್ನ ದಲ್ಲಿ ಯಶಸ್ಸು ಕಂಡವರು ಪ್ರದೀಪ ನಾಯಕ.

ಚಿತ್ರಗೇರಿಯ ಬೀರದೇವ ದೇವಾಲಯ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಜಾಗ ಮಂಜೂರಿ ,ಮುಕ್ರಿ ಸಮಾಜದ ತದಡಿ ಬೇಲೇಕಾನದಲ್ಲಿ ದೇವಾಲಯ ವ್ಯವಸ್ಥೆಗೆ ಪ್ರದೀಪ ನಾಯಕರ ಬೆಂಬಲ ಹಾಗೂ ಸಹಾಯ ಮರೆಯುವಂತಿಲ್ಲ.
ಪಂಚ ಬ್ರಹ್ಮಲಿಂಗ ದೇವಾಲಯಕ್ಕೆ ಸ್ವಂತ ಖರ್ಚಿನಲ್ಲಿ ಮೇಲ್ಛಾವಣಿ, ಗೋಕರ್ಣ ಬಂಡಿಕೇರಿ ದೇವಾಲಯಕ್ಕೆ ಮೇಲ್ಛಾವಣಿ, ಜಿಜ್ಯೂರು ಗಣೇಶೋತ್ಸವ ಗಣಪತಿ ದೇವಾಲಯಕ್ಕೆ ಆರ್ಥಿಕ ಸಹಾಯ, ಬಾವಿಕೊಡ್ಲ ಗಣೇಶೋತ್ಸವ ಸಮಿತಿಗೆ ಸಂಪೂರ್ಣ ನೆಲಹಾಸು, ಹಾರು ಮಾಸ್ಕೇರಿ ಗಣೇಶೋತ್ಸವ ಜಾಗಕ್ಕೆ ಮೇಲ್ಛಾವಣಿಗೆ ಆರ್ಥಿಕ ಸಹಾಯ ನೀಡಿದವರು ಪ್ರದೀಪ ನಾಯಕ.

RELATED ARTICLES  ರಾಮಚಂದ್ರಾಪುರ ಮಠದಿಂದ ಬಾಲಕ, ಬಾಲಕಿಯರಿಗೆ ಗುರುಕುಲ

ಗಂಗಾವಳಿಯ ಅಂಬಿಗರ ಕಾಲನಿಯಲ್ಲಿ ಪೂಜೆ ನಿಂತ ದೇವಾಲಯದಲ್ಲಿ ತನ್ನ ಸ್ನೇಹಿತರ ಸಹಕಾರದಿಂದ ಪುನಃ ಅಷ್ಟಬಂಧ ಹಾಗೂ ಪೂಜಾ ಕಾರ್ಯ ನಡೆಸಿದ ಕೀರ್ತಿ ಪ್ರದೀಪ ನಾಯಕರದು. ಹನೇ ಹಳ್ಳಿ ಚರ್ಚ ರೋಡ್ ವ್ಯವಸ್ಥೆ, ತದಡಿ ದುರ್ಗಾಕ್ಕೆ ಸಂಪೂರ್ಣ ಇಂಟರ್ಲಾಕ್ , ಮಾದನಗೇರಿ ಗೌಡರಮನೆಗೆ ಸುಗ್ಗಿ ಚಪ್ಪರ, ದೇವಣದ ದೇವಾಲಯಕ್ಕೆ ಮೇಲ್ಛಾವಣಿಗೆ ಸಂಪೂರ್ಣ ನೆರವು ನೀಡಿದ್ದಾರೆ.

IMG 20180302 WA0026

ಸ್ವ ಸಹಾಯ ಸಂಘ

ಶಿವಶಕ್ತಿ ವಿವಿದೋದ್ಧೇಶ ಸಹಕಾರಿ ಸಂಘವನ್ನು ಸ್ಥಾಪಿಸುವ ಮೂಲಕ ಗೋಕರ್ಣ, ಕುಮಟಾ, ಬಾಡದ ಗುಡೇ ಅಂಗಡಿಯಲ್ಲಿ ತನ್ನ ಶಾಖೆಯನ್ನು ವಿಸ್ತರಿಸಿ ಸುಮಾರು 34 ಸಾವಿರ ಮಹಿಳೆಯವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಹಾಗೂ ಗ್ರಹೋಪಯೋಗಿ ವಸ್ತು ತಯಾರಿಕೆಗೆ ನೆರವು ನೀಡಲಾಗಿದೆ. 2000ಕ್ಕಿಂತ ಹೆಚ್ಚಿನ ಸಂಘಗಳು ಈ ಬಗ್ಗೆ ಕಾರ್ಯ ಚಟುಟಿಕೆ ನಡೆಸುತ್ತಿದೆ. ಮಾರ್ಕೆಟಿಂಗ್ ಹಾಗೂ ಉತ್ಪಾದನೆಗೆ ಆರ್ಥಿಕ ನೆರವು ನೀಡಿ ಜನ ಮಾನಸದಲ್ಲಿ ಈ ಸಹಕಾರಿ ಸಂಘ ನೆಲೆ ನಿಂತಿರುವುದನ್ನು ಕಾಣಬಹುದು.
ಪ್ರದೀಪ ನಾಯಕ ರವರು ಕ್ರೀಡೆ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸೇವಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಸರಳ ವ್ಯಕ್ತಿತ್ವದ ವ್ಯಕ್ತಿ ಎಂಬುದು ಜನತೆಯ ಅಭಿಮತ .

ಈ ಬಾರಿಯ ಜೆ.ಡಿ.ಎಸ್.ನ ಕುಮಟಾ ಹೊನ್ನಾವರ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಇವರಿಗೆ ಎಲ್ಲೆಡೆಯಿಂದ ಬೆಂಬಲಗಳು ವ್ಯಕ್ತವಾಗಿ ಶುಭ ಹಾರೈಕೆಗಳು ಬರತೊಡಗಿವೆ.

ಸಹಕಾರ : ಜಯದೇವ ಬಳಗಂಡಿ.
ವರದಿ : “ಸತ್ವಾಧಾರಾ ನ್ಯೂಸ್”.