ಗೋಮಾತೆ ಎಷ್ಟು ಮಾನ್ಯವಾದದ್ದು ಎಂದು ವಿಶ್ವಕ್ಕೆ ಪ್ರಸ್ತುತ ಪಡಿಸುವುದರ ಮೂಲಕ ಗೋವಿರೋಧಿಗಳಿಗೆ ದಿಟ್ಟ ಉತ್ತರ ನೀಡಲೇಬೇಕು ಎಂಬ ಉದ್ದೇಶದೊಂದಿಗೆ ಬೆಂಗಳೂರಿನಲ್ಲಿ ಅಭಯಾಕ್ಷರದ ಬೃಹತ್ ಆಂದೋಲನಕ್ಕೆ
ಶನಿವಾರ ಬೆಳಿಗ್ಗೆ 10:00 ಗಂಟೆಗೆ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ನಾಡೋಜ ಎಮ್‌ ಚಿದಾನಂದ ಮೂರ್ತಿ ಉದ್ಘಾಟನೆ ಮಾಡಿದರು.

 

ವೇದಿಕೆಯಲ್ಲಿ ಸ್ವಾಮಿ ಚಂದ್ರೇಶಾನಂದ ಜಿ ಮಹಾರಾಜ್, ರಾಮಕೃಷ್ಣ ವಿವೇಕ ಸಾಧನಾ ಮಠ.

ಶ್ರೀ ಆರೂಢಭಾರತಿ ಸ್ವಾಮೀಜಿ, ಸಿದ್ಧಾರೂಡ ಮಿಶನ್ ಆಶ್ರಮ.
ಶ್ರೀ ಶಂಕರ ಗುರೂಜಿ, ವನಸಿರಿ ಪ್ರತಿಷ್ಠಾನ.
ಶ್ರೀ ರಮಣಾನಂದ ಸ್ವಾಮೀಜಿ,
ಶ್ರೀ ಆತ್ಮಾನಂದ ಸ್ವಾಮೀಜಿ, ವೇದಾಂತಾಶ್ರಮ, ಕಂಬೀಪುರ.

ಶ್ರೀ ರವಿ ಸುಬ್ರಹ್ಮಣ್ಯ, ಶಾಸಕರು

ಬ. ಲ. ಸುರೇಶ್

ಸುರೇಶ್ ಸಾಗರ್ ಇದ್ದರು.

ನಾಡಿನ ವಿವಿಧ ಸಂತರ ನೇತೃತ್ವದಲ್ಲಿ ಬೆಂಗಳೂರಿನಾದ್ಯಂತ ಮನೆ ಮನೆಗೆ ತೆರಳಿ ಗೋವಿನ ಮಹತ್ವವನ್ನು ವಿವರಿಸಿ, ಅವುಗಳನ್ನು ಉಳಿಸಲು ನಾವು ಮಾಡಬಹುದದಾದ ಕಾರ್ಯಗಳನ್ನು ತಿಳಿಸಿ, ಅಭಯಾಕ್ಷರಕ್ಕೆ ಮನೆಯ ಪ್ರತಿ ಸದಸ್ಯನ ಸಹಿ ಪಡೆಯುವ ಮೂಲಕ ಅಭಿಯಾನ ನಡೆಯಲಿದೆ.