ಬೆಂಗಳೂರು: ಬರೋಡ ಬ್ಯಾಂಕ್‌ಗೆ ಸಾಲ ಮರುಪಾವತಿ ಮಾಡದೆ ವಂಚನೆ ಮಾಡಿದ ಆರೋಪದಲ್ಲಿ ಖ್ಯಾತ ನಟಿ ಸಿಂಧು ಮೆನನ್‌ ವಿರುದ್ಧ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗೆ 36 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಬ್ಯಾಂಕ್‌ ಮ್ಯಾನೇಜರ್‌ ನೀಡಿರುವ ದೂರಿನಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇನ್ನುಳಿದ ಆರೋಪಿಗಳಾದ ಸಿಂಧು ಸಹೋದರ ಮನೋಜ್‌ ಕಾರ್ತೀಕೇಯನ್‌ ವರ್ಮಾ , ಉದ್ಯಮಿಯೊಬ್ಬರ ಪುತ್ರಿ ನಾಗಶ್ರೀ ಶಿವಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 15-02-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಬ್ಯಾಂಕ್‌ ಮ್ಯಾನೇಜರ್‌ ರಮೇಶ್‌ ಅವರು ಜನವರಿ 10 ರಂದು ದಾಖಲಿಸಿದ ದೂರಿನನ್ವಯ ಪೊಲೀಸರು ತನಿಖೆಗಿಳಿದಿದ್ದಾರೆ.

ಸಿಂಧು ಅವರು ಸದ್ಯ ಅಮೆರಿಕಾದಲ್ಲಿ ಇದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

RELATED ARTICLES  ಲಂಕೇಶ್ ಪತ್ರಿಕೆ ಮುಂದುವರೆಸುವ ಬಗ್ಗೆ ಲಂಕೇಶ್ ಕುಟುಂಬದಲ್ಲಿಯೇ ಭಿನ್ನಾಭಿಪ್ರಾಯ!